Dvitva: ಪವನ್ ಹಂಚಿಕೊಂಡ ಪುನೀತ್ ರಾಜ್‌ಕುಮಾರ್ ವಾಟ್ಸ್‌ಆಪ್‌ ಚಾಟ್: ಆ ಕನಸು ಕನಸಾಗೆ ಉಳಿಯಿತು!

ಪುನೀತ್ ರಾಜ್‌ಕುಮಾರ್ ಇತ್ತೀಚೆಗೆ ಭಿನ್ನ ಸಿನಿಮಾಗಳತ್ತ ಮುಖ ಮಾಡಿದ್ದರು. ಪಿಆರ್‌ಕೆ ವತಿಯಿಂದಲೂ ಭಿನ್ನ ಮಾದರಿಯ ಸಿನಿಮಾಗಳನ್ನು ಕೊಡುವ ಯತ್ನದಲ್ಲಿದ್ದ ಪುನೀತ್ ರಾಜ್‌ಕುಮಾರ್ ಸ್ವತಃ ತಾವೂ ಸಹ ಮಸಾಲೆ ಸಿನಿಮಾಗಳಿಂದ ಆಚೆ ಬರುವ ಯತ್ನದಲ್ಲಿದ್ದರು. ಆದರೆ ಅದೇ ಸಮಯಕ್ಕೆ ದೇವರು ಅವರನ್ನು ಕರೆದುಕೊಂಡು ಬಿಟ್ಟ.

ಹಗಲು ರಾತ್ರಿ ಸಿನಿಮಾಗಳನ್ನೆ ಉಸಿರಾಡುತ್ತಿದ್ದ ಪುನೀತ್ ರಾಜ್‌ಕುಮಾರ್‌, ಪರ ಭಾಷೆಯ ಸಿನಿಮಾಗಳು, ವಿಶ್ವ ಸಿನಿಮಾಗಳನ್ನು ಅಧ್ಯಯನ ಮಾಡುತ್ತಲೇ ಇರುತ್ತಿದ್ದರು. ಸ್ವತಃ ತಾವೂ ವಿಶ್ವ ದರ್ಜೆಯ ಸಿನಿಮಾ, ವೆಬ್ ಸರಣಿ ಮಾಡಬೇಕೆಂಬ ಕನಸು ಕಂಡಿದ್ದರು.

ತಮ್ಮ ಸಿನಿಮಾ ಆಯ್ಕೆಯ ವಿಧಾನ ಬದಲಿಸುವ ಮೂಲಕ ಹೊಸ ಬಗೆಯ ಸಿನಿಮಾಗಳಿಗೆ ತೆರೆದುಕೊಳ್ಳುವ ಸುಳಿವು ನೀಡಿದ್ದ ಪುನೀತ್ ರಾಜ್‌ಕುಮಾರ್, ಭಿನ್ನ ಸಿನಿಮಾಕರ್ಮಿ 'ಲೂಸಿಯಾ' ಖ್ಯಾತಿಯ ಪವನ್ ಜೊತೆ ಕೈಜೋಡಿಸಿದ್ದರು. ಅವರಿಬ್ಬರ ಕಾಂಬಿನೇಶನ್‌ನ 'ದ್ವಿತ್ವ' ಸಿನಿಮಾದ ಪೋಸ್ಟರ್ ಸಹ ಹೊರ ಬಂದಿತ್ತು. ಒಂದೊಳ್ಳೆ ಸಿನಿಮಾ ವೀಕ್ಷಕರಿಗೆ ನೋಡಲು ಸಿಗುತ್ತದೆ ಎಂದು ಎಲ್ಲ ಸಿನಿ ಪ್ರೇಮಿಗಳು ಕಾತರರಾಗಿದ್ದರು. ಆದರೆ ಆದದ್ದೇ ಬೇರೆ. ಇದೀಗ ನಿರ್ದೇಶಕ ಪವನ್, 'ದ್ವಿತ್ವ' ಸಿನಿಮಾದ ಬಗ್ಗೆ ಪುನೀತ್ ಜೊತೆ ಆಡಿದ್ದ ಮಾತುಗಳ ವಾಟ್ಸ್‌ಆಪ್‌ ಸಂದೇಶದ ಸ್ಕ್ರೀನ್‌ ಶಾಟ್‌ ಹಂಚಿಕೊಂಡಿದ್ದಾರೆ. ಪವನ್‌ ಜೊತೆ ಪುನೀತ್ ನಡೆಸಿದ ಮಾತುಕತೆ ನೋಡಿದರೆ ಗೊತ್ತಾಗುತ್ತದೆ ಅವರಿಗೆ ಸಿನಿಮಾ ಬಗ್ಗೆ ಅದೆಷ್ಟು ಕನಸಿತ್ತು ಎಂದು.

