»   » ದಿ.ಸುಧೀರ್ ಪುತ್ರನಿಗೆ ಇದೀಗ ಅದೃಷ್ಟವೋ ಅದೃಷ್ಟ!

ದಿ.ಸುಧೀರ್ ಪುತ್ರನಿಗೆ ಇದೀಗ ಅದೃಷ್ಟವೋ ಅದೃಷ್ಟ!

Posted By:
Subscribe to Filmibeat Kannada

ಕಲಾ ಬದುಕಿನಲ್ಲೇ ಹುಟ್ಟಿ ಬೆಳೆದ ದಿವಂಗತ ಸುಧೀರ್ ಪುತ್ರ ನಂದಕಿಶೋರ್ ಈವೊಂದು ದಿನಕ್ಕೋಸ್ಕರ ವರ್ಷಗಳಿಂದ ಕಾಯುತ್ತಿದ್ದರೇನೋ. ನಟನೆಗಿಂತ ನಿರ್ದೇಶನದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ನಂದಕಿಶೋರ್, ಒಂದು ಚಾನ್ಸ್ ಗಾಗಿ ಒಂದ್ಕಾಲದಲ್ಲಿ ಎಲ್ಲರ ಮನೆ ಮುಂದೆ ಕಾಯುತ್ತಿದ್ದರು.

ಕಿಚ್ಚ ಸುದೀಪ್ ಗರಡಿಗೆ ಬಂದ ಮೇಲೆ ಅಲ್ಲೇ ಸಹಾಯಕ ನಿರ್ದೇಶಕನಾಗಿ ಕ್ಲಾಪ್ ಬೋರ್ಡ್ ಹಿಡಿದ ನಂದಕಿಶೋರ್ ಇದೀಗ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಿರ್ದೇಶಕ.

ದಾರಿ ತೋರಿಸಿದ ಗುರುಗಳಿಗೆ ಆಕ್ಷನ್ ಕಟ್ ಹೇಳುತ್ತಿರುವ ನಂದಕಿಶೋರ್, ಸದ್ಯ 'ರನ್ನ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಯುಗಾದಿ ಹಬ್ಬಕ್ಕೆ 'ರನ್ನ' ಚಿತ್ರವನ್ನ ತೆರೆಗೆ ತರುವ ನಿಟ್ಟಿನಲ್ಲಿ ಭರದಿಂದ ಚಿತ್ರೀಕರಣ ನಡೆಸುತ್ತಿದ್ದಾರೆ.

Director Nandakishore is busy with Handful of movies

'ರನ್ನ' ಮುಗೀತಾ ಬರ್ತಿದೆ. ಮುಂದೇನು ಅಂತ ಯೋಚಿಸುವುದಕ್ಕೂ ನಂದಕಿಶೋರ್ ಬಳಿ ಪುರುಸೊತ್ತಿಲ್ಲ. ಅಷ್ಟರಮಟ್ಟಿಗೆ ಕೈತುಂಬಾ ಪ್ರಾಜೆಕ್ಟ್ ಗಳನ್ನ ಇಟ್ಟುಕೊಂಡಿದ್ದಾರೆ ಈ ಪ್ರತಿಭಾನ್ವಿತ ನಿರ್ದೇಶಕ. ['ಆಕ್ಷನ್ ಕ್ವೀನ್' ಆಗ್ತಾರೆ ರಾಧಿಕಾ ಮೇಡಂ]

ಲವ್ಲಿ ಸ್ಟಾರ್ ಪ್ರೇಮ್ ಗಾಗಿ ನಂದಕಿಶೋರ್ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದರೊಂದಿಗೆ ರಾಧಿಕಾ ಕುಮಾರಸ್ವಾಮಿ ಅವರನ್ನ ಆಕ್ಷನ್ ಕ್ವೀನ್ ಮಾಡುವ ಹಂಬಲದೊಂದಿಗೆ ಒಂದು ಆಕ್ಷನ್ ಲವ್ ಸ್ಟೋರಿಯನ್ನ ರೆಡಿಮಾಡುತ್ತಿದ್ದಾರೆ. ಇದೇ ಗ್ಯಾಪ್ ನಲ್ಲಿ 'ಬಹದ್ದೂರ್' ಹುಡುಗ ಧೃವ ಸರ್ಜಾಗೆ ತೆಲುಗಿನ ಚಿತ್ರವೊಂದನ್ನ ರೀಮೇಕ್ ಮಾಡಿ ಕೊಡುವುದಾಗಿಯೂ ಮಾತು ಕೊಟ್ಟಿದ್ದಾರೆ. [ರೀಮೇಕ್ ಗೆ ಕೈಹಾಕಿದರೆ ಸ್ವಮೇಕ್ ಕಿಂಗ್ ಧ್ರುವ ಸರ್ಜಾ?]

Director Nandakishore is busy with Handful of movies

ಒಮ್ಮೆಲೆ ಮೂರ್ಮೂರು ಪ್ರಾಜೆಕ್ಟ್ ಗಳನ್ನ ಒಪ್ಪಿಕೊಂಡಿರುವ ನಂದಕಿಶೋರ್, 'ರನ್ನ' ಮುಗಿದ ಬಳಿಕ ಯಾವುದಕ್ಕೆ ಚಾಲನೆ ನೀಡಲಿದ್ದಾರೆ ಅನ್ನುವುದು ಸದ್ಯಕ್ಕೆ ಸಸ್ಪೆನ್ಸ್. ನಿರ್ದೇಶಕರು ನಟ-ನಟಿಯರ ಕಾಲ್ ಶೀಟ್ ಗಾಗಿ ಕಾಯುವ ಪರಿಸ್ಥಿತಿ ಇತ್ತು. ಆದರೀಗ, ಮೂವರು ಬಿಗ್ ಸ್ಟಾರ್ ಗಳು ನಿರ್ದೇಶಕರ ಕಾಲ್ ಶೀಟ್ ಗಾಗಿ ಕಾಯುವ ಕಾಲ ಬಂದಿದೆ. ಅದೃಷ್ಟ ಹೊದ್ದುಕೊಂಡು ಬಂದರೆ ಹೀಗೆ....(ಏಜೆನ್ಸೀಸ್)

English summary
Actor turned Director Nandakishore has signed big projects with Radhika Kumaraswamy, Lovely Star Prem and Dhruva Sarja. With three films in hand, As of now, it is still unclear which one would Nandakishore choose after Sudeep starrer 'Ranna'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada