»   » 'ಬೀರ್ ಬಲ್' ಸಿನಿಮಾಗೆ ಹಾಡು ಬರೆಯುವ ಅವಕಾಶ

'ಬೀರ್ ಬಲ್' ಸಿನಿಮಾಗೆ ಹಾಡು ಬರೆಯುವ ಅವಕಾಶ

Posted By:
Subscribe to Filmibeat Kannada

ತುಂಬ ಜನ ಯುವ ಸಾಹಿತಿಗಳು ಈಗ ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಮ್ಮ ಜೊತೆಗೆ ಇರುವ ಅನೇಕರು ಹಾಡು ಬರೆಯುವ ಹವ್ಯಾಸ ಹೊಂದಿರುತ್ತಾರೆ. ಒಳ್ಳೆ ಒಳ್ಳೆಯ ಸಾಲುಗಳನ್ನು ಬರೆಯುವ ಕೆಲವರಿಗೆ ಒಳ್ಳೆಯ ಅವಕಾಶಗಳು ಮಾತ್ರ ಸಿಕ್ಕಿರುವುದಿಲ್ಲ. ಆದರೆ ಈಗ ಅಂತಹ ಯುವ ಚಿತ್ರಸಾಹಿತಿಗಳಿಗೆ ಒಂದು ಸುವರ್ಣಾವಕಾಶ ಬಂದಿದೆ.

ಕನ್ನಡದ ಹೊಸ ಸಿನಿಮಾ 'ಬೀರ್ ಬಲ್' ಚಿತ್ರಕ್ಕೆ ಹಾಡು ಬರೆಯುವ ಅವಕಾಶ ಇಲ್ಲಿದೆ. ಶ್ರೀನಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕಾಗಿ ಹೊಸ ಗೀತರಚನೆಕಾರರನ್ನು ಹುಡಕಲಾಗುತ್ತಿದೆ.

''ಸ್ಕೂಲ್, ಕಾಲೇಜ್ ನಲ್ಲಿ ಲವ್ ಲೆಟರ್ ಗಳನ್ನ ಬರೆದಿರುವ ಎಲ್ಲಾ ಪುಣ್ಯಾತ್ಮರಿಗೂ ಇಲ್ಲೊಂದು ಸದಾವಕಾಶ. ಆಗ ನಿಮ್ಮ ಹೀರೋಯಿನ್ ಮೇಲೆ ಹಾಡು ಬರೆದಿದ್ರಿ ಈಗ ನಮ್ಮ ಹೀರೋಯಿನ್ ಮೇಲೆ ಹಾಡು ಬರಿಬೇಕು.. ತುಂಬಾ ತರಲೆನೆಸ್ ನಿಮ್ಮಲ್ಲಿದೆ ಅಂತ ಅನ್ನಿಸಿದ್ದಲ್ಲಿ, ನಿಮ್ಮ ಪ್ರತಿಭೆಯನ್ನು ನಾಲ್ಕು ಸಾಲುಗಳಲ್ಲಿ ನಮಗೆ (mgcinemas@gmail.com) inbox ಮಾಡಿ'' ಎಂದು ಚಿತ್ರತಂಡ ಒಂದು ಆಫರ್ ನೀಡಿದೆ.

Director mg srinivas calls lyricists auditions for birbal trilogy kannada movie

'ಟೋಪಿವಾಲ' ಹಾಗೂ 'ಶ್ರೀನಿವಾಸ ಕಲ್ಯಾಣ' ಸಿನಿಮಾಗಳ ನಂತರ ಮತ್ತೆ ಶ್ರೀನಿ ಈ ಚಿತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಿರ್ದೇಶಕನು ಅವರೇ ನಾಯಕನು ಅವರೇ ಆಗಿದ್ದಾರೆ. ರುಕ್ಮಿಣಿ ಈ ಸಿನಿಮಾದಲ್ಲಿ ಶ್ರೀನಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

English summary
kannada director mg srinivas calls lyricists auditions for birbal trilogy kannada movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X