ಪತ್ರಕರ್ತೆ ಜೊತೆ ಟೋಪಿವಾಲ ನಿರ್ದೇಶಕ ಶ್ರೀನಿ ವಿವಾಹ
ಕನ್ನಡದ ಪ್ರತಿಭಾವಂತ ನಿರ್ದೇಶಕ ಶ್ರೀನಿ ಅಲಿಯಾಸ್ ಎಮ್ ಜೆ ಶ್ರೀನಿವಾಸ್ ಮದುವೆಗೆ ಸಿದ್ಧವಾಗಿದ್ದಾರೆ. 'ಶ್ರೀನಿವಾಸ ಕಲ್ಯಾಣ' ಸಿನಿಮಾ ನಿರ್ದೇಶನ ಮಾಡಿದ್ದ ಇವರು ಈಗ ತಮ್ಮ ಕಲ್ಯಾಣ ಮಾಡಿಕೊಳ್ಳುತ್ತಿದ್ದಾರೆ.
ಪತ್ರಕರ್ತೆ ಶ್ರುತಿ ಎಂಬುವವರ ಜೊತೆಗೆ ಶ್ರೀನಿ ವಿವಾಹ ನಡೆಯಲಿದೆ. ಶ್ರೀನಿ ಹಾಗೂ ಶ್ರುತಿ ಇಬ್ಬರದ್ದು ಲವ್ ಮ್ಯಾರೇಜ್. ತುಂಬ ವರ್ಷಗಳಿಂದ ಇಬ್ಬರು ಪರಿಚಯ ಹೊಂದಿದ್ದು, ಒಳ್ಳೆಯ ಸ್ನೇಹ ಇತ್ತು. ಬಳಿಕ ಆ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆಯ ಹಂತಕ್ಕೆ ಬಂದಿದೆ.
ಶ್ರೀನಿ ಹಾಗೂ ಶ್ರುತಿ ಪ್ರೀತಿಗೆ ಇಬ್ಬರ ಮನೆಯಲ್ಲಿ ಸಮ್ಮತಿ ಸೂಚಿಸಿ, ಮದುವೆ ಮಾಡುತ್ತಿದ್ದಾರೆ. ಪತ್ರಕರ್ತೆ ಶ್ರುತಿ ಒಳ್ಳೆಯ ಬರಹಗಾರ್ತಿಯಾಗಿದ್ದು, ಅವರ ಬರವಣಿಗೆ ಶ್ರೀನಿಗೆ ತುಂಬ ಇಷ್ಟವಂತೆ.

ಇದೇ ತಿಂಗಳ 30 ರಂದು ಶ್ರೀನಿ ಹಾಗೂ ಶ್ರುತಿ ವಿವಾಹ ನೆರವೇರಲಿದೆ. ಮೈಸೂರಿನಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿದೆ.
ಅಂದಹಾಗೆ, ನಟ ಉಪೇಂದ್ರ ಜೊತೆಗೆ ಕೆಲಸ ಮಾಡುತ್ತಿದ್ದ ಶ್ರೀನಿ 'ಟೋಪಿವಾಲ' ಸಿನಿಮಾದ ಮೂಲಕ ನಿರ್ದೇಶಕರಾದರು. ಬಳಿಕ 'ಶ್ರೀನಿವಾಸ ಕಲ್ಯಾಣ' ಹಾಗೂ 'ಬೀರ್ ಬಲ್' ಚಿತ್ರಗಳಲ್ಲಿ ನಟನೆ ಹಾಗೂ ನಿರ್ದೇಶನ ಎರಡನ್ನು ಮಾಡಿದರು. ಸದ್ಯ, 'ರಂಗನಾಯಕಿ' ಚಿತ್ರದಲ್ಲಿ ಇವರು ನಟಿಸುತ್ತಿದ್ದಾರೆ.


Click it and Unblock the Notifications











