For Quick Alerts
  ALLOW NOTIFICATIONS  
  For Daily Alerts

  ಪುತ್ರನ ನಾಮಕರಣ ಸಂಭ್ರಮದಲ್ಲಿ ಪವನ್ ಒಡೆಯರ್ ದಂಪತಿ: ಏನೆಂದು ಹೆಸರಿಟ್ಟಿದ್ದಾರೆ?

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ತಂದೆಯಾದ ಸಂತಸದಲ್ಲಿದ್ದಾರೆ. ಪವನ್ ಪತ್ನಿ ನಟಿ ಅಪೇಕ್ಷಾ ಪುರೋಹಿತ್ ಡಿಸೆಂಬರ್ 10ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುದ್ದಾದ ಮಗನ ಮೊದಲ ಫೋಟೋ ಹಂಚಿಕೊಳ್ಳುವ ಮೂಲಕ ಪವನ್ ದಂಪತಿ ಸಂತಸ ವ್ಯಕ್ತಪಡಿಸಿದ್ದರು.

  ಇದೀಗ 20 ದಿನಗಳ ಬಳಿಕ ಮುದ್ದಾದ ಮಗುವಿಗೆ ನಾಮಕರಣ ಮಾಡಿದ್ದಾರೆ. ನಿನ್ನೆ ವರ್ಷದ ಕೊನೆಯಲ್ಲಿ ಪವನ್ ಒಡೆಯರ್ ಮನೆಯಲ್ಲಿ ನಾಮಕರಣ ಶಾಸ್ತ್ರ ಜೋರಾಗಿತ್ತು. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಪುತ್ರನಿಗೆ ನಾಮಕರಣ ಮಾಡಿದ್ದಾರೆ.

  ಪವನ್ ಒಡೆಯರ್ ಮನೆಗೆ ಸಚಿವ ಸುಧಾಕರ್ ಭೇಟಿ; 'ಅದ್ಭುತ ವ್ಯಕ್ತಿತ್ವಕ್ಕೆ ಮೂಕನಾಗಿದ್ದೀನಿ' ಎಂದ ನಿರ್ದೇಶಕಪವನ್ ಒಡೆಯರ್ ಮನೆಗೆ ಸಚಿವ ಸುಧಾಕರ್ ಭೇಟಿ; 'ಅದ್ಭುತ ವ್ಯಕ್ತಿತ್ವಕ್ಕೆ ಮೂಕನಾಗಿದ್ದೀನಿ' ಎಂದ ನಿರ್ದೇಶಕ

  ನಿರ್ದೇಶಕ ಪವನ್ ಒಡೆಯರ್ ವಿಡಿಯೋ ಮೂಲಕ ಮಗನ ಹೆಸರನ್ನು ಬಹಿರಂಗ ಮಾಡಿದ್ದಾರೆ. ಹೌದು, ಪವನ್ ದಂಪತಿ ಮುದ್ದಾದ ಮಗುವಿಗೆ ' ಶೌರ್ಯ' ಎಂದು ನಾಮಕರಣ ಮಾಡಿದ್ದಾರೆ. ವಿಡಿಯೋದಲ್ಲಿ ಮಗನ ಫೋಟೋಗಳನ್ನು ಶೇರ್ ಮಾಡಿ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

  Aditi ಆಟೋ ಓಡ್ಸಿದ್ದು ನೋಡಿ ದರ್ಶನ್ ಅಭಿಮಾನಿಗಳು ಫಿದಾ | Filmibeat Kannada

  ಪವನ್ ಒಡೆಯರ್ ಹುಟ್ಟುಹಬ್ಬದ ದಿನವೇ ಮಗ ಜನಿಸಿದ್ದಾನೆ. ಅಂದಹಾಗೆ ಇತ್ತೀಚಿಗೆ ಪವನ್ ಒಡೆಯರ್ ಮನೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ಭೇಟಿ ನೀಡಿ, ಮಗುವಿಗೆ ಶುಭಹಾರೈಸಿದ್ದಾರೆ. ಮಗುವಿಗೆ ಉಡುಗೊರೆ ನೀಡಿ ಕೆಲ ಸಮಯ ಒಡೆಯರ್ ಕುಟುಂಬದ ಜೊತೆ ಕಾಲ ಕಳೆದು ತೆರಳಿದ್ದಾರೆ. ಸುಧಾರಕರ್ ಭೇಟಿಯ ಫೋಟೋಗಳನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡಿದ್ದರು.

  English summary
  Director Pavan Wadeyar and Apeksha name their son Shourya. shares glimpses of ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X