ಅಷ್ಟಕ್ಕೂ, 'ಕುರುಕ್ಷೇತ್ರ' ಚಿತ್ರದ ಕಥೆ ಏನು.?
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಚಿತ್ರಕ್ಕೆ 'ಕುರುಕ್ಷೇತ್ರ' ಅಂತ ಶೀರ್ಷಿಕೆ ಫಿಕ್ಸ್ ಆಗಿದೆ. 'ಕುರುಕ್ಷೇತ್ರ'... ಹೆಸರಿಗೆ ತಕ್ಕ ಹಾಗೆ ಇದು ಮಹಾಭಾರತದ ಕುರುಕ್ಷೇತ್ರ ಯುದ್ಧದ ಸುತ್ತ ಹೆಣೆದಿರುವ ಕಥೆ. ಸಿನಿಮಾದಲ್ಲಿ ದರ್ಶನ್ ದುರ್ಯೋಧನ ಪಾತ್ರದಲ್ಲಿ ಮಿಂಚಲಿರುವುದರಿಂದ, ಇದು ದುರ್ಯೋಧನನ ದೃಷ್ಟಿಕೋನದ 'ಕುರುಕ್ಷೇತ್ರ' ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ..... 'ಮಹಾಭಾರತ'ವೆಂಬ ಮಹಾಕಾವ್ಯದಲ್ಲಿ 'ಕುರುಕ್ಷೇತ್ರ' ಅಧ್ಯಾಯ ಬಹಳ ವಿಸ್ತಾರವಾದುದು. ಅದನ್ನೆಲ್ಲವನ್ನ ತೆರೆಮೇಲೆ ಕಟ್ಟಿಕೊಡುವಲ್ಲಿ ಚಿತ್ರತಂಡ ಯಶಸ್ವಿ ಆಗಬಹುದೇ.? 'ಕುರುಕ್ಷೇತ್ರ' ಚಿತ್ರದಲ್ಲಿ ಯಾವೆಲ್ಲ ಪರ್ವಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂಬುದರ ಬಗ್ಗೆ ನಿರ್ದೇಶಕ ನಾಗಣ್ಣ ವಿವರಿಸಿದ್ದಾರೆ. ಮುಂದೆ ಓದಿರಿ....

'ಕುರುಕ್ಷೇತ್ರ' ಚಿತ್ರದ ಕಥೆ ಏನು.?
ಕುರುಕ್ಷೇತ್ರದ ಮೊದಲು ಮತ್ತು ನಂತರದ ಕಥೆಯನ್ನ 'ಕುರುಕ್ಷೇತ್ರ' ಸಿನಿಮಾದಲ್ಲಿ ಹೇಳಲಿದ್ದಾರಂತೆ ನಿರ್ದೇಶಕ ನಾಗಣ್ಣ.

ಸಿನಿಮಾದ ಹೈಲೈಟ್ಸ್ ಏನು.?
'ಕುರುಕ್ಷೇತ್ರ' ಯುದ್ಧ ಯಾಕೆ ಅನಿವಾರ್ಯವಾಯಿತು, ಯುದ್ಧ ಹೇಗೆ ನಡೆಯಿತು, ಯುದ್ಧದ ಬಳಿಕ ಏನಾಯಿತು ಎನ್ನುವುದೇ 'ಕುರುಕ್ಷೇತ್ರ' ಚಿತ್ರದ ಹೈಲೈಟ್.

ನಮ್ಮ ಕಥೆಗೆ ಚೌಕಟ್ಟು ಇದೆ
''ಕುರುಕ್ಷೇತ್ರ'ವನ್ನು ಎಲ್ಲಿಂದ ಬೇಕಿದ್ದರೂ ಆರಂಭಿಸಬಹುದು. ದ್ರೌಪದಿಯ ಶಪಥದಿಂದ, ಶ್ರೀಕೃಷ್ಣನ ಸಂಧಾನದಿಂದ, ಪಾಂಡವರ ವನವಾಸದಿಂದ - ಹೀಗೆ ಎಲ್ಲಿಂದ ಶುರು ಮಾಡಿದರೂ ಕತೆ ಕುರುಕ್ಷೇತ್ರಕ್ಕೆ ಬಂದು ನಿಲ್ಲುತ್ತದೆ. ಹೀಗಾಗಿ, ನಮ್ಮ ಕಥೆ ಇಷ್ಟೇ ಎಂದು ನಾವು ಒಂದು ಚೌಕಟ್ಟು ಹಾಕಿಕೊಂಡಿದ್ದೇವೆ'' ಎಂದು ವಿವರಿಸುತ್ತಾರೆ ನಿರ್ದೇಶಕ ನಾಗಣ್ಣ.

ಆಗಸ್ಟ್ 6 ರಂದು ಅದ್ಧೂರಿ ಮುಹೂರ್ತ
'ಕುರುಕ್ಷೇತ್ರ' ಚಿತ್ರದ ಮುಹೂರ್ತ ಆಗಸ್ಟ್ 6 ರಂದು ಅದ್ಧೂರಿಯಾಗಿ ನೆರವೇರಲಿದೆ. ಅಂದೇ, ದುರ್ಯೋಧನನ ಫಸ್ಟ್ ಲುಕ್ ಬಿಡುಗಡೆ ಆಗಲಿದೆ.


Click it and Unblock the Notifications











