twitter
    For Quick Alerts
    ALLOW NOTIFICATIONS  
    For Daily Alerts

    'ಲೂಸಿಯಾ' ನಿರ್ದೇಶಕ ಪವನ್ ಕುಮಾರ್ ಹೆಸರಲ್ಲಿ ವಂಚನೆ

    |

    ನಟ, ನಿರ್ದೇಶಕ ಪವನ್ ಕುಮಾರ್ ಅವರ ಹೆಸರನ್ನು ಬಳಸಿಕೊಂಡು ಕೆಲವರು ವಂಚನೆಯ ಜಾಲ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಚಿತ್ರರಂಗದಲ್ಲಿ ಅನೇಕರು ಅವಕಾಶ ನೀಡುವುದಾಗಿ ನಂಬಿಸಿ ವಿವಿಧ ರೀತಿಯಲ್ಲಿ ವಂಚಿಸುವುದು ಸಾಮಾನ್ಯ. ಇದು ಡಿಜಿಟಲ್ ರೂಪಕ್ಕೂ ಬಂದಿದೆ. ಪವನ್ ಕುಮಾರ್ ಕಲಾವಿದರ ಕಾರ್ಡ್ ಮಾಡಿಸಿಕೊಡುತ್ತಾರೆ. ಮುಂದೆ ಆಡಿಷನ್ ಕೂಡ ಮಾಡುತ್ತಾರೆ ಎಂದು ಪ್ರಭಾ ಆನಂದ್ ಎಂಬ ಹೆಸರಿನಿಂದ ನೂರಾರು ಮಂದಿಗೆ ಸಂದೇಶಗಳನ್ನು ಕಳಿಸಿ ಹಣ ಸಂಗ್ರಹಿಸಿದ್ದಾರೆ.

    Recommended Video

    ಮದುವೆಗೂ ಮುಂಚೆ ಅಪ್ಪನಾದ ಹಾರ್ದಿಕ್ ಪಾಂಡ್ಯ | Hardik Pandya

    ತಮ್ಮ ಫೇಸ್ ಬುಕ್ ಮೆಸೆಂಜರ್‌ನಲ್ಲಿದ್ದ ನೂರಾರು ಮೆಸೇಜ್‌ಗಳನ್ನು ಓದಿದ ಪವನ್ ಅವರಿಗೆ ತಮ್ಮ ಹೆಸರಿನಲ್ಲಿ ವಂಚನೆ ನಡೆದಿರುವುದು ಗೊತ್ತಾಗಿದೆ. ಕೂಡಲೇ ಎಚ್ಚೆತ್ತ ಅವರು ತಮಗೆ ಬಂದಿರುವ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಲೈವ್ ಬಂದು, ಇಂತಹ ವಂಚನೆಯ ಕುರಿತು ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಮುಂದೆ ಓದಿ...

    ಹೆಸರು ದುರ್ಬಳಕೆ

    ಹೆಸರು ದುರ್ಬಳಕೆ

    ನನ್ನ ಹೆಸರನ್ನು ಬಳಸಿ ಪ್ರಭಾ ಎಂಬ ಹೆಸರಲ್ಲಿ ತುಂಬಾ ಜನರಿಗೆ ಮೆಸೇಜ್ ಕಳಿಸಿದ್ದಾರೆ. ಪವನ್ ಅವರಿಗೆ ನನ್ನ ಪರಿಚಯ ಇದೆ. ನಾವು ಆರ್ಟಿಸ್ಟ್ ಕಾರ್ಡ್ ಮಾಡಿಕೊಡುತ್ತೇವೆ, ಆಡಿಷನ್ಸ್ ಇರುತ್ತದೆ. ನೀವು ವಿವರ ಸಲ್ಲಿಸಿದರೆ ಅದನ್ನು ಅವರಿಗೆ ಕಳುಹಿಸುತ್ತೇವೆ- ಈ ರೀತಿ ಬೇರೆ ಬೇರೆ ಸಂದೇಶಗಳು ಹೋಗಿ ಅದಕ್ಕೆ ಹಣ ಚಾರ್ಜ್ ಮಾಡುವ ಮೆಸೇಜ್ ಕಳಿಸಿದ್ದಾರೆ. ಒಂದು ಮೊಟ್ಟೆಯ ಕಥೆ ಚಿತ್ರತಂಡದ ಹೆಸರನ್ನೂ ಬಳಸಿಕೊಳ್ಳಲಾಗಿದೆ ಎಂದು ಪವನ್ ಹೇಳಿದ್ದಾರೆ.

