'ದ್ವಿತ್ವ' ಪೋಸ್ಟರ್ ಮೇಕಿಂಗ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಪವನ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ದ್ವಿತ್ವ' ಸಿನಿಮಾ ಪೋಸ್ಟರ್ ವಿಚಾರಕ್ಕೆ ಭಾರಿ ಚರ್ಚೆ ಹುಟ್ಟುಹಾಕಿದೆ. ದ್ವಿತ್ವ ಚಿತ್ರದ ಟೈಟಲ್ ಪೋಸ್ಟರ್ ನಕಲು ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆ ಅದಕ್ಕೆ ಸ್ಪಷ್ಟೀಕರಣ ನೀಡುವ ಕೆಲಸಕ್ಕೆ ಚಿತ್ರತಂಡ ಮುಂದಾಗಿದೆ.

ಡಿಸೈನರ್ ಆದರ್ಶ್ 'ದ್ವಿತ್ವ' ಪೋಸ್ಟರ್ ಕುರಿತು ಸ್ಪಷ್ಟನೆ ನೀಡಿದ್ದು, 'ಈ ಪೋಸ್ಟರ್ ಡಿಸೈನ್ ಕೃತಿಚೌರ್ಯದ್ದಲ್ಲ ಬದಲಿಗೆ 'ಷಟರ್ ಸ್ಟಾಕ್' ಹೆಸರಿನ ಚಿತ್ರಗಳನ್ನು ಮಾರುವ ವೆಬ್‌ನಿಂದ ಖರೀದಿಸಿದ್ದು'' ಎಂದು ತಿಳಿಸಿದ್ದರು. ಡಿಸೈನ್ ಖರೀದಿ ಮಾಡಿದ್ದು ಎನ್ನುವ ವಿಚಾರ ತಿಳಿಯದ ನಿರ್ದೇಶಕ ಪವನ್ ಕುಮಾರ್ ಸಂಪೂರ್ಣ ಕೀರ್ತಿ ಡಿಸೈನರ್‌ಗೆ ಕೊಟ್ಟಿದ್ದರು. ಇದೀಗ, ಪೋಸ್ಟರ್ ವಿವಾದದ ಕುರಿತು ನಿರ್ದೇಶಕ ಪವನ್ ಕುಮಾರ್ ಮಾತನಾಡಿದ್ದು, ದ್ವಿತ್ವ ಪೋಸ್ಟರ್ ಆಗಿದ್ದು ಹೇಗೆ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ...

ಇದು ನನ್ನ ಅರಿವಿಗೆ ಬರಲಿಲ್ಲ

ಇದು ನನ್ನ ಅರಿವಿಗೆ ಬರಲಿಲ್ಲ

''ಲೂಸಿಯಾ, ಯೂಟರ್ನ್ ಚಿತ್ರದಿಂದಲೂ ನನ್ನ ಜೊತೆ ಕೆಲಸ ಮಾಡಿದ್ದ ಆದರ್ಶ್ ದ್ವಿತ್ವ ಪೋಸ್ಟರ್ ಮಾಡಲಿ ಎಂದು ಸೂಚಿಸಿದ್ದು ನಾನೇ. ಆದರ್ಶ್ ಡಿಸೈನ್ ಮಾಡಿ ಕಳುಹಿಸಿದಾಗ ನನಗೆ ಮೂಲ ಪೋಸ್ಟರ್ ನೋಡಿರಲಿಲ್ಲ. ಅವರು ಖರೀದಿ ಮಾಡಿದ್ದ ಇಮೇಜ್ ಬಳಸಿಕೊಂಡು ದ್ವಿತ್ವ ಡಿಸೈನ್ ಮಾಡಿದ್ದಾರೆ. ಇದು ನನಗೆ ಮೊದಲೇ ಗೊತ್ತಿದ್ದರೇ ಈ ಪೋಸ್ಟರ್ ಬಳಸುತ್ತಿರಲಿಲ್ಲ'' ಎಂದು ಪವನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಸಂವಹನದ ಕೊರತೆಯಿಂದ ಇದು ಆಗಿದೆ

