For Quick Alerts
  ALLOW NOTIFICATIONS  
  For Daily Alerts

  'ಗೂಗ್ಲಿ 2' ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಷ್ಯ ಹೇಳಿದ ಪವನ್ ಒಡೆಯರ್

  |

  ಕೆಲವೊಂದು ಚಿತ್ರಗಳು ಬಂದು ವರ್ಷಗಳೇ ಉರುಳಿದರೂ ಅದನ್ನು ಮರೆಯಲಾಗುವುದಿಲ್ಲ. ಮತ್ತೆ ಅಂತಹದ್ದೇ ಸಿನಿಮಾ ಮಾಡಿ ಎಂದು ಅಭಿಮಾನಿಗಳು ನಿರ್ದೇಶಕರಿಗೆ, ನಟರಿಗೆ ಬೇಡಿಕೆಯಿಡುವುದು ಸಹಜ. ಈಗ ಅಂತಹದ್ದೆ ಒಂದು ಬೇಡಿಕೆ ಪವನ್ ಒಡೆಯರ್‌ಗೆ ಎದುರಾಗುತ್ತಿದೆ.

  ಸಾಮಾಜಿಕ ಜಾಲತಾಣದಲ್ಲಿ ಯಶ್ ಅವರ ಅಭಿಮಾನಿಗಳು ಹಾಗೂ ಪವನ್ ಒಡೆಯರ್ ಅವರ ಅಭಿಮಾನಿಗಳು ಗೂಗ್ಲಿ ಚಿತ್ರದ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಾರೆ. ನಮಗೆ ಗೂಗ್ಲಿ 2 ಸಿನಿಮಾ ಬೇಕು, ಗೂಗ್ಲಿ 2 ಚಿತ್ರ ಮಾಡಿ ಎಂದು ಕಾಮೆಂಟ್‌ಗಳ ಮೂಲಕ ಒತ್ತಾಯಿಸುತ್ತಿದ್ದಾರೆ.

  'ಗೂಗ್ಲಿ' ಟೈಟಲ್ ಬೇಡ ಅಂದಿದ್ದರು ಜಯಣ್ಣ, ಶೀರ್ಷಿಕೆ ಬಗ್ಗೆ ಇಂಟರೆಸ್ಟಿಂಗ್ ಕಥೆ ಬಿಚ್ಚಿಟ್ಟ ಒಡೆಯರ್!'ಗೂಗ್ಲಿ' ಟೈಟಲ್ ಬೇಡ ಅಂದಿದ್ದರು ಜಯಣ್ಣ, ಶೀರ್ಷಿಕೆ ಬಗ್ಗೆ ಇಂಟರೆಸ್ಟಿಂಗ್ ಕಥೆ ಬಿಚ್ಚಿಟ್ಟ ಒಡೆಯರ್!

  ಗೂಗ್ಲಿ 2 ಮಾಡ್ತೇವೆ ಎಂದು ನಿರ್ದೇಶಕ ಪವನ್ ಒಡೆಯರ್ ಆಗಲಿ ಅಥವಾ ಯಶ್ ಆಗಲಿ ಎಲ್ಲಿಯೂ ಹೇಳಿಲ್ಲ. ಆದರೆ ಅಭಿಮಾನಿಗಳೇ ಗೂಗ್ಲಿ ಮುಂದುವರೆದ ಭಾಗ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಯಶ್ ಅವರ ತೆಲುಗು ಫ್ಯಾನ್ಸ್ ಸಹ ಗೂಗ್ಲಿ 2 ಸಿನಿಮಾದ ಬಗ್ಗೆ ಪ್ರಶ್ನಿಸಿದ್ದಾರೆ. ಇದನ್ನು ಗಮನಿಸಿದ ನಿರ್ದೇಶಕ ಪವನ್, ಗೂಗ್ಲಿ 2 ಮಾಡಲ್ಲ ಅಂತ ಹೇಳಿಲ್ಲ, ಆದರೆ ಅದಕ್ಕೆ ಹೆಚ್ಚು ಸಮಯಬೇಕಾಗಬಹುದು ಎಂದು ಉತ್ತರಿಸಿದ್ದಾರೆ.

  ''ನಿಜವಾಗಲೂ ಗೂಗ್ಲಿ 2 ಮಾಡುವ ಆಸೆ ಇದೆ. ಅದಕ್ಕೆ ಹೆಚ್ಚು ಸಮಯ ಬೇಕು. ಯಶ್ ಅವರು ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. ದೇಶ-ವಿದೇಶಗಳಲ್ಲಿ ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ, ಸ್ಕ್ರಿಪ್ಟ್ ಮಾಡೋಕೆ ಸಮಯ ಬೇಕು. ಆದರೆ ಕಥೆಯಲ್ಲಿ ಶರತ್ ವ್ಯಕ್ತಿತ್ವ ಯಾವುದೇ ಕಾರಣಕ್ಕೂ ಬದಲಾಗಲ್ಲ'' ಎಂದು ಪೋಸ್ಟ್ ಹಾಕಿದ್ದರು.

