For Quick Alerts
  ALLOW NOTIFICATIONS  
  For Daily Alerts

  ಮುದ್ದು ಮಗನ ಮೊದಲ ಫೋಟೋ ಹಂಚಿಕೊಂಡ ನಿರ್ದೇಶಕ ಪವನ್ ಒಡೆಯರ್

  |

  ಸ್ಯಾಂಡಲ್ ವುಡ್ ನ ನಿರ್ದೇಶಕ ಪವನ್ ಒಡೆಯರ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ಪವನ್ ಪತ್ನಿ ನಟಿ ಅಪೇಕ್ಷಾ ಪುರೋಹಿತ್ ಡಿಸೆಂಬರ್ 10 ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

  ಗಂಡು ಮಗುವಿನ ತಂದೆಯಾದ ಸಂತಸವನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಪತ್ನಿ ಮತ್ತು ಮಗು ಆಸ್ಪತ್ರೆಯಲ್ಲಿರುವ ಫೋಟೋವನ್ನು ಶೇರ್ ಮಾಡಿದ್ದ ಪವನ್ ರಾತ್ರಿ ಮಗನ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ವಿಶೇಷ ಎಂದರೆ ಡಿಸೆಂಬರ್ 10 ಪವನ್ ಒಡೆಯರ್ ಗೆ ಹುಟ್ಟುಹಬ್ಬದ ಸಂಭ್ರಮ. ತನ್ನ ಹುಟ್ಟುಹಬ್ಬದ ದಿನವೇ ಮಗ ಜನಿಸಿರುವುದು ಡಬಲ್ ಸಂತಸಕ್ಕೆ ಕಾರಣವಾಗಿದೆ. ಅಪ್ಪನಿಗೆ ಮಗ ವಿಶ್ ಮಾಡುತ್ತಿರುವ ಟೀ ಶರ್ಟ್ ಧರಿಸಿರುವ ಮುದ್ದು ಮಗುವಿನ ಫೋಟೋವನ್ನು ಪವನ್ ಶೇರ್ ಮಾಡಿದ್ದಾರೆ.

  ಜನ್ಮ ದಿನಕ್ಕೆ ಅದ್ಭುತ ಉಡುಗೊರೆ; ತಂದೆಯಾದ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ಜನ್ಮ ದಿನಕ್ಕೆ ಅದ್ಭುತ ಉಡುಗೊರೆ; ತಂದೆಯಾದ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್

  ಮುದ್ದಾದ ಮಗುವಿನ ಫೋಟೋ ವೈರಲ್

  ಮುದ್ದಾದ ಮಗುವಿನ ಫೋಟೋ ವೈರಲ್

  ಅಪ್ಪನಿಗೆ ಹುಟ್ಟುಹಬ್ಬದ ವಿಶ್ ಮಾಡುತ್ತಿರುವ ಮಗನ ಮೊದಲ ಫೋಟೋ ವನ್ನು ಪವನ್ ಒಡಯರ್ ಹಂಚಿಕೊಂಡಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನಾನು ಯಾವಾಗಲು ನಿಮಗೆ ಉತ್ತರ ಉಡುಗೊರೆಯಾಗಿರುತ್ತೇನೆ' ಎಂದು ಟೀ ಶರ್ಟ್ ಮೇಲೆ ಬರೆಯಲಾಗಿದೆ. ಈ ಫೋಟೋಗೆ ಅಭಿಮಾನಿಗಳು ಮತ್ತು ಸಿನಿತಾರೆಯರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ.

  ನೀ ಆಗಮಿಸು ಕಾಯುತ್ತಿದೆ ನನ್ನ ತೋಳು; ಮುದ್ದು ಮಗುಗೆ ಪವನ್ ಒಡೆಯರ್ ಸಾಂಗ್ನೀ ಆಗಮಿಸು ಕಾಯುತ್ತಿದೆ ನನ್ನ ತೋಳು; ಮುದ್ದು ಮಗುಗೆ ಪವನ್ ಒಡೆಯರ್ ಸಾಂಗ್

  ವಿಶ್ವದ ಅತ್ಯಂತ ಅದ್ಭುತ ಉಡುಗೊರೆ

  ವಿಶ್ವದ ಅತ್ಯಂತ ಅದ್ಭುತ ಉಡುಗೊರೆ

  ಗಂಡು ಮಗುವಾದ ಸಂತಸವನ್ನು ಪವನ್ ಮೊದಲು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, 'ನನ್ನ ಜನ್ಮ ದಿನಕ್ಕೆ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದೆ. ಗಂಡು ಮಗುವಿನ ತಂದೆಯಾಗಿದ್ದೇನೆ. ಜೈ ಚಾಮುಂಡೇಶ್ವರಿ' ಎಂದು ಬರೆದುಕೊಂಡಿದ್ದಾರೆ.

  2018ರಲ್ಲಿ ಮದುವೆಯಾಗಿದ್ದ ಜೋಡಿ

  2018ರಲ್ಲಿ ಮದುವೆಯಾಗಿದ್ದ ಜೋಡಿ

  ಪವನ್ ಒಡೆಯರ್ ಮತ್ತು ಅಪೇೆಕ್ಷ ಪುರೋಹಿತ್ ಇಬ್ಬರು 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿ ಇಬ್ಬರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಅಪೇಕ್ಷ ಪುರೋಹಿತ್ ಕನ್ನಡ ಕಿರುತೆರೆ ನಟಿಯಾಗಿ ಖ್ಯಾತಿಗಳಿಸಿದ್ದರು. ತ್ರಿವೇಣಿ ಸಂಗಮ, ಸೊಸೆ ತಂದ ಸೌಭಾಗ್ಯ, ಸಾಗುತಾ ದೂರ ದೂರ, ಮರಳಿ ಬಂದಳು ಸೀತೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಮಾತ್ರವಲ್ಲದೆ ಕಾಫಿ ತೋಟ ಸಿನಿಮಾದಲ್ಲೂ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆ ಮೇಲು ಮಿಂಚಿದ್ದಾರೆ.

  ದಶಕಗಳು ಕಳೆದ್ರು ಇಂದಿಗೂ ರಾಜಣ್ಣನೆ ನಂಬರ್ ಒನ್ | Dr Rajkumar | Filmibeat Kannada
  ಸೀಮಂತ ಸಂಭ್ರಮದ ಫೋಟೋಗಳು ವೈರಲ್ ಆಗಿತ್ತು

  ಸೀಮಂತ ಸಂಭ್ರಮದ ಫೋಟೋಗಳು ವೈರಲ್ ಆಗಿತ್ತು

  ಕೆಲವು ದಿನಗಳ ಅಪೇಕ್ಷ ಸೀಮಂತ ಸಂಭ್ರಮದ ಫೋಟೋಗಳನ್ನು ಪವನ