For Quick Alerts
  ALLOW NOTIFICATIONS  
  For Daily Alerts

  37ನೇ ವಯಸ್ಸಿನಲ್ಲಿ ಸಾಹಸಕ್ಕೆ ಕೈ ಹಾಕಿದ 'ಲೂಸಿಯಾ' ಪವನ್ ಕುಮಾರ್

  |
  Lucia Pawan Kumar turns into a fighter at 37 | FILMIBET KANNADA

  'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಈಗ ನಟನೆ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮೊದಲಿನಿಂದಲೂ ನಟನೆ ಮೇಲೆ ಒಲವು ಹೆಚ್ಚಿದ್ದರೂ ನಿರ್ದೇಶನದಲ್ಲಿ ಸಕ್ಸಸ್ ಕಂಡಿದ್ದರು. ಲೈಫು ಇಷ್ಟೇನೆ, ಲೂಸಿಯಾ, ಯೂಟರ್ನ್ ಅಂತಹ ಒಳ್ಳೆಯ ಸಿನಿಮಾಗಳನ್ನ ನೀಡಿದ್ದಾರೆ.

  ಇದೀಗ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಗಾಳಿಪಟ-2 ಚಿತ್ರದಲ್ಲಿ ನಟಿಸುತ್ತಿರುವ ಪವನ್ ಕುಮಾರ್, ಸಾಹಸ ಕಲೆಯ ಮೊರೆ ಹೋಗಿರುವುದು ವಿಶೇಷವೆನಿಸಿಕೊಂಡಿದೆ.

  'ಲೂಸಿಯಾ' ಚಿತ್ರ ಸತೀಶ್ ಮಾಡದೆ ಇದ್ದಿದ್ದರೇ ಹೀರೋ ಯಾರಾಗ್ತಿದ್ರು?'ಲೂಸಿಯಾ' ಚಿತ್ರ ಸತೀಶ್ ಮಾಡದೆ ಇದ್ದಿದ್ದರೇ ಹೀರೋ ಯಾರಾಗ್ತಿದ್ರು?

  ಹೌದು, ಅಕ್ಟೋಬರ್ 29 ರಂದು 37ನೇ ವಸಂತಕ್ಕೆ ಕಾಲಿಟ್ಟ ಪವನ್ ಕುಮಾರ್ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಬಾಕ್ಸಿಂಗ್ ಕಲೆಗಳಲ್ಲಿ ಒಂದಾದ 'ಮುಯೆ ಥಾಯ್' ಕಲಿಯುತ್ತಿರುವ ವಿಡಿಯೋ ಶೇರ್ ಮಾಡಿರುವ ಪವನ್ ಕುಮಾರ್ ಸರ್ಪ್ರೈಸ್ ನೀಡಿದ್ದಾರೆ.

  ''ನನ್ನ ಜೀವನದಲ್ಲಿ ಏನಾದರೂ ಹೊಸತು ಮಾಡಬೇಕು ಎಂಬ ಛಲ ನನ್ನದು. 37ನೇ ವರ್ಷದಲ್ಲಿ ನಾನು 'ಮುಯೆ ಥಾಯ್' ತರಬೇತಿ ಪಡೆದುಕೊಂಡಿದ್ದೇನೆ. ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೇ'' ಎಂದು ಪೋಸ್ಟ್ ಹಾಕಿದ್ದಾರೆ.

  ಅಂದ್ಹಾಗೆ, 'ಮುಯೆ ಥಾಯ್' ಸುಮ್ಮನೆ ಕಲಿತಿದ್ದಾರಾ ಅಥವಾ ಸಿನಿಮಾಗಾಗಿ ಕಲಿತರಾ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಬಟ್, ನಟ ಗಣೇಶ್ ಕೂಡ 'ಮುಯೆ ಥಾಯ್' ಕಲೆ ಕಲಿತಿದ್ದಾರೆ. ಹಾಗಾಗಿ, ಗಾಳಿಪಟ ಚಿತ್ರದಲ್ಲಿ 'ಮುಯೆ ಥಾಯ್' ಪ್ರಮುಖ ಪಾತ್ರವಹಿಸುತ್ತಾ ಎಂಬ ಅನುಮಾನ ಬಾರದೆ ಇರಲ್ಲ.

  ಸದ್ಯ, ಗಾಳಿಪಟ 2 ಸಿನಿಮಾ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ನಟಿಸುತ್ತಿದ್ದಾರೆ.

  English summary
  Lucia fame Director Pavan Kumar learned 'Muay Thai' and he shared that video in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X