twitter
    For Quick Alerts
    ALLOW NOTIFICATIONS  
    For Daily Alerts

    ಟಾಲಿವುಡ್ ಗೆ ರಿಮೇಕ್ ಆಗಲಿದೆ 'ಒಂದು ಮೊಟ್ಟೆಯ ಕಥೆ'

    |

    ಕನ್ನಡದ ಎಷ್ಟೋ ಸಿನಿಮಾಗಳು ಬೇರೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿವೆ. ಆ ಸಾಲಿಗೆ ಈಗ 'ಒಂದು ಮೊಟ್ಟೆಯ ಕಥೆ' ಕೂಡ ಸೇರಕೊಳ್ಳಲಿದೆ. ಈ ಮೂಲಕ ತೆಲುಗು ಜನರು ಸಹ ಬೋಳು ತಲೆಯ ಗೋಳು ಕೇಳುವ ಅವಕಾಶ ಪಡೆಯಲಿದ್ದಾರೆ.

    ನಿರ್ದೇಶಕ ಪವನ್ ಕುಮಾರ್ ಇತ್ತೀಚಿಗಷ್ಟೆ 'ಯೂ ಟರ್ನ್' ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಿದ್ದರು. ಕಳೆದ ವಾರ ತಾನೇ ರಿಲೀಸ್ ಆಗಿದ್ದ ಈ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ. ಇದರಿಂದ ಪವನ್ ಆತ್ಮ ವಿಶ್ವಾಸ ಕೂಡ ಹೆಚ್ಚಾಗಿದೆ. ಅದೇ ಸಂತಸದಲ್ಲಿ ಅವರು 'ಒಂದು ಮೊಟ್ಟೆಯ ಕಥೆ' ಸಿನಿಮಾವನ್ನು ಕೂಡ ಟಾಲಿವುಡ್ ನಲ್ಲಿ ಮಾಡುವ ಮನಸ್ಸು ಮಾಡಿದ್ದಾರೆ.

    director pawan kumar planning to remake ondu motteya kathe in tollywood

    'ಒಂದು ಮೊಟ್ಟೆಯ ಕಥೆ' ರಿಮೇಕ್ ಬಗ್ಗೆ ಇತ್ತೀಚಿಗಷ್ಟೆ ಪವನ್ ಮಾತನಾಡಿದ್ದಾರೆ. ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಪವನ್ ನಿರ್ಮಾಣ ಮಾಡಿದ್ದರು. ಅದೇ ರೀತಿ ಈಗ ತೆಲುಗಿನಲ್ಲಿ ಇನ್ನೊಬ್ಬ ನಿರ್ದೇಶಕರ ಕೈ ನಲ್ಲಿ ಚಿತ್ರವನ್ನು ಮಾಡಿಸುವ ಪ್ಲಾನ್ ಪವನ್ ಅವರದ್ದು.

    ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

    ಸಿನಿಮಾವನ್ನು ರಿಮೇಕ್ ಮಾಡುವ ಆಲೋಚನೆ ಪವನ್ ಕುಮಾರ್ ಅವರಿಗೆ ಇದೆ. ಆದರೆ, ಸದ್ಯಕ್ಕೆ ಇನ್ನೂ ರಿಮೇಕ್ ಬಗ್ಗೆ ಯಾವುದು ಫೈನಲ್ ಆಗಿಲ್ಲವಂತೆ.

    director pawan kumar planning to remake ondu motteya kathe in tollywood

    ಅಂದಹಾಗೆ, 'ಲೂಸಿಯಾ' 'ಯೂ ಟರ್ನ್', 'ಕಿರಿಕ್ ಪಾರ್ಟಿ', 'ರಾಮಾ ರಾಮಾ ರೇ' ಬೇರೆ ಭಾಷೆಗಳಿಗೆ ರಿಮೇಕ್ ಆಗಿರುವ ಇತ್ತೀಚಿಗಿನ ಪ್ರಮುಖ ಸಿನಿಮಾಗಳಾಗಿವೆ.

    English summary
    After 'U Tern' kannada director Pawan Kumar planning to remake 'Ondu Motteya Kathe' in tollywood.
    Wednesday, September 19, 2018, 10:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X