ಸಂವಹನದ ಕೊರತೆಯಿಂದ ಇದು ಆಗಿದೆ

''ಕದ್ದು ನಮ್ಮ ಸಿನಿಮಾ ಪೋಸ್ಟರ್ ಮಾಡಬೇಕು ಎಂಬ ಉದ್ದೇಶ ನನಗೂ ಹಾಗೂ ಆದರ್ಶ್‌ಗೂ ಇರಲಿಲ್ಲ. ನಮ್ಮ ನಡುವಿನ ಕಮ್ಯೂನಿಕೇಷನ್ ಅಂತರದಿಂದ ಇಂತಹದೊಂದು ಸಮಸ್ಯೆ ಉದ್ಭವಿಸಿದೆ. ಪ್ರೇಕ್ಷಕರ ಸ್ಥಾನದಲ್ಲಿ ನಾನು ಇದ್ದಿದ್ದರೆ ನಿಮ್ಮ ಹಾಗೆ ಭಾವಿಸುತ್ತಿದ್ದೆ. ಆದರೆ, ಉದ್ದೇಶದಿಂದ ಆಗಿದ್ದಲ್ಲ'' ಎಂದು ಪವನ್ ಕುಮಾರ್ ಹೇಳಿದ್ದಾರೆ.

ಆದರ್ಶ್ ಡಿಸೈನ್ ಮಾಡಿದ್ದು ಅಂದುಕೊಂಡಿದ್ದೆ

ಆದರ್ಶ್ ಡಿಸೈನ್ ಮಾಡಿದ್ದು ಅಂದುಕೊಂಡಿದ್ದೆ

ಆದರ್ಶ್ ಈ ಪೋಸ್ಟರ್ ಮೊದಲು ಕಳುಹಿಸಿದಾಗ ನಾನು ಅಂದುಕೊಂಡೆ, ಆದರ್ಶ್ ಅವರೇ ಈ ಡಿಸೈನ್ ಮಾಡಿರುವುದು ಅಂತ. ಆ ಕಡೆ ಆದರ್ಶ್ ನನ್ನ ಕಲ್ಪನೆಯನ್ನು ಅವರಿಗೆ ತೋರಿಸಿದ್ದೇನೆ, ಅದಕ್ಕೆ ಪುನೀತ್ ಫೇಸ್ ಹಾಕಿ ಎಂದಿದ್ದಾರಂತೆ. ಆದರೆ, ಒಂದೇ ಒಂದು ಸಲ ಆದರ್ಶ್ ಈ ಬಗ್ಗೆ ಲೈಸೆನ್ಸ್ ಇಮೇಜ್ ಅಂತ ಹೇಳಿದ್ರೆ ಈ ಪೋಸ್ಟರ್ ಆಗ್ತಿರಲಿಲ್ಲ, ಇದು ಅಚಾನಕ್ ಆದ ತಪ್ಪು ಎಂದು ತಿಳಿಸಿದ್ದಾರೆ.

ವಿನ್ಯಾಸಕರು ಎಚ್ಚರಿಕೆ ವಹಿಸಿ

ವಿನ್ಯಾಸಕರು ಎಚ್ಚರಿಕೆ ವಹಿಸಿ

''ಈ ಘಟನೆ ಡಿಸೈನರ್‌ಗಳಿಗೆ ಒಂದು ಪಾಠ ಆಗಿದೆ. ಇನ್ಮುಂದೆ ಯಾವುದೇ ಖರೀದಿ ಮಾಡಿದ ಪೋಸ್ಟರ್ ಅಥವಾ ಡಿಸೈನ್ ಬಳಸಿ ಕೆಲಸ ಮಾಡಿದ್ರೆ ಅದನ್ನು ಮೊದಲೇ ನಿರ್ದೇಶಕ-ನಿರ್ಮಾಪಕರ ಗಮನಕ್ಕೆ ತನ್ನಿ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ'' ಎಂದು ಕಿವಿ ಮಾತು ಹೇಳಿದರು.

More from Filmibeat

English summary
Is Dvitva Movie Poster Copied? Director Pawan Kumar has gives clarification about this poster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X