ನಾಲ್ಕೈದು ಸಿನಿಮಾ ಸೇರ್ಸಿ ರೀಮಿಕ್ಸ್ ಸಿನಿಮಾ ಮಾಡಿದ್ರೆ ತಪ್ಪೇನ್ರಿ? ಓಂ ಪ್ರಕಾಶ್ ರಾವ್ ಪ್ರಶ್ನೆ

ರೀಮೆಕ್ ಸಿನಿಮಾಗಳನ್ನು ಮಾಡುವುದು ಹೊಸದೇನು ಅಲ್ಲ. ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ರೀಮೆಕ್ ಆಗಿವೆ. ಅದೇ ರೀತಿ ಕನ್ನಡದ ಸಿನಿಮಾಗಳು ಬೇರೆ ಭಾಷೆಗೆ ರೀಮೆಕ್ ಆಗಿ ಹೋಗಿರುವ ಉದಾಹರಣೆಯಿದೆ. ಆದರೆ ಕನ್ನಡದಲ್ಲಿ ರೀಮಿಕ್ಸ್ ಸಿನಿಮಾಗಳನ್ನು ಮಾಡಿ ಗೆದ್ದವರು ನಿರ್ದೇಶಕ ಓಂ ಪ್ರಕಾಶ್ ರಾವ್. ಹೌದು, ನಾನು ನಾಲ್ಕೈದು ಸಿನಿಮಾ ನೋಡಿ ರೀಮಿಕ್ಸ್ ಮಾಡಿದ್ದೀನಿ ಎಂದು ಹೇಳಿಕೊಳ್ಳುತ್ತಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಓಂ ಪ್ರಕಾಶ್ ರಾವ್ ಎಷ್ಟು ಸಿನಿಮಾಗಳಿಂದ ಕದ್ದು ರೀಮಿಕ್ಸ್ ಸಿನಿಮಾ ಮಾಡಿದ್ದರು ಎನ್ನುವುದರ ಲೆಕ್ಕ ಕೊಟ್ಟಿದ್ದರು. 7 ಸಿನಿಮಾಗಳಿಂದ ಕದ್ದು 'ಕಲಾಸಿಪಾಳ್ಯ' ಸಿನಿಮಾ ಮಾಡಿದ್ದೆ, ಅದೇರೀತಿ 10 ಸಿನಿಮಾಗಳಿಂದ ದೃಶ್ಯಗಳನ್ನು ಕದ್ದು 'ಅಯ್ಯ' ಸಿನಿಮಾ ತೆರೆಗೆ ತಂದಿದ್ದೆ. 'ಮಂಡ್ಯ' ಚಿತ್ರಕ್ಕೆ 13 ಚಿತ್ರಗಳು ಸ್ಫೂರ್ತಿ ಎಂದಿದ್ದರು. ಇದೇ ವಿಚಾರದ ಬಗ್ಗೆ ಮತ್ತೆ ಮಾತನಾಡಿದ್ದಾರೆ.

Director Om Prakash Rao on Remix films People Watch Them Then What s Wrong

ಒಂದ್ಕಾಲದಲ್ಲಿ ಒಳ್ಳೆ ಸಿನಿಮಾಗಳನ್ನು ನಿರ್ದೇಶಿಸಿದ್ದ ಓಂ ಪ್ರಕಾಶ್ ರಾವ್ ಬಳಿಕ ರೀಮೆಕ್ ಸಿನಿಮಾಗಳನ್ನು ಮಾಡಿದ್ದರು. ಆದರೆ ನಿಧಾನವಾಗಿ ರೀಮೆಕ್ ಬದಲು ರೀಮಿಕ್ಸ್ ಮಾಡಲು ಆರಂಭಿಸಿದರು. ಯಾಕೆ ಬದಲಾದ್ರಿ ಎನ್ನುವ ಪ್ರಶ್ನೆಗೆ ವಿಶ್ವವಾಣಿ ವಾಹಿನಿ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ. ಜನ ನೋಡುವುದಕ್ಕೆ ಸಿನಿಮಾ ಮಾಡ್ತೀವಿ, ಅವ್ರು ನೋಡ್ತಾರೆ ಅಂದ್ಮೇಲೆ ರೀಮಿಕ್ಸ್ ಮಾಡಿ ತಪ್ಪೇನು ಎಂದು ಕೇಳಿದ್ದಾರೆ.

