ಪವನ್ ಕುಮಾರ್‌ರಿಂದ ದೊಡ್ಡ ಪ್ರಕಟಣೆ: ಹೊಸ ಸುದ್ದಿ ಏನಿರಬಹುದು?
'ದ್ವಿತ್ವ' ಚಿತ್ರದ ಪೋಸ್ಟರ್ ಮೂಲಕ ಭಾರಿ ಸುದ್ದಿಯಲ್ಲಿದ್ದ ನಿರ್ದೇಶಕ ಪವನ್ ಕುಮಾರ್ ಈಗ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ.
ಜುಲೈ 8 ರಂದು ಮಧ್ಯಾಹ್ನ 3 ಗಂಟೆಗೆ 'ನಮ್ಮ ಕಡೆಯಿಂದ ದೊಡ್ಡ ಪ್ರಕಟಣೆ' ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಆದರೆ ಈ ಪ್ರಕಟಣೆ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಎನ್ನುವುದು ಖಾತ್ರಿಯಾಗಿಲ್ಲ.
ಥಟ್ ಅಂತ ಈ ಪೋಸ್ಟ್ ನೋಡಿದ ನೆಟ್ಟಿಗರು ದ್ವಿತ್ವ ಚಿತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಇರಬಹುದು ಎಂದು ಯೋಚಿಸಿದ್ದಾರೆ. 'ದ್ವಿತ್ವ' ನಾಯಕಿ ಅಥವಾ ಬೇರೆ ಕಲಾವಿದನ ಎಂಟ್ರಿ ಕುರಿತು ಘೋಷಿಸುತ್ತಿರಬೇಕು ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ.

ಆದರೆ, ಇದು ಹೊಂಬಾಳೆ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ ದ್ವಿತ್ವ ಸಿನಿಮಾಗೆ ಸಂಬಂಧಿಸಿದ್ದಲ್ಲ. ಇದು ಪವನ್ ಕುಮಾರ್ ಅವರ ಪಿಕೆ ಸ್ಟುಡಿಯೋಸ್ ಪ್ರಕಟಣೆ.
ಬಹುಶಃ ಪವನ್ ಕುಮಾರ್ ವೆಬ್ ಸಿರೀಸ್ ಕುರಿತು ಪ್ರಕಟಿಸಬಹುದು ಎಂಬ ನಿರೀಕ್ಷೆಯೂ ಇದೆ. ಈಗಾಗಲೇ ತೆಲುಗಿನಲ್ಲಿ ವೆಬ್ ಸಿರೀಸ್ ಮಾಡಿದ್ದಾರೆ. ಈಗ ಕನ್ನಡದಲ್ಲಿ ವೆಬ್ ಸಿರೀಸ್ ಶುರು ಮಾಡುವ ಕುರಿತು ವಿಷಯ ತಿಳಿಸಬಹುದು ಎಂದು ಕಾಮೆಂಟ್ ಮೂಲಕ ಕಾತುರತೆ ತೋರುತ್ತಿದ್ದಾರೆ ಫಾಲೋವರ್ಸ್.
'ದ್ವಿತ್ವ' ಚಿತ್ರದ ಟೈಟಲ್ ಪೋಸ್ಟರ್ ಇತ್ತೀಚಿಗಷ್ಟೆ ಅನಾವರಣಗೊಂಡಿದ್ದು, ಪೋಸ್ಟರ್ ಕಾಪಿ ಮಾಡಲಾಗಿದೆ ಎನ್ನುವ ವಿಚಾರಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಪವನ್ ಕುಮಾರ್. ನಂತರ ಇದು ಕಾಪಿ ಅಲ್ಲಾ, ಡಿಸೈನ್ ಖರೀದಿ ಮಾಡಿ ಪೋಸ್ಟರ್ ಮಾಡಲಾಗಿತ್ತು. ಡಿಸೈನರ್ ಮತ್ತು ನನ್ನ ನಡುವಿನ ಕಮ್ಯೂನಿಕೇಶನ್ ಗ್ಯಾಪ್‌ನಿಂದ ಇಂತಹ ಘಟನೆ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು.
ಇನ್ನು ಪವನ್ ಕುಮಾರ್ ಕುಮಾರ್ ನಿರ್ದೇಶಿಸಿರುವ ತೆಲುಗು ವೆಬ್ ಸರಣಿ 'ಕುಡಿ ಎಡಮೈತೆ' ಆಹಾ ಒಟಿಟಿಯಲ್ಲಿ ಜುಲೈ 16 ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











