ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ ಕಾರಂತರ 'ಮೂಕಜ್ಜಿಯ ಕನಸುಗಳು'
Recommended Video

'ಮೂಕಜ್ಜಿಯ ಕನಸುಗಳು' ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ ಶಿವರಾಮ ಕಾರಂತರ ಶ್ರೇಷ್ಠ ಕಾದಂಬರಿ. ಕನ್ನಡಿಗರ ಹೃದಯದಲ್ಲಿ ಜಾಗ ಪಡೆದುಕೊಂಡಿರುವ ಮೂಕಜ್ಜಿ ಈಗ ಸಿನಿಮಾ ಪರದೆ ಮೇಲೆ ಕಾಣಿಸಿಕೊಳ್ಳುವ ಸಮಯ ಬಂದಿದೆ.
ಸದಭಿರುಚಿಯ ನಿರ್ದೇಶಕ ಪಿ ಶೇಷಾದ್ರಿ ಈಗ 'ಮೂಕಜ್ಜಿಯ ಕನಸುಗಳು' ಕಾದಂಬರಿ ಆಧಾರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿರುವ ಅವರು ಸಿನಿಮಾದ ಚಿತ್ರಕಥೆ ಮುಗಿದಿದೆ, ಕಲಾವಿದರ ಆಯ್ಕೆ ನಡೆಯುತ್ತಿದೆ. ಎಂದು ಸಿನಿಮಾ ಮಾಹಿತಿಯನ್ನು ತಿಳಿಸಿದ್ದಾರೆ.
ಪುಸ್ತಕ ಪ್ರೇಮಿಗಳ ನೆಚ್ಚಿನ ಪುಸ್ತಕ 'ಮಲೆಗಳಲ್ಲಿ ಮದುಮಗಳು!'
''ಮೂಕಜ್ಜಿಯನ್ನು ನಾವು ನಮ್ಮದಾಗಿಸಿಕೊಳ್ಳುವುದು ನನಗೆ ದೊಡ್ಡ ಚಾಲೆಂಜ್. ಈ ಕೃತಿ ದೃಶ್ಯ ಮಾಧ್ಯಮಕ್ಕೆ ಸಲ್ಲುವಂತದಲ್ಲ. ಇಲ್ಲಿ ನಾಯಕ, ನಾಯಕಿ ಯಾರು ಇಲ್ಲ. ಕಾರಂತರೇ ಹೇಳುವ ಹಾಗೆ ಮೂಕಜ್ಜಿಯ ಕೂಡ ನಾಯಕಿ ಅಲ್ಲ. ಸಿನಿಮಾದ ಸೂತ್ರಗಳನ್ನು ಮೀರಿ ಈ ಚಿತ್ರ ಮಾಡಬೇಕು ಇದು ನನಗೆ ದೊಡ್ಡ ಸವಾಲು'' ಎಂದು ಹೇಳಿದರು.

ಮೂಕಜ್ಜಿಯ ಪಾತ್ರಕ್ಕೆ ಹಿರಿಯ ನಟಿ, ರಂಗಭೂಮಿ ಕಲಾವಿದೆ ಬಿ ಜಯಶ್ರೀ ಸೇರಿದಂತೆ ಕೆಲವು ಹೆಸರುಗಳು ಕೇಳಿ ಬಂದಿದ್ದು, ಇನ್ನೂ ಆ ಪಾತ್ರಕ್ಕೆ ಅಂತಿಮ ಆಯ್ಕೆ ನಡೆದಿಲ್ಲವಂತೆ. ''ಎಲ್ಲರೂ ಅವರವರ ಆಲೋಚನೆಗೆ ತಕ್ಕ ಹಾಗೆ ಮೂಕಜ್ಜಿಯನ್ನು ಕಂಡಿದ್ದಾರೆ. ಅದೇ ರೀತಿ ನಾನು ಕೂಡ ಆಕೆಯನ್ನು ಕಂಡಿದ್ದೇನೆ. ನನ್ನ ಮೂಕಜ್ಜಿಯನ್ನು ಎಲ್ಲರಿಗೆ ಇಷ್ಟ ಆಗುವಂತೆ ಮಾಡುವುದು ದೊಡ್ಡ ಕೆಲಸ'' ಎಂದು ಚಿತ್ರದ ಮಾಹಿತಿಯನ್ನು ಹಂಚಿಕೊಂಡರು.

ಕಡಲ ತೀರದ ಭಾರ್ಗವ ಕಾರಂತಜ್ಜನಿಗೆ ನುಡಿ ನಮನ
ಅಂದಹಾಗೆ, 'ಮೂಕಜ್ಜಿಯ ಕನಸುಗಳು' ಡಾ ಶಿವರಾಮ ಕಾರಂತರಿಗೆ ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಕಾದಂಬರಿಯಾಗಿದೆ. 1977ರಲ್ಲಿ ಈ ಕಾದಂಬರಿಯನ್ನು ಅವರು ರಚಿಸಿದ್ದು, ಅಜ್ಜಿ ಮತ್ತು ಮೊಮ್ಮಗನ ನಡುವಿನ ಸಂಭಾಷಣೆಯನ್ನು ಕಾರಂತರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ


Click it and Unblock the Notifications











