»   » ಬಾಲಿವುಡ್ಡಿಗೆ ಹಾರಲಿದ್ದಾರೆ 'ರನ್ನ'ನ ಚಿನ್ನದ ನಿರ್ದೇಶಕ

ಬಾಲಿವುಡ್ಡಿಗೆ ಹಾರಲಿದ್ದಾರೆ 'ರನ್ನ'ನ ಚಿನ್ನದ ನಿರ್ದೇಶಕ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸದ್ಯದ ಬಹುಬೇಡಿಕೆಯ ನಿರ್ದೇಶಕ ಯಾರು ಅಂದ್ರೆ, ಎಲ್ಲಾ ನಿರ್ಮಾಪಕರಿಂದ ಥಟ್ ಅಂತ ಬರುವ ಉತ್ತರ ನಂದಕಿಶೋರ್. ಒಂದ್ಕಾಲದಲ್ಲಿ ಅವಕಾಶಕ್ಕೋಸ್ಕರ ಕಾಯುತ್ತಿದ್ದ ನಂದಕಿಶೋರ್, ಈಗ ಎಲ್ಲಾ ನಿರ್ಮಾಪಕರ ಪಾಲಿಗೆ ಸಿಹಿ ದ್ರಾಕ್ಷಿ ಆಗ್ಬಿಟ್ಟಿದ್ದಾರೆ.

'ವಿಕ್ಟರಿ', 'ಅಧ್ಯಕ್ಷ' ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಕೊಟ್ಟಿರುವ ನಂದಕಿಶೋರ್ ಕಿಚ್ಚ ಸುದೀಪ್ ಗಾಗಿ 'ರನ್ನ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೇ 1 ರಂದು 'ರನ್ನ' ಬಿಡುಗಡೆ ಆಗಲಿದೆ. 'ರನ್ನ'ನ ನಂತರ ನಂದಕಿಶೋರ್ ಲವ್ಲಿ ಸ್ಟಾರ್ ಪ್ರೇಮ್, ರಾಧಿಕಾ ಕುಮಾರಸ್ವಾಮಿ, ಧ್ರುವ ಸರ್ಜಾಗಾಗಿ ತಲಾ ಒಂದೊಂದು ಚಿತ್ರ ನಿರ್ದೇಶಿಸಲಿದ್ದಾರೆ.


nandakishore

ಇದೇ ಗ್ಯಾಪ್ ನಲ್ಲಿ ಬಾಲಿವುಡ್ ಗೆ ಹಾರುವ ಮನಸ್ಸು ಮಾಡಿದ್ದಾರೆ ನಂದಕಿಶೋರ್. ನಂಬಿದ್ರೆ ನಂಬಿ, ಸದ್ಯದಲ್ಲೇ ದಿ.ಸುಧೀರ್ ಪುತ್ರ ನಂದಕಿಶೋರ್ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. ''ಬಾಲಿವುಡ್ ನಲ್ಲಿ ಚಿತ್ರ ನಿರ್ದೇಶಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಎಲ್ಲವೂ ಸರಾಗವಾಗಿ ನಡೆದರೆ ಹಿಂದಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತೇನೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ನಂದಕಿಶೋರ್ ತಿಳಿಸಿದರು. [ನಿಜವಾದ 'ಆರಡಿ ಕಟೌಟ್' ಸುದೀಪ್ ಅಲ್ಲ.! ಇವ್ರು.!? ]


ಹಾಗಾದ್ರೆ, ಬಾಲಿವುಡ್ ನಲ್ಲಿ ನಂದಕಿಶೋರ್ ಸ್ವಮೇಕ್ ಸಿನಿಮಾ ಮಾಡ್ತಾರಾ ಅಥವಾ ಇಲ್ಲಿನ ತಮ್ಮ ಚಿತ್ರವನ್ನೇ ಅಲ್ಲಿ ರೀಮೇಕ್ ಮಾಡ್ತಾರಾ ಅನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಆದರೂ, 'ವಿಕ್ಟರಿ' ಅಥವಾ 'ಅಧ್ಯಕ್ಷ' ಚಿತ್ರದ ಬಾಲಿವುಡ್ ರೀಮೇಕ್ ಬಗ್ಗೆ ಮಾತುಕತೆ ನಡೆಯುತ್ತಿದೆ. [ದಿ.ಸುಧೀರ್ ಪುತ್ರನಿಗೆ ಇದೀಗ ಅದೃಷ್ಟವೋ ಅದೃಷ್ಟ!]


ಎಲ್ಲವೂ ಇನ್ನೂ ಮಾತುಕತೆ ಹಂತದಲ್ಲಿದ್ದು ಈ ವಾರದೊಳಗೆ ಕನ್ಫರ್ಮ್ ಆದ್ರೆ ನಂದಕಿಶೋರ್ ಬಾಲಿವುಡ್ ಗೆ ಹಾರುವುದು ಖಚಿತ. ಅದೃಷ್ಟ ಅಂದ್ರೆ ಇದೇ ಇರಬೇಕು. (ಫಿಲ್ಮಿಬೀಟ್ ಕನ್ನಡ)

English summary
Kiccha Sudeep starrer 'Ranna' movie Director Nandakishore is all set to make his Bollywood Debut. The Director is in talks with the Producers and will announce the project shortly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada