For Quick Alerts
  ALLOW NOTIFICATIONS  
  For Daily Alerts

  ಸತತ 7ನೇ ಬಾರಿ ಒಂದಾದ ನಿರ್ದೇಶಕ ಪಿ ಸಿ ಶೇಖರ್ - ಅರ್ಜುನ್ ಜನ್ಯ

  |

  ಒಂದು ಸಿನಿಮಾಗೆ ಸಂಗೀತ ಬಹಳ ಮುಖ್ಯ. ಒಬ್ಬ ಸಂಗೀತ ನಿರ್ದೇಶಕ, ನಿರ್ದೇಶಕನ ಭಾವನೆ ಅರ್ಥ ಮಾಡಿಕೊಂಡು ಸಂಗೀತ ನೀಡಬೇಕಾಗುತ್ತದೆ. ಅದೇ ಕಾರಣಕ್ಕೆ ಕೆಲವು ನಿರ್ದೇಶಕರು ತಮ್ಮ ಹಳೆಯ ಚಿತ್ರದ ಸಂಗೀತ ನಿರ್ದೇಶಕರನ್ನೇ ಮುಂದುವರೆಸುತ್ತಾರೆ.

  ಇದೀಗ ನಿರ್ದೇಶಕ ಪಿ ಸಿ ಶೇಖರ್ ಕೂಡ ತಮ್ಮ ಹಳೆಯ ಸಿನಿಮಾಗಳು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆಗೆ ಮತ್ತೆ ಕೆಲಸ ಮಾಡುತ್ತಿದ್ದಾರೆ. ಪಿ ಸಿ ಶೇಖರ್ ಹಾಗೂ ಪ್ರಜ್ವಲ್ ದೇವರಾಜ್ ಜೋಡಿಯ ಹೊಸ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

  ಡಾಕ್ಟರ್ ಆಗಿದ್ದಾರೆ ನಟಿ ಆಶಿಕಾ ರಂಗನಾಥ್

  ವಿಶೇಷ ಅಂದರೆ, ಏಳನೇ ಬಾರಿ ಪಿ ಸಿ ಶೇಖರ್ ಮತ್ತು ಅರ್ಜುನ್ ಜನ್ಯ ಒಂದಾಗಿದ್ದಾರೆ. ಪಿ ಸಿ ಶೇಖರ್ ಮೊದಲ ಸಿನಿಮಾ 'ನಾಯಕ' ಚಿತ್ರಕ್ಕೆ ಅರ್ಜುನ್ ಜನ್ಯ ಹಿನ್ನಲೆ ಸಂಗೀತ ನೀಡಿದ್ದರು. ಅಲ್ಲಿಂದ ಶುರುವಾಗಿ ಇಂದಿನ ವರೆಗೆ ಈ ಕಾಂಬಿನೇಶನ್ ಸಾಗುತ್ತಿದೆ.

  'ರೋಮಿಯೋ', 'ಚಡ್ಡಿ ದೋಸ್ತ್', 'ಅರ್ಜುನ', 'ಸ್ಟೈಲ್ ಕಿಂಗ್', 'ರಾಗ', 'ದಿ ಟೆರರಿಸ್ಟ್' ಹೀಗೆ ಪಿ ಸಿ ಶೇಖರ್ ಅವರ ಎಲ್ಲ ಸಿನಿಮಾಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

  ಮತ್ತೆ ಒಂದಾದ ಪ್ರಜ್ವಲ್ ದೇವರಾಜ್-ಪಿಸಿ ಶೇಖರ್ ಜೋಡಿ

  ಪಿ ಸಿ ಶೇಖರ್ ತಮ್ಮ ಮುಂದಿನ ಸಿನಿಮಾದ ತಾಂತ್ರಿಕ ವರ್ಗದ ವಿವರ ನೀಡಿದ್ದಾರೆ. ವೈದಿ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಲಿದ್ದಾರೆ.

  English summary
  Kannada director P C Shekar and music director Arjun Janya has together for 7th time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X