    ನಿರ್ದೇಶಕರು-ಪ್ರೇಕ್ಷಕರಿಗೆ ವೇದಿಕೆ: 'ಲೂಸಿಯಾ' ಪವನ್ ವಿಶಿಷ್ಟ ಯೋಜನೆ ಆರಂಭನಿರ್ದೇಶಕರು-ಪ್ರೇಕ್ಷಕರಿಗೆ ವೇದಿಕೆ: 'ಲೂಸಿಯಾ' ಪವನ್ ವಿಶಿಷ್ಟ ಯೋಜನೆ ಆರಂಭ

    ಸೈಬರ್ ಪೊಲೀಸರಿಗೆ ದೂರು

    ಸೈಬರ್ ಪೊಲೀಸರಿಗೆ ದೂರು

    ಆದರೆ ಇದು ನಿಜವಲ್ಲ. ಪ್ರಭಾ ಎನ್ನುವವರು ಯಾರೆಂದು ನನಗೆ ತಿಳಿದಿಲ್ಲ. ಈ ರೀತಿಯ ನಾನಾಗಲೀ, ನನ್ನ ತಂಡದ ಟೀಮ್ ಕಡೆಯಿಂದ ಈ ರೀತಿ ಯಾವುದೇ ಆಡಿಷನ್ ಮಾಡುತ್ತಿಲ್ಲ. ಈ ರೀತಿ ಮೆಸೇಜ್‌ಗಳು ಯಾರಿಗಾದರೂ ಬಂದಿದ್ದರೆ, ಆ ವ್ಯಕ್ತಿಗಳ ಜತೆ ಮಾತನಾಡಿದ್ದರೆ, ದುಡ್ಡು ಕೊಟ್ಟಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಬಹುದು. ನನಗೆ ಸಿಕ್ಕಿರುವ ಮಾಹಿತಿ ಆಧಾರದಲ್ಲಿ ಈಗಾಗಲೇ ಸೈಬರ್ ಕ್ರೈಂಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ಸಂಘಕ್ಕೆ ಹೋಗಿಯೇ ಮಾಡಿಸಬೇಕು

    ಸಂಘಕ್ಕೆ ಹೋಗಿಯೇ ಮಾಡಿಸಬೇಕು

    ಇದು ಒಂದೇ ಕೇಸ್ ಅಲ್ಲ. ಇಂದಿನ ದಿನಗಳಲ್ಲಿ ತುಂಬಾ ನಡೆಯುತ್ತಿದೆ. ಅಲ್ಲದೆ, ಸಿನಿಮಾಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಯಾವುದಕ್ಕೂ ಡಿಜಿಟಲ್ ಪೇಮೆಂಟ್ ವಿಚಾರದಲ್ಲಿ ತುಂಬಾ ಪರಿಶೀಲಿಸಿ ಎಲ್ಲವೂ ಸರಿಯಾಗಿದೆ ಎನ್ನುವುದು ಖಾತರಿಯಾದರೆ ಮಾತ್ರವೇ ಮಾಡಿ. ಮುಖ್ಯವಾಗಿ ನಮ್ಮ ಚಿತ್ರೋದ್ಯಮದಲ್ಲಿ ಯಾರೂ ಆರ್ಟಿಸ್ಟ್ ಕಾರ್ಡ್‌ಗಾಗಿ ದುಡ್ಡು ತೆಗೆದುಕೊಳ್ಳುವುದನ್ನು ಆನ್‌ಲೈನ್ ಮೂಲಕ ನಡೆಸೊಲ್ಲ. ನೀವು ಅಸೋಸಿಯೇಷನ್‌ಗೆ ಹೋಗಿ ಅಲ್ಲಿ ಸದಸ್ಯರೊಂದಿಗೆ ಮಾತಾಡಿಯೇ ಕಾರ್ಡ್ ಮಾಡಿಸಿಕೊಳ್ಳಬೇಕಾಗುತ್ತದೆ.

    ಸಿನಿಮಾ ಕಲಿಯುವ ಆಸಕ್ತಿಯಿದೆಯೇ?: ನಿರ್ದೇಶನದ ಪಾಠ ಹೇಳಿಕೊಡುತ್ತಾರೆ ಈ ನಿರ್ದೇಶಕರುಸಿನಿಮಾ ಕಲಿಯುವ ಆಸಕ್ತಿಯಿದೆಯೇ?: ನಿರ್ದೇಶನದ ಪಾಠ ಹೇಳಿಕೊಡುತ್ತಾರೆ ಈ ನಿರ್ದೇಶಕರು