''ನಾವು ಮುಂದಿನ ವರ್ಷ ಈ ಪ್ರಾಜೆಕ್ಟ್ ಮಾಡೋಣ'' ಎಂದು ಪವನ್, ಪುನೀತ್‌ಗೆ ಸಂದೇಶ ಕಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಪುನೀತ್, ''ಒಕೆ ಪವನ್, ನಾನಂತೂ ಈ ಸಿನಿಮಾಕ್ಕಾಗಿ ಎದುರು ನೋಡುತ್ತಾ ಇದ್ದೀನಿ. ಏನಾದರೂ ಬದಲಾವಣೆ ಬೇಕು'' ಎಂದಿದ್ದಾರೆ. ನಂತರ ಏಪ್ರಿಲ್ 14, 2021 ರಂದು ಸಂದೇಶ ಕಳಿಸಿರುವ ಪವನ್, ''ನಮ್ಮ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇದೆ, ನಿರೀಕ್ಷೆ ಹೆಚ್ಚಾಗುತ್ತಲೇ ಇದೆ'' ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಪ್ಪು, ''ಹೌದು, ಬಹಳ ದೊಡ್ಡ ನಿರೀಕ್ಷೆ ಇದೆ. ಹಾಗಾಗಿ ನಾವು ಅದ್ಭುತವಾದ ಸಿನಿಮಾ ಮಾಡಬೇಕು'' ಎಂದಿದ್ದಾರೆ.

''ಪುನೀತ್ ನನ್ನ ಜೊತೆ ಮಾತನಾಡಿದಂತೆ ಭಾಸವಾಯಿತು''

''ಪುನೀತ್ ನನ್ನ ಜೊತೆ ಮಾತನಾಡಿದಂತೆ ಭಾಸವಾಯಿತು''

ಈ ಸ್ಕ್ರೀನ್‌ ಶಾಟ್ ಹಂಚಿಕೊಂಡಿರುವ ಪವನ್, ಕೆಲವು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ''ನಮ್ಮಿಬ್ಬರ ವಾಟ್ಸ್‌ಆಫ್‌ ಚಾಟ್‌ಗಳನ್ನು ನಾನು ಹಾಗೇ ಇಟ್ಟುಕೊಂಡಿದ್ದೀನಿ. ಆದರೆ ಇಂದು ಯಾಕೋ ಪುನೀತ್ ಅವರ ಧ್ವನಿ ಕೇಳಬೇಕು ಎನಿಸಿತು. ಹಾಗಾಗಿ ಆ ಸಂದೇಶಗಳನ್ನು ಓದಲು ಆರಂಭಿಸಿದೆ. ಓದುತ್ತಾ ಹೋದಂತೆ ಅವರೇ ನನ್ನೊಂದಿಗೆ ಮಾತನಾಡಿದಂತೆ ಭಾಸವಾಯಿತು. ಅವರದ್ದೇ ಧ್ವನಿ ನನ್ನ ಕಿವಿಯೊಳಗೆ ಕೇಳುತ್ತಿದೆ ಎನಿಸಿತು. ಹಾಗಾಗಿ ನಾನು ಅವರು ಈವರೆಗೆ ಮಾತನಾಡಿರುವ ಎಲ್ಲ ಸಂದೇಶಗಳನ್ನು ಓದಿದೆ. ನನ್ನನ್ನು ಅವರು ಹೆಸರಿನಿಂದಲೇ ಕರೆದಿದ್ದಾರೆ. ತುಂಬ ಜನ ನನ್ನನ್ನು ನನ್ನ ಹೆಸರಿನಿಂದ ಕರೆಯುವುದಿಲ್ಲ'' ಎಂದು ನೆನಪಿಸಿಕೊಂಡಿದ್ದಾರೆ ಪವನ್.

''ನನ್ನ ಬಳಿ ಕನಸು ಹಂಚಿಕೊಂಡಿದ್ದು ನನಗೆ ಸಿಕ್ಕ ದೊಡ್ಡ ಗೌರವ''

''ನನ್ನ ಬಳಿ ಕನಸು ಹಂಚಿಕೊಂಡಿದ್ದು ನನಗೆ ಸಿಕ್ಕ ದೊಡ್ಡ ಗೌರವ''

''ನಾನು ಇಲ್ಲಿ ಹಂಚಿಕೊಂಡಿರುವ ಎರಡು ಸಂದೇಶಗಳನ್ನು ಸದಾ ಇಟ್ಟುಕೊಳ್ಳಬೇಕು ಎಂದುಕೊಂಡಿದ್ದೇನೆ. ನಾನು ಅವರೊಂದಿಗೆ ಆಡಿದ ಎಲ್ಲ ಮಾತುಕೆಗಳಲ್ಲೂ ಅದ್ಭುತವಾದ ಸಿನಿಮಾ ಮಾಡುವ ಬಗ್ಗೆಯೇ ಮಾತನಾಡಿದ್ದೇವೆ. ಅವರು ತಮ್ಮ ಕನಸುಗಳನ್ನು ನನ್ನ ಬಳಿ ಹಂಚಿಕೊಳ್ಳಬಹುದು ಎಂದುಕೊಂಡಿದ್ದಕ್ಕೆ ಆ ಗೌರವ ನೀಡಿದ್ದಕ್ಕೆ ನಾನು ಆಭಾರಿ. ಇದು ಬಹಳ ದೊಡ್ಡ ಗೌರವ ನನಗೆ. ಈ ಮನುಷ್ಯ ಈಗ ಇಲ್ಲ ಆದರೆ ಅವರು ಕಂಡ ಕನಸುಗಳು ನಮ್ಮ ಬಳಿ ಇವೆ'' ಎಂದಿದ್ದಾರೆ ಪವನ್.