  ಅದ್ದೂರಿ ಸೆಟ್‌ನಲ್ಲಿ ರೆಮೋ ಚಿತ್ರೀಕರಣ ಶುರು ಮಾಡಿದ ಪವನ್ ಒಡೆಯರ್ಅದ್ದೂರಿ ಸೆಟ್‌ನಲ್ಲಿ ರೆಮೋ ಚಿತ್ರೀಕರಣ ಶುರು ಮಾಡಿದ ಪವನ್ ಒಡೆಯರ್

  ಇದೇ ವಿಚಾರವಾಗಿ ಕನ್ನಡ ಪಿಕ್ಚರ್ಸ್ ಯೂಟ್ಯೂಬ್ ವಾಹಿನಿ ಜೊತೆ ಮಾತನಾಡಿರುವ ಪವನ್ ಒಡೆಯರ್, 'ಈ ವಿಷಯದ ಬಗ್ಗೆ ಈಗ ಮಾತನಾಡಬೇಕೋ ಅಥವಾ ಮಾತಾಡಬಾರದೋ ಗೊತ್ತಿಲ್ಲ. ಆದರೂ ಅಂತಹದೊಂದು ಆಗ್ರಹ ಹೆಚ್ಚಾಗುತ್ತಿರುವುದರಿಂದ ಆ ಬಗ್ಗೆ ಹೇಳ್ತೇನೆ. ಗೂಗ್ಲಿ 2 ಚಿತ್ರದ ಬಗ್ಗೆ ನಾನಾಗಲಿ ಅಥವಾ ಯಶ್ ಅವರಾಗಲಿ ಯೋಚಿಸಿಲ್ಲ. ಆ ಸಂಬಂಧ ಚರ್ಚೆ ಕೂಡ ಮಾಡಿಲ್ಲ. ಆದರೆ ಮಾಡುವ ಸಾಧ್ಯತೆ ಇದ್ದರೆ ಅದಕ್ಕೆ ಹೆಚ್ಚು ಸಮಯ ಬೇಕು. ಯಶ್ ಈಗ ಬಹುದೊಡ್ಡ ಸ್ಟಾರ್. ಅವರ ಇಮೇಜ್‌ಗೆ ತಕ್ಕಂತೆ ಸ್ಕ್ರಿಪ್ಟ್ ಮಾಡಬೇಕು'' ಎಂದಿದ್ದಾರೆ.

  ''ಸದ್ಯದ ಮಟ್ಟಿಗೆ ಗೂಗ್ಲಿ 2 ಶುರು ಮಾಡ್ತಿದ್ದೇನೆ ಎನ್ನುವುದಿಲ್ಲ. ಆದರೆ ಖಂಡಿತಾ ಮಾಡುವ ಆಸೆ ಇದೆ. ಈಗಿನ ಪರಿಸ್ಥಿತಿ, ಟ್ರೆಂಡ್‌ಗೆ ತಕ್ಕಂತೆ ಸ್ಕ್ರಿಪ್ಟ್ ಮಾಡಬೇಕು, ಆಮೇಲೆ ಯಶ್ ಅವರನ್ನು ಅಪ್ರೋಚ್ ಮಾಡ್ತೇನೆ'' ಎಂದು ಪವನ್ ಒಡೆಯರ್ ಹೇಳಿದ್ದಾರೆ. ''ಗೂಗ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್ ಆದ ಚಿತ್ರ. ಆ ಕಥೆ ಮುಂದುವರಿಸಬೇಕು ಅಂದ್ರೆ ಸುಖಾಸುಮ್ಮನೆ ಮಾಡೋದಲ್ಲ. ಅದಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿ, ಬಹಳ ಇಂಟರೆಸ್ಟಿಂಗ್ ಆಗಿ ಮತ್ತು ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೇಕಾಗುತ್ತದೆ'' ಎಂದು ತಿಳಿಸಿದರು.

  Director Pavan Wadeyar reveals interesting news about Googly 2

  2013ರಲ್ಲಿ ತೆರೆಕಂಡಿದ್ದ 'ಗೂಗ್ಲಿ' ಸಿನಿಮಾ ಯಶ್ ವೃತ್ತಿ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿದೆ. ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾದಲ್ಲಿ ಯಶ್, ಕೃತಿ ಕರಬಂಧ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದರು. ಜೆ ಶ್ರೀಧರ್ ಸಂಗೀತ ನೀಡಿದ್ದರು.

  ಪವನ್ ಒಡೆಯರ್ ಸದ್ಯ ರೆಮೋ ಸಿನಿಮಾ ಮಾಡ್ತಿದ್ದಾರೆ. ಇಶಾನ್ ಮತ್ತು ಆಶಿಕಾ ರಂಗನಾಥ್ ನಟಿಸಿರುವ ಈ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಸಿಆರ್ ಮನೋಹರ್ ಈ ಚಿತ್ರ ನಿರ್ಮಿಸುತ್ತಿದ್ದು, ಬಹಳ ಅದ್ಧೂರಿಯಾಗಿ ತೆರೆಗೆ ಬರುವ ಹಾದಿಯಲ್ಲಿದೆ.

  ಇನ್ನು ಯಶ್ ಬಗ್ಗೆ ಹೇಳುವುದಾದರೇ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮುಗಿಸಿರುವ ಯಶ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಈ ಮೆಗಾ ಚಿತ್ರ ತಯಾರಾಗಿದ್ದು, 2022ರ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಬಿಟ್ಟು ಬೇರೆ ಯಾವ ಚಿತ್ರಕ್ಕೂ ಯಶ್ ಕಾಲ್‌ಶೀಟ್ ಕೊಟ್ಟಿಲ್ಲ.

  English summary
  Director Pawan Wodeyar reveals interesting news about 'Googly 2'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X