ಸಿದ್ಧಾರ್ಥ ಮಾಡಿದ್ದ ಸಹಾಯ ನೆನೆದ ನಾಗತಿಹಳ್ಳಿ ಚಂದ್ರಶೇಖರ್

ಕಾಫಿ ಕಿಂಗ್ ಸಿದ್ಧಾರ್ಥ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಹ ಸಿದ್ಧಾರ್ಥ ಸಹಾಯವನ್ನು ನೆನೆದಿದ್ದಾರೆ.

ಟ್ವಿಟ್ಟರ್ ನಲ್ಲಿ ಸಿದ್ಧಾರ್ಥ ಬಗ್ಗೆ ಬರೆದುಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ''ಗೆಳೆಯರೇ, ಗೌತಮನ ಹೆಸರಿಟ್ಟುಕೊಂಡು ನೀವು ಹೀಗೆ ಮಾಡಬಹುದೇ? ಬದುಕಲು ನೂರು ದಾರಿಗಳಿರಲಿಲ್ಲವೇ?'' ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಸಿದ್ಧಾರ್ಥ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಕೂಡ ಒಮ್ಮೆ ಸಿದ್ಧಾರ್ಥ ಅವರ ಸಹಾಯ ಪಡೆದಿದ್ದರಂತೆ. 'ಅಮೃತಧಾರೆ' ಸಿನಿಮಾ ಚಿತ್ರೀಕರಣವನ್ನು ಗ್ಲೊಬಲ್ ವಿಲೇಜ್ ನಲ್ಲಿ ಮಾಡಬೇಕಾಗಿತ್ತು. ಆಗ ಅದರ ವ್ಯವಸ್ಥೆಯನ್ನು ಸಿದ್ದಾರ್ಥ ಮಾಡಿಕೊಟ್ಟಿದ್ದರು.

Director Nagathihalli Chandrashekhar Condolences For Siddharth Death

ಸಿನಿಮಾ ಚಿತ್ರೀಕರಣಕ್ಕಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದ ಸಿದ್ಧಾರ್ಥ ಅದಕ್ಕೆ ಯಾವುದೇ ಹಣ ತೆಗೆದುಕೊಳ್ಳಲಿಲ್ಲವಂತೆ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಿನಿಮಾ ಮೇಲಿನ ಪ್ರೀತಿಯಿಂದ ಉಚಿತವಾಗಿ ಈ ಅವಕಾಶ ನೀಡಿದ್ದರಂತೆ.

ಈ ರೀತಿ ತಮಗೆ ಸಹಾಯ ಮಾಡಿದ್ದ ಸಿದ್ಧಾರ್ಥರನ್ನು ನಾಗತಿಹಳ್ಳಿ ಚಂದ್ರಶೇಖರ್ ನೆನಪು ಮಾಡಿಕೊಳ್ಳುವ ಮೂಲಕ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

More from Filmibeat

English summary
Kannada Director Nagathihalli Chandrashekhar condolences for cafe coffee day owner Siddharth death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X