ಪುನೀತ್ ಕನಸು ಸಾಕಾರಗೊಳಿಸಬೇಕಿದೆ: ಪವನ್

ಪುನೀತ್ ಕನಸು ಸಾಕಾರಗೊಳಿಸಬೇಕಿದೆ: ಪವನ್

''ಪುನೀತ್ ಅವರನ್ನು ನೆನಪು ಮಾಡಿಕೊಳ್ಳುವುದು, ಮಿಸ್ ಮಾಡಿಕೊಳ್ಳುವುದು ಮಾತ್ರವಲ್ಲ ಅವರು ಕಂಡ ಕನಸನ್ನು ಸಾಕಾರಗೊಳಿಸುವುದು ಸಹ ನಮ್ಮ ಕರ್ತವ್ಯ. ಇದೇ ಕಾರಣಕ್ಕೆ ಅವರು ತಮ್ಮ ಕನಸುಗಳ ಬಗ್ಗೆ ಆಗಾಗ್ಗೆ ಹೇಳುತಿದ್ದರೋ ಏನೋ? ನಾವು ಅವರ ಕನಸುಗಳನ್ನು ಸಾಕಾರಗೊಳಿಸಲಿ ಎಂಬುದು ಅವರ ಆಸೆಯಾಗಿತ್ತೊ ಏನೋ? 'ಅದ್ಭುತವಾದ ಸಿನಿಮಾ ಮಾಡಿ, ಒಳ್ಳೆಯ ಕೆಲಸ ಮಾಡಿ' ಪುನೀತ್ ಇವರೆಡನ್ನೇ ಹೆಚ್ಚಾಗಿ ಹೇಳುತ್ತಿದ್ದುದ್ದು'' ಎಂದಿದ್ದಾರೆ ಪವನ್.

ಅದ್ಭುತವಾದ ಸಿನಿಮಾ ಮಾಡುವ ಕನಸು ಹೊಂದಿದ್ದ ಪುನೀತ್

ಅದ್ಭುತವಾದ ಸಿನಿಮಾ ಮಾಡುವ ಕನಸು ಹೊಂದಿದ್ದ ಪುನೀತ್

ಪುನೀತ್‌ ಹಾಗೂ ಪವನ್‌ರ ಈ ಸಂಭಾಷಣೆಯೇ ಹೇಳುತ್ತಿದೆ ಪುನೀತ್‌ಗೆ ಒಳ್ಳೆಯ ಸಿನಿಮಾ ಮಾಡುವ 'ಹುಚ್ಚು' ಅದೆಷ್ಟಿತ್ತು ಎಂಬುದನ್ನು. ಪುನೀತ್ ಅವರನ್ನು ಹತ್ತಿರದಿಂದ ನೋಡಿದ ಅವರ ಅಷ್ಟೂ ಗೆಳೆಯರು ಹೇಳುತ್ತಿದ್ದುದೆಂದರೆ ಅವರು ಸಿನಿಮಾ ಬಿಟ್ಟು ಬೇರೆ ಮಾತನಾಡುವುದೇ ಕಡಿಮೆ ಎಂದು. ಹೊಸ ಪ್ರತಿಭೆಗಳನ್ನು ಪ್ರೀತಿಯಿಂದ ಬೆನ್ನುತಟ್ಟುತ್ತಿದ್ದ ಪುನೀತ್, ತಮ್ಮ ಕಚೇರಿಯನ್ನು ಬಳಸಿಕೊಳ್ಳುವಂತೆ ಹಲವು ಯುವ ಪ್ರತಿಭೆಗಳಿಗೆ ಆಹ್ವಾನ ನೀಡಿದ್ದರಂತೆ. ನಮ್ಮ ಕಚೇರಿಗೆ ಬನ್ನಿ ಆ ಸ್ಥಳ ಬಳಸಿಕೊಳ್ಳಿ, ಒಳ್ಳೆಯ ಸಿನಿಮಾ, ವೆಬ್ ಸರಣಿ ಬರೆಯಿರಿ ನಾನು ನಿಮಗೆ ಬೆಂಬಲವಾಗಿರುತ್ತೇನೆ'' ಎನ್ನುತ್ತಿದ್ದರಂತೆ.

More from Filmibeat

English summary
Director Pawan Kumar shared screenshot of WhatsApp chats he did with Puneeth Rajkumar. Pawan said Puneeth wanted to do great movies. Now It is now our duty to full fill his dream.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X