'ಭೈರತಿ ರಣಗಲ್' ಓಪನಿಂಗ್ ಸೀನ್ ರಿವೀಲ್ ಮಾಡಿದ ನರ್ತನ್; ಶಿವಣ್ಣ ಫ್ಯಾನ್ಸ್ ಥ್ರಿಲ್
ನರ್ತನ್ ನಿರ್ದೇಶನದಲ್ಲಿ ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ನಗರದ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಈವೆಂಟ್ ನಡೆದಿದೆ. ಚಿತ್ರದ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ತಮ್ಮ ಮುಂದಿನ ಸಿನಿಮಾಗಳ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ.
ಸೂಪರ್ ಹಿಟ್ 'ಮಫ್ತಿ' ಪ್ರೀಕ್ವೆಲ್ 'ಭೈರತಿ ರಣಗಲ್'. ಅಂದರೆ ಅಂಡರ್ ಕವರ್ ಪೊಲೀಸ್ ಆಫೀಸರ್ ಗಣ(ಶ್ರೀಮುರಳಿ) ರೋಣಾಪುರಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ಅಲ್ಲಿ ನಡೆದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿ ಶಿವಣ್ಣ ನಟಿಸಿದ್ದಾರೆ. ಈಗಾಗಲೇ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರಗಳಲ್ಲಿ ಬರೆದ ಒಂದೊಳ್ಳೆ ಪಾತ್ರ 'ಭೈರತಿ ರಣಗಲ್'. ಮಾಫಿಯಾ ಡಾನ್ ಆಗಿ ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನು ಆದ ರಣಗಲ್ ಕಥೆ ಇದು. ವಕೀಲನಾಗಿದ್ದ ರಣಗಲ್ ಯಾಕೆ ಮುಂದೆ ಕಾನೂನನ್ನು ಕೈಗೆ ತಗೊಂಡು ಡಾನ್ ಆಗುತ್ತಾನೆ ಎನ್ನುವ ಕಥೆ ಪ್ರೀಕ್ವೆಲ್‌ನಲ್ಲಿದೆ. ಸದ್ಯ ಚಿತ್ರದ ಓಪನಿಂಗ್ ಸೀನ್ ಹೇಗಿರುತ್ತದೆ ಎಂದು ನರ್ತನ್ ರಿವೀಲ್ ಮಾಡಿದ್ದಾರೆ.
ನರ್ತನ್ ಮಾತನಾಡಿ "ಮಫ್ತಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ 'ಭೈರತಿ ರಣಗಲ್' ಬಂಧನವಾಗಿರುತ್ತದೆ. ಈಗ ಪ್ರೀಕ್ವೆಲ್‌ನಲ್ಲಿ ಜೈಲು ಸೀನ್‌ನಿಂದ ಸಿನಿಮಾ ಆರಂಭವಾಗುತ್ತದೆ. ಅಭಿಮಾನಿ ಒಬ್ಬ ಎದೆ ಮೇಲೆ 'ಭೈರತಿ ರಣಗಲ್' ಎಂದು ಟ್ಯಾಟೂ ಹಾಕ್ಕೊಂಡಿರ್ತಾನೆ. ಪೊಲೀಸ್ ಬಂದು ಅವನ ಎದೆ ಮೇಲೆ ಗನ್ ಇಡ್ತಾನೆ. ಪಕ್ಕದಲ್ಲಿದವನು ಬೇಡ, ಅವನಿಗೆ ಏನು ಮಾಡ್ಬೇಡ ಅಂತಾನೆ. ಸರ್ ಎದೆ ಮೇಲೆ ಟ್ಯಾಟೂ ನೋಡಿ ಭಯ ಪಡ್ಬೇಕಾ ಎಂದು ಕೇಳಿದಾಗ, ಎದೆ ಮೇಲೆ ಮಾತ್ರ ಅಲ್ಲ, ಎದೆ ಒಳಗೂ ಇರ್ತಾರೆ ಅಂತ" ಹೀಗೆ ಸೀನ್ ಶುರುವಾಗುತ್ತದೆ ಎಂದಿದ್ದಾರೆ.
ಸದ್ಯ ನರ್ತನ್ ಹೇಳಿರುವ 'ಭೈರತಿ ರಣಗಲ್' ಸೀನ್ ಬಗ್ಗೆ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ತೆರೆಮೇಲೆ ಇಂತಹ ಸಾಕಷ್ಟು ಗೂಸ್‌ಬಂಪ್ಸ್ ಸನ್ನಿವೇಶಗಳಿವೆ ಎಂದು ನರ್ತನ್ ಹೇಳಿದ್ದಾರೆ. ಒಟ್ಟಾರೆ 'ಭೈರತಿ ರಣಗಲ್' ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡ್ತಿದೆ. ದೊಡ್ಡಮಟ್ಟದಲ್ಲಿ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆಯಿದೆ.
'ಭೈರತಿ ರಣಗಲ್' ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದಾರೆ. ಛಾಯಾಸಿಂಗ್, ಅವಿನಾಶ್, ರಾಹುಲ್ ಬೋಸ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.
ಶಿವಣ್ಣ ಶೀಘ್ರದಲ್ಲೇ '45' ಸಿನಿಮಾ ಕ್ಲೈಮ್ಯಾಕ್ಸ್ ಮುಗಿಸಲಿದೆ. ಬಳಿಕ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ. ಮುಂದೆ 'ಭೈರತಿ ರಣಗಲ್' ಸೀಕ್ವೆಲ್ ಕೂಡ ಮಾಡುವ ಲೆಕ್ಕಾಚಾರ ನಡೀತಿದೆ. 'ಘೋಸ್ಟ್' ಸಿನಿಮಾ ನಿರ್ದೇಶಕ ಶ್ರೀನಿ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಮಾಡುವ ಬಗ್ಗೆಯೂ ಮಾತುಕತೆ ನಡೀತಿದೆ.
ಕೆಜಿ ರಸ್ತೆಯ ನರ್ತಕಿ ಸೇರಿದಂತೆ ವಿಶ್ವದಾದ್ಯಂತ ಶುಕ್ರವಾರ 'ಭೈರತಿ ರಣಗಲ್' ಸಿನಿಮಾ ಬಿಡುಗಡೆ ಆಗಲಿದೆ. ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗುವಂತೆ ಕಾಣುತ್ತಿದೆ. ಬೇರೆ ಭಾಷೆಗಳಲ್ಲಿ ಸಿನಿಮಾ ಈ ವಾರವೇ ರಿಲೀಸ್ ಆಗುತ್ತಾ ಕಾದು ನೋಡಬೇಕಿದೆ. ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ರವಿಬಸ್ರೂರು ಚಿತ್ರದ ಇಂಟರ್‌ವಲ್ ಹಾಗೂ ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.
ಇನ್ನು 'ಭೈರತಿ ರಣಗಲ್' ಚಿತ್ರದಲ್ಲಿ ಶ್ರೀಮುರಳಿ ಪಾತ್ರ ಇರಲ್ಲ ಎಂದು ಶಿವಣ್ಣ ಸ್ಪಷ್ಟಪಡಿಸಿದ್ದಾರೆ. ಮುಂದೆ ಸೀಕ್ವೆಲ್ ಮಾಡಿದರೆ ಒಟ್ಟಿಗೆ ನಟಿಸುತ್ತೇವೆ. ಪ್ರೀಕ್ವೆಲ್‌ನಲ್ಲಿ ಗಣ ಪಾತ್ರ ಇಲ್ಲ ಎಂದು ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











