twitter
    For Quick Alerts
    ALLOW NOTIFICATIONS  
    For Daily Alerts

    ''ಸಿನಿಮಾ ಸಾಮೂಹಿಕ ಕಲೆಯಾಗಿಯೇ ಉಳಿಯಬೇಕು ''- ನಾಗತಿಹಳ್ಳಿ ಚಂದ್ರಶೇಖರ್

    |

    ಸಿನಿಮಾ ಎನ್ನುವುದು ಸಾಮೂಹಿಕ ಕಲೆ. ಅದು ಹಾಗೆಯೇ ಉಳಿದುಕೊಳ್ಳಬೇಕು ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ತಮ್ಮ 'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

    ಈಗ ಸಿನಿಮಾದ ಚಿತ್ರೀಕರಣದ ವೇಳೆ ಶಾಟ್ ಇದ್ದಾಗ ಮಾತ್ರ ನಿರ್ದೇಶಕರು ನಟರು ಜೊತೆಗೆ ಇರುತ್ತಾರೆ. ಸಂಭಾಷಣೆ ಇಲ್ಲದೆ ಇದ್ದರೆ ನಾಯಕ, ನಾಯಕಿ, ನಿರ್ದೇಶಕರು ಅವರವರ ಪಾಡಿಗೆ ಕ್ಯಾರಾವ್ಯಾನ್ ಗೆ ಹೋಗುತ್ತಾರೆ. ಆದರೆ, ಹೀಗೆ ಆಗಬಾರದು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಕನಸಿನ ಕನಸು ಕತೆಗೆ ಟೈಟಲ್ ಹುಡುಕುತ್ತಿರುವ ನಾಗತಿಹಳ್ಳಿಕನಸಿನ ಕನಸು ಕತೆಗೆ ಟೈಟಲ್ ಹುಡುಕುತ್ತಿರುವ ನಾಗತಿಹಳ್ಳಿ

    ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಕೂಡ ಮ್ಯೂಸಿಕ್ ಎಲ್ಲಿಯೋ ತಯಾರಾಗುತ್ತದೆ. ಅದಕ್ಕೆ ಸಾಹಿತ್ಯ ಎಲ್ಲಿಯೋ ಬರೆಯುತ್ತಾರೆ. ಹಾಡನ್ನು ಮತ್ತೆಲೋ ಹಾಡುತ್ತಾರೆ. ಸಾಹಿತ್ಯ ಬರೆದವರಿಗೆ ಗಾಯಕರ ಪರಿಚಯ ಇರುವುದಿಲ್ಲ, ಮ್ಯೂಸಿಕ್ ಡೈರೆಕ್ಟರ್ ಲಿರಿಕ್ ರೈಟರ್ ಅನ್ನು ನೋಡಿರುವುದಿಲ್ಲ ಈ ರೀತಿ ಆಗಬಾರದು ಎನ್ನುವುದು ಮೇಷ್ಟ್ರು ಅಭಿಪ್ರಾಯ.

    Director Nagathihalli Chandrashekar Spoke About Present Filmmaking Situation

    ''ನಾವು ಒಬ್ಬರೊಬ್ಬರು ಮಾತನಾಡುವುದನ್ನೇ ಕಡಿಮೆ ಮಾಡಿದ್ದೇವೆ. ಇದು ಈ ಕಾಲದ ದೊಡ್ಡ ದುರಂತ. ವಿಜಯ ಭಾಸ್ಕರ್, ಇಳಯರಾಜ, ಹಂಸಲೇಖರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಆಗ ಒಂದು ಸ್ಟುಡಿಯೋದಲ್ಲಿ ಎಷ್ಟೋ ಜನ ಮ್ಯೂಸಿಕ್ ನುಡಿಸುತ್ತಿದ್ದರು. ಜಾನಕಿ, ಎಸ್ ಪಿ ಬಿ ಅಲ್ಲಿಯೇ ಹಾಡುತ್ತಿದ್ದರು ಅದೆಲ್ಲ ನೆನೆಸಿಕೊಂಡರೆ ತುಂಬ ಖುಷಿ ಆಗುತ್ತದೆ.''

    ಫಿಲ್ಮ್ ಫೆಸ್ಟಿವಲ್ ನಲ್ಲಿ 'ಸೀತಾರಾಮ ಕಲ್ಯಾಣ' ? ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆಫಿಲ್ಮ್ ಫೆಸ್ಟಿವಲ್ ನಲ್ಲಿ 'ಸೀತಾರಾಮ ಕಲ್ಯಾಣ' ? ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ

    ''ಇದನ್ನೆಲ್ಲ ಮೀರಿ ಮತ್ತೆ ನಮ್ಮ ನಡುವೆ ಸ್ನೇಹ ಬರಬೇಕು, ಮತ್ತೆ ಒಟ್ಟಾಗಿ ಸಿನಿಮಾ ಮಾಡಬೇಕು ಅಂತ ನಾನು ಪ್ರಯತ್ನ ಮಾಡುತ್ತೇನೆ. ಸಿನಿಮಾದಲ್ಲಿ ಎಲ್ಲರೂ ಸೇರಿದರೆ ಮಾತ್ರ ಅದ್ಬುತ ಆಗುತ್ತದೆ, ಅಪರಿಚಿತರಾದರೆ ಅಲ್ಲ.'' ಎಂದು ನಾಗತಿಹಳ್ಳಿ ಹೇಳಿದ್ದಾರೆ.

    English summary
    Director Nagathihalli Chandrasheka spoke about present filmmaking situation.
    Tuesday, December 10, 2019, 14:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X