ಪುತ್ರನ ನಾಮಕರಣ ಸಂಭ್ರಮದಲ್ಲಿ ಪವನ್ ಒಡೆಯರ್ ದಂಪತಿ: ಏನೆಂದು ಹೆಸರಿಟ್ಟಿದ್ದಾರೆ?

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ತಂದೆಯಾದ ಸಂತಸದಲ್ಲಿದ್ದಾರೆ. ಪವನ್ ಪತ್ನಿ ನಟಿ ಅಪೇಕ್ಷಾ ಪುರೋಹಿತ್ ಡಿಸೆಂಬರ್ 10ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುದ್ದಾದ ಮಗನ ಮೊದಲ ಫೋಟೋ ಹಂಚಿಕೊಳ್ಳುವ ಮೂಲಕ ಪವನ್ ದಂಪತಿ ಸಂತಸ ವ್ಯಕ್ತಪಡಿಸಿದ್ದರು.

ಇದೀಗ 20 ದಿನಗಳ ಬಳಿಕ ಮುದ್ದಾದ ಮಗುವಿಗೆ ನಾಮಕರಣ ಮಾಡಿದ್ದಾರೆ. ನಿನ್ನೆ ವರ್ಷದ ಕೊನೆಯಲ್ಲಿ ಪವನ್ ಒಡೆಯರ್ ಮನೆಯಲ್ಲಿ ನಾಮಕರಣ ಶಾಸ್ತ್ರ ಜೋರಾಗಿತ್ತು. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಪುತ್ರನಿಗೆ ನಾಮಕರಣ ಮಾಡಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ವಿಡಿಯೋ ಮೂಲಕ ಮಗನ ಹೆಸರನ್ನು ಬಹಿರಂಗ ಮಾಡಿದ್ದಾರೆ. ಹೌದು, ಪವನ್ ದಂಪತಿ ಮುದ್ದಾದ ಮಗುವಿಗೆ ' ಶೌರ್ಯ' ಎಂದು ನಾಮಕರಣ ಮಾಡಿದ್ದಾರೆ. ವಿಡಿಯೋದಲ್ಲಿ ಮಗನ ಫೋಟೋಗಳನ್ನು ಶೇರ್ ಮಾಡಿ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

Director Pavan Wadeyar and Apeksha name their son Shourya

ಪವನ್ ಒಡೆಯರ್ ಹುಟ್ಟುಹಬ್ಬದ ದಿನವೇ ಮಗ ಜನಿಸಿದ್ದಾನೆ. ಅಂದಹಾಗೆ ಇತ್ತೀಚಿಗೆ ಪವನ್ ಒಡೆಯರ್ ಮನೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ಭೇಟಿ ನೀಡಿ, ಮಗುವಿಗೆ ಶುಭಹಾರೈಸಿದ್ದಾರೆ. ಮಗುವಿಗೆ ಉಡುಗೊರೆ ನೀಡಿ ಕೆಲ ಸಮಯ ಒಡೆಯರ್ ಕುಟುಂಬದ ಜೊತೆ ಕಾಲ ಕಳೆದು ತೆರಳಿದ್ದಾರೆ. ಸುಧಾರಕರ್ ಭೇಟಿಯ ಫೋಟೋಗಳನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡಿದ್ದರು.

Recommended Video

Aditi ಆಟೋ ಓಡ್ಸಿದ್ದು ನೋಡಿ ದರ್ಶನ್ ಅಭಿಮಾನಿಗಳು ಫಿದಾ | Filmibeat Kannada

English summary
Director Pavan Wadeyar and Apeksha name their son Shourya. shares glimpses of ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X