    ಚೆನ್ನಾಗಿ ತಿಳಿದು ಮುಂದುವರಿಯಿರಿ

    ಚೆನ್ನಾಗಿ ತಿಳಿದು ಮುಂದುವರಿಯಿರಿ

    ಹೀಗಾಗಿ ಆನ್‌ಲೈನ್ ಮೂಲಕ ಆಡಿಷನ್, ಸ್ಕ್ರಿಪ್ಟ್ ಓದುತ್ತೇವೆ ಎಂದರೆ, ಮುಖ್ಯವಾಗಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂದೇಶ ಬಂದರೆ ಅದನ್ನು ಸ್ಕ್ಯಾಮ್ ಎಂದೇ ಪರಿಗಣಿಸಿ. ಅದಾದ ಬಳಿಕ ಇನ್ನೂ ರೀಸರ್ಚ್ ಮಾಡಿ, ಅದರಲ್ಲಿ ನಿಜವಿದೆ ಎಂದಾದರೆ ಮಾತ್ರವೇ ಮುಂದೆ ಹೋಗಿ. ಇದು ಬರಿ ನನಗಾಗಿ ಮಾತ್ರ ಹೇಳುತ್ತಿಲ್ಲ. ನಮ್ಮ ಉದ್ಯಮದ ಎಲ್ಲರಿಗೂ ಅಪ್ಲೈ ಆಗುತ್ತದೆ. ನಿಜವಾಗಿಯೂ ಆಡಿಷನ್ ಮಾಡುವುದಕ್ಕೂ ಸ್ಕ್ಯಾಮ್ ರೀತಿ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಇದರಲ್ಲಿ ನಿಮ್ಮ ಸುರಕ್ಷತೆ ಮತ್ತು ಬುದ್ಧಿ ಬಳಸಿ ಮುಂದುವರಿಯಿರಿ ಎಂದು ಸಲಹೆ ನೀಡಿದ್ದಾರೆ.

    ನಾನು ಆನ್‌ಲೈನ್ ವ್ಯವಹಾರ ನಡೆಸೊಲ್ಲ

    ನಾನು ಆನ್‌ಲೈನ್ ವ್ಯವಹಾರ ನಡೆಸೊಲ್ಲ

    ಯುಪಿಐ ಪೇಮೆಂಟ್ ಮಾಡಬೇಕಾದರೆ ಸಾಮಾನ್ಯ ಮಾಹಿತಿ ತಿಳಿದುಕೊಳ್ಳಿ. ಇಲ್ಲಿ ಹೆಸರು ಯಾರದ್ದು ಇರುತ್ತದೆ ಎನ್ನುವುದು ಮುಖ್ಯ ಆಗೊಲ್ಲ. ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್ ಮಾತ್ರವೇ ಕಾಣಿಸುವುದು. ಯಾರು ಬೇಕಾದರೂ ನನ್ನ ಹೆಸರಿನ ಜತೆ ಬೇರೆ ಅಕೌಂಟ್ ನಂಬರ್ ಹಾಕಿ ದುಡ್ಡು ತೆಗೆದುಕೊಳ್ಳಬಹುದು. ನಿಮ್ಮ ಹೆಸರನ್ನೂ ಹಾಕಿ ಅವರದೇ ಅಕೌಂಟ್ ನಂಬರ್ ಕೊಟ್ಟು ಜನರಿಂದ ದುಡ್ಡು ಪಡೆದುಕೊಳ್ಳಬಹುದು. ಯಾರಿಗಾದರೂ ಹೀಗೆ ದುಡ್ಡ ನೀಡಿದ್ದರೆ ಪೊಲೀಸರಿಗೆ ದೂರು ನೀಡಿ. ನಾನು ಯಾವುದೇ ಸ್ಕ್ರಿಪ್ಟ್ ಅನ್ನು ಇ-ಮೇಲ್ ಅಥವಾ ಫೇಸ್ ಬುಕ್ ಮೂಲಕ ತೆಗೆದುಕೊಳ್ಳುವುದಿಲ್ಲ. ಇದು ನಿಮಗೆ ತಿಳಿದಿರಲಿ ಎಂದು ಪವನ್ ಹೇಳಿದ್ದಾರೆ.

    ಸಿನಿಮಾ ನಿರ್ದೇಶಕರ ಗುಂಪುಗಾರಿಕೆ: ದಯಾಳ್ ಪದ್ಮನಾಭನ್ ಅಸಮಾಧಾನಸಿನಿಮಾ ನಿರ್ದೇಶಕರ ಗುಂಪುಗಾರಿಕೆ: ದಯಾಳ್ ಪದ್ಮನಾಭನ್ ಅಸಮಾಧಾನ

    English summary
    Lucia fame director Pawan Kumar shared information about some people using his name for digital cheating scam.
    Monday, August 3, 2020, 16:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X