ನಿರ್ದೇಶಕ ಪವನ್ ಕುಮಾರ್ ಬದುಕನ್ನೇ ಬದಲಿಸಿದ ಆ ಕ್ಷಣ

'ಲೂಸಿಯಾ' ಸಿನಿಮಾ ಮೂಲಕ ಕನ್ನಡ ಸಿನಿ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಿರ್ದೇಶಕ ಪವನ್ ಕುಮಾರ್, ತಮ್ಮ ಬದುಕಿನಲ್ಲಿ ನಡೆದ ಅತಿ ಮುಖ್ಯ ಘಟನೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಲಾಕ್‌ಡೌನ್ ನಿಂದ ಮನೆಯಲ್ಲೇ ಉಳಿದಿರುವ ಪವನ್ ಕುಮಾರ್, ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುವ, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ದಿನಗೂಲಿ ನೌಕರರಿಗೆ ಹಣ ತಲುಪಿಸುವ ಕಾರ್ಯದಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದರು. ಸುಮಾರು 10 ಲಕ್ಷ ಹಣವನ್ನು 500 ಕ್ಕೂ ಹೆಚ್ಚು ದಿನಗೂಲಿ ನೌಕರರಿಗೆ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಅವರು ಮಾಡಿ ಮಾಡಿದ್ದಾರೆ.

ನಂತರ ಈಗ ಲಾಕ್‌ಡೌನ್ ನಿಂದ ಮುರಿದ ಆರ್ಥಿಕತೆಯನ್ನು ಮೇಲೆತ್ತುವ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆಗಳನ್ನು ಪವನ್ ಕುಮಾರ್ ಆರಂಭಿಸಿದ್ದಾರೆ. ಇದರ ನಡುವೆಯೇ ಪವನ್ ಕುಮಾರ್, ತಮ್ಮದೇ ಜೀವನದಲ್ಲಿ ನಡೆದ, ತಮ್ಮ ಜೀವನ ಬದಲಾಗಲು ಕಾರಣವಾದ ಒಂದು ಪ್ರಮುಖ ಘಟನೆಯನ್ನು ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಅವಕಾಶ ಅರಸಿ ಮುಂಬೈಗೆ ತೆರಳಿದ್ದ ಪವನ್

ಹೆಚ್ಚಿನ ಅವಕಾಶ ಅರಸಿ ಮುಂಬೈಗೆ ತೆರಳಿದ್ದ ಪವನ್

ಬೆಂಗಳೂರಿನವರಾದ ಪವನ್ ಕುಮಾರ್, ಇಲ್ಲಿಯೇ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಂತರ ಹೆಚ್ಚಿನ ಅವಕಾಶಗಳನ್ನು ಅರಸಿ 2005-2006 ರ ಸಮುಯದಲ್ಲಿ ಮುಂಬೈ ಗೆ ತೆರಳಿದರು. ಅಲ್ಲಿ ಸುಮಾರು 15 ತಿಂಗಳುಗಳ ಕಾಲ ರಂಗಭೂಮಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

ಮುಂಬೈ ನಲ್ಲಿ ನಿಂತ ನೀರಂತಾಗಿದ್ದ ಪವನ್ ಕುಮಾರ್

ಮುಂಬೈ ನಲ್ಲಿ ನಿಂತ ನೀರಂತಾಗಿದ್ದ ಪವನ್ ಕುಮಾರ್

ಪವನ್ ಅವರೇ ಹೇಳುವಂತೆ, ಮುಂಬೈ ನಗರದಲ್ಲಿದ್ದಾಗ ನಾನು ಎತ್ತ ಸಾಗುತ್ತಿದ್ದೇನೆ ಎಂಬ ಅರಿವೇ ನನಗೆ ಇರಲಿಲ್ಲ, ನನ್ನ ಜೀವನ ನಿಂತಲ್ಲಿಯೇ ನಿಂತಿತ್ತು, ಕೆಲವು ಉತ್ತಮ ವ್ಯಕ್ತಿಗಳನ್ನು ಭೇಟಿ ಮಾಡಿದೆನಾದರೂ ನನ್ನ ವೈಯಕ್ತಿಕ ಪ್ರಗತಿ ಆಗಲಿಲ್ಲ. ಇದು ಬಹುವಾಗಿ ನನ್ನನ್ನು ಕಾಡುತ್ತಿತ್ತು, ಅವಕಾಶಗಳನ್ನು ಅರಸಿ ಬಂದವನಿಗೆ ಏನೂ ಇಲ್ಲದಾಗಿತ್ತು.

ನಟ ರಾಜೇಂದ್ರ ಜುಟ್ಸಿಯನ್ನು ಆಕಸ್ಮಿಕವಾಗಿ ಭೇಟಿಯಾದ ಪವನ್

ನಟ ರಾಜೇಂದ್ರ ಜುಟ್ಸಿಯನ್ನು ಆಕಸ್ಮಿಕವಾಗಿ ಭೇಟಿಯಾದ ಪವನ್

ಹೀಗೆ ಒಂದು ದಿನ ಫೃಥ್ವಿ ಚಿತ್ರಮಂದಿರದ ಕಾಫಿ ಶಾಪ್‌ನಲ್ಲಿ ಕೂತಿದ್ದಾಗ ಖ್ಯಾತ ರಂಗಭೂಮಿ, ಸಿನಿಮಾ ನಟ ರಾಜೇಂದ್ರನಾಥ ಜುಟ್ಸಿ ಅವರು ಕಂಡರಂತೆ. ಕೂಡಲೇ ಅವರ ಬಳಿ ತೆರಳಿ ತಮ್ಮ ಪರಿಚಯ ಮಾಡಿಕೊಂಡ ಪವನ್, ರಂಗಭೂಮಿಯಲ್ಲಿನ ತಮ್ಮ ಅನುಭವ, ತಾವು ಬರೆದ ನಾಟಕ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಿ, ನನಗೆ ಮುಂದೆ ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದರಂತೆ.