ರೀಮೆಕ್ ಮಾಡುವುದು ತಪ್ಪು ಎಂದು ಯಾರು ಹೇಳಿದ್ದಾರೆ. ನಮ್ಮ ಸಿನಿಮಾಗಳನ್ನು ಬೇರೆ ಭಾಷೆಗಳಲ್ಲಿ ರೀಮೆಕ್ ಮಾಡಿದಾಗ ಒಪ್ಪಿಕೊಳ್ಳುವುದಿಲ್ಲವೇ, ಅದೇ ರೀತಿ ಅವ್ರ ಸಿನಿಮಾ ರೀಮೆಕ್ ಮಾಡಿದಾಗ ಗೌರವ ಕೊಡಬೇಕು. ಕಷ್ಟಪಟ್ಟು ಸಿನಿಮಾ ಮಾಡಿದಾಗ ಅದನ್ನು ತೆಗೆದುಕೊಂಡು ನಾವು ಸಿನಿಮಾ ಮಾಡುವುದು ಅವರಿಗೆ ಕೊಡುವ ಗೌರವ. ತಪ್ಪೇನಿದೆ. ರೀಮೆಕ್ ಮಾಡಿ ಹಿಟ್ ಕೊಡಿ. ರೀಮೆಕ್ ಮಾಡಿ ಫ್ಲಾಪ್ ಕೊಟ್ಟಿರುವವರು ನಮ್ಮಲ್ಲಿ ಇದ್ದಾರೆ. ರೀಮೆಕ್ ಮಾಡಿದ್ರು ನಮ್ಮತನ ಮರೆಯಬಾರದು. ಅದನ್ನು ನಾನು ಬಿಡಲ್ಲ. ನಮ್ಮ ನೇಟಿವಿಟಿಗೆ ತಕ್ಕಂತೆ ಮಾಡ್ತೀನಿ. ನಮ್ಮತನವನ್ನು ಪಾತ್ರಗಳಲ್ಲಿ ಸೇರಿಸ್ತೀನಿ ಎಂದು ಓಂಪ್ರಕಾಶ್ ರಾವ್ ತಿಳಿಸಿದ್ದಾರೆ.

ಬೇರೆಯವ್ರು ಕದ್ದು ಸಿನಿಮಾ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ. ನಾನು ಮಾಡಿದ್ದೀನಿ. ಅದನ್ನು ಒಪ್ಪಿಕೊಳ್ತೀನಿ. ಹಿಟ್ ಕೊಟ್ಟಿದ್ದೀನಿ. ಕನ್ನಡ ಪ್ರೇಕ್ಷಕರು ಕೈಹಿಡಿದಿದ್ದಾರೆ. ಅವರಿಗೆ ಈಗ ಒರಿಜಿನಲ್ ಸಿನಿಮಾ ಕೊಡುವುದು ನನ್ನ ಜವಾಬ್ದಾರಿ. 'ಫೀನಿಕ್ಸ್' ಎಂಬ ಸ್ಟ್ರೈಟ್ ಸಿನಿಮಾ ಮಾಡ್ತಿದ್ದೀನಿ. ಏನೇ ಮಾಡಿದ್ರು ಅಂತಿಮವಾಗಿ ಗೆಲ್ಲುವುದು ಮುಖ್ಯ ಎಂದು ಓಂಪ್ರಕಾಶ್ ರಾವ್ ಹೇಳಿದ್ದಾರೆ. ಬಿಗ್‌ಬಾಸ್ ಮನೆಗೆ ಹೋಗ್ತೀರಾ ಎನ್ನುವ ಪ್ರಶ್ನೆಗೆ ಇಲ್ಲ, ಅಂತಹ ಆಲೋಚನೆ ಇಲ್ಲ ಎಂದಿದ್ದಾರೆ. 'ಕ್ವಾಟ್ಲೆ ಕಿಚನ್-2' ಶೋ ಮಾಡ್ತಿದ್ದೀನಿ. ಬಿಗ್‌ಬಾಸ್‌ಗೆ ಹೋಗುವ ಐಡಿಯಾ ಇಲ್ಲ ಎಂದಿದ್ದಾರೆ.

3 ಸಿನಿಮಾಗಳಿಂದ ಕಾಪಿ ಮಾಡಿ 'ಯೋಧ', 4 ಸಿನಿಮಾಗಳಿಂದ 'ಪ್ರಿನ್ಸ್', 6 ಸಿನಿಮಾಗಳಿಂದ 'ಪಾರ್ಥ', 8 ಸಿನಿಮಾಗಳಿಂದ 'ಹುಬ್ಬಳ್ಳಿ' ಹೀಗೆ ಕೆಲ ಸಿನಿಮಾಗಳ ಮೂಲವನ್ನು ಓಂಪ್ರಕಾಶ್ ರಾವ್ ಹೇಳಿಕೊಂಡಿದ್ದರು.

Read more about: om prakash rao director kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X