ಸೀಮಂತ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಮತ್ತು ಪತ್ನಿ ಅಪೇಕ್ಷಾ ಪುರೋಹಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಂದೆ-ತಾಯಿ ಆಗುತ್ತಿರುವ ಸಂತಸವನ್ನು ದಂಪತಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪವನ್ ಮತ್ತು ಅಪೇಕ್ಷಾ ದಂಪತಿಗೆ ಅಭಿಮಾನಿಗಳು, ಸ್ನೇಹಿತರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ನಟಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪತ್ನಿಯ ಜೊತೆ ಪವನ್ ಒಡೆಯರ್ ಸಹ ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೆ ಪವನ್ ಒಡೆಯರ್ ಪತ್ನಿಯ ಸೀಮಂತ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಸೀಮಂತ ಸಂಭ್ರಮದಲ್ಲಿ ಅಪೇಕ್ಷಾ

ಸೀಮಂತ ಸಂಭ್ರಮದಲ್ಲಿ ಅಪೇಕ್ಷಾ

ಇತ್ತೀಚಿಗಷ್ಟೆ ಅಪೇಕ್ಷಾ ಪುರೋಹಿತ್ ಅವರ ಸೀಮಂತ ಕಾರ್ಯಕ್ರಮ ಮಾಡಿ ಮುಗಿಸಿದ್ದಾರೆ. ಈ ಸುಂದರ ಕ್ಷಣಗಳ ಫೋಟೋವನ್ನು ನಿರ್ದೇಶಕ ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಶಾಸ್ತ್ರದ ಪ್ರಕಾರ ಸೀಮಂತ ಕಾರ್ಯ ಮಾಡಲಾಗಿದ್ದು, ಕುಟುಂಬದವರು ಮತ್ತು ಆಪ್ತರು ಮಾತ್ರ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಹಸಿರು ಸೀರೆಯಲ್ಲಿ ಅಪೇಕ್ಷಾ ಮಿಂಚಿಂಗ್

ಹಸಿರು ಸೀರೆಯಲ್ಲಿ ಅಪೇಕ್ಷಾ ಮಿಂಚಿಂಗ್

ತುಂಬು ಗರ್ಭಿಣಿ ಅಪೇಕ್ಷಾ ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಇಷ್ಟದ ತಿನಿಸುಗಳನ್ನು ಇಟ್ಟು ಬಯಕೆ ಶಾಸ್ತ್ರ ಮಾಡಿದ್ದಾರೆ. ಪೂಜೆ ಮತ್ತು ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇತ್ತೀಚಿಗಷ್ಟೆ ನಟಿ ಮೇಘನಾ ರಾಜ್ ಸೀಮಂತ ಸಂಭ್ರಮದ ಫೋಟೋಗಳನ್ನು ವೈರಲ್ ಆಗಿತ್ತು. ಇದೀಗ ನಟಿ ಅಪೇಕ್ಷಾ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ.

ಸಂತಸ ಹಂಚಿಕೊಂಡಿದ್ದ ಪವನ್ ಒಡೆಯರ್

ಸಂತಸ ಹಂಚಿಕೊಂಡಿದ್ದ ಪವನ್ ಒಡೆಯರ್

ನಿರ್ದೇಶಕ ಪವನ್ ಒಡೆಯರ್ ಮೊನ್ನೆ ಮೊನ್ನೆಯಷ್ಟೆ ಫೋಟೋ ಶೇರ್ ಮಾಡುವ ಜೊತೆಗೆ, "ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ. ಹಾಡಿನರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ." ಎಂದು ಬರೆದುಕೊಂಡಿದ್ದರು.

ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ ಹಾಡು

ಅಕ್ಟೋಬರ್ 11ಕ್ಕೆ ರಿಲೀಸ್ ಆಗಲಿದೆ ಹಾಡು

ಹಾಡಿನ ಮೂಲಕ ತಂದೆಯಾಗುತ್ತಿರುವ ಖುಷಿಯನ್ನು ಪವನ್ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಈ ಹಾಡನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಈ ಹಾಡನ್ನು ಖುದ್ದು ಪವನ್ ಒಡೆಯರ್ ಅವರೇ ಬರೆದಿದ್ದಾರೆ. ಆ ಹಾಡಿಗೆ ಪ್ರವೀಣ್ ಆಲಿವರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ದೂರಿಯಾಗಿ ಚಿತ್ರೀಕರಿಸಿರುವ ಈ ಹಾಡನ್ನು ಅಕ್ಟೋಬರ್ 11ರಂದು ರಿಲೀಸ್ ಮಾಡುತ್ತಿದ್ದಾರೆ.

Recommended Video

ಎಷ್ಟೇ ಪ್ರಯತ್ನ ಪಟ್ರು KGF ತಂಡದಿಂದ ಇದನ್ನು ತಡೆಯೋಕೇ ಆಗ್ತಿಲ್ಲಾ | Filmibeat Kannada
2018ರಲ್ಲಿ ಮದುವೆಯಾಗಿದ್ದ ಜೋಡಿ

2018ರಲ್ಲಿ ಮದುವೆಯಾಗಿದ್ದ ಜೋಡಿ

ಪವನ್ ಮತ್ತು ಅಪೇಕ್ಷಾ ಇಬ್ಬರು 2018 ಮೇ 20ರಂದು ಹಸೆಮಣೆ ಏರಿದ್ದರು. ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿ ಇಬ್ಬರು ಅದ್ದೂರಿಯಾಗಿ ಮದುವೆಯಾಗಿದ್ದರು. ಅಪೇಕ್ಷಾ ಪುರೋಹಿತ್ ಕನ್ನಡದ ಕಿರುತೆರೆ ನಟಿಯಾಗಿ ಖ್ಯಾತಿಗಳಿಸಿದ್ದರು. ತ್ರಿವೇಣಿ ಸಂಗಮ, ಸೊಸೆ ತಂದ ಸೌಭಾಗ್ಯ, ಸಾಗುತಾ ದೂರ ದೂರ, ಮರಳಿ ಬಂದಳು ಸೀತೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಬಳಿಕ ಟಿ.ಎನ್ ಸೀತಾರಾಮ್ ನಿರ್ದೇಶನದ ಕಾಫಿ ತೋಟ ಸಿನಿಮಾದಲ್ಲಿಯೂ ಮಿಂಚಿದ್ದಾರೆ.

More from Filmibeat

English summary
Director Pawan Wadeyar wife Apeksha Purohit baby shower photos viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X