ರಾಜೇಂದ್ರ ನೀಡಿದರು ಅಮೂಲ್ಯ ಸಲಹೆ

ರಾಜೇಂದ್ರ ನೀಡಿದರು ಅಮೂಲ್ಯ ಸಲಹೆ

ಅವಕಾಶದ ನಿರೀಕ್ಷೆಯಲ್ಲಿ ಪವನ್ ಅವರು ರಾಜೇಂದ್ರ ಪ್ರಶ್ನೆ ಕೇಳಿದ್ದರು. ಆದರೆ ರಾಜೇಂದ್ರ ಜುಟ್ಸಿ ಪವನ್ ಅವರ ಎಲ್ಲಾ ಮಾತು ಕೇಳಿ, 'ಮನೆಗೆ ಹೋಗು' ಎಂದು ಬಿಟ್ಟರಂತೆ. ರಾಜೇಂದ್ರ ಉತ್ತರ ಕೇಳಿ ಪವನ್‌ ಗೆ ಆಶ್ಚರ್ಯವಾಗಿದೆ. ಆಗ ರಾಜೇಂದ್ರ ಹೇಳಿದ್ದು, ''ಏನಾದರೂ ಮಾಡುವುದಾದರೆ ನಿನ್ನ ಊರಿನಲ್ಲಿ ಮಾಡು, ನಿನ್ನ ಜನಗಳೊಂದಿಗೆ ಮಾಡು, ನಿನ್ನ ಜನಗಳಿಗಾಗಿ ಮಾಡು, ನಿಮ್ಮದೇ ಊರಿನ ಗಿರೀಶ್ ಕಾಸರವಳ್ಳಿ ಇಡೀಯ ದೇಶದಲ್ಲೇ ಖ್ಯಾತರು, ಅವರ ಸಿನಿಮಾಗಳಿಗಾಗಿ ಜನ ಕಾಯುತ್ತಾರೆ'' ಎಂದು ಕಾಸರವಳ್ಳಿ ಅವರನ್ನು ಉದಾಹರಣೆಯಾಗಿ ಸಹ ನೀಡಿದರಂತೆ ರಾಜೇಂದ್ರ.

ಮುಂಬೈ ಬಿಟ್ಟು ಬೆಂಗಳೂರಿಗೆ ವಾಪಸ್ಸಾದ ಪವನ್

ಮುಂಬೈ ಬಿಟ್ಟು ಬೆಂಗಳೂರಿಗೆ ವಾಪಸ್ಸಾದ ಪವನ್

ರಾಜೇಂದ್ರ ಹೇಳಿದ ಮಾತು ಪವನ್ ತಲೆಯಲ್ಲಿ ತಿರುಗುತ್ತಲೇ ಇತ್ತು. ಕೆಲವೇ ತಿಂಗಳಲ್ಲಿ ಪವನ್ ಮುಂಬೈ ಬಿಟ್ಟು ಬೆಂಗಳೂರಿಗೆ ವಾಪಸ್ಸಾದರು. ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದರು. ರಂಗಭೂಮಿ, ಸಿನಿಮಾ ಎಲ್ಲದರಲ್ಲೂ ಕೈ ಆಡಿಸಿದರು. ಒಂದೊಂದೇ ಮೆಟ್ಟಿಲು ಏರಿ ಇಂದು ಕನ್ನಡ ಸಿನಿರಂಗದ ಭರವಸೆಯ ನಿರ್ದೇಶಕರು ಅವರು.

''ನಿಮ್ಮವರೊಂದಿಗೆ, ನಿಮ್ಮವರಿಗಾಗಿ ಹೊಸತೊಂದನ್ನು ಮಾಡಿ''

''ನಿಮ್ಮವರೊಂದಿಗೆ, ನಿಮ್ಮವರಿಗಾಗಿ ಹೊಸತೊಂದನ್ನು ಮಾಡಿ''

ಕತೆಯ ಮೂಲಕ ಪವನ್ ಹೇಳ ಬಯಸಿದ್ದು ಇಷ್ಟೆ. ಲಾಕ್‌ಡೌನ್ ಕಾರಣದಿಂದ ಹಲವರು ತಮ್ಮ ಊರುಗಳಿಗೆ, ತಮ್ಮ ಪಟ್ಟಣಗಳಿಗೆ ಹೋಗಿದ್ದಾರೆ. ಅಲ್ಲಿಯೇ ಇದ್ದು ಏನಾದರೂ ಹೊಸದು ಮಾಡಲು ಸಾಧ್ಯವಾ ಯೋಚಿಸಿ, ಏನಾದರೂ ಹೊಸ ಪ್ರಯತ್ನ ಮಾಡಿ. ಏನಾದರೂ ಮಾಡಿ, ನಿಮ್ಮ ಜನಗಳೊಟ್ಟಿಗೆ, ನಿಮ್ಮ ಜನಗಳಿಗಾಗಿ ಮಾಡಿ.

More from Filmibeat

English summary
Director Pawan Kumar shares a incident in Facebook which changed his life. He give message that do something for your people and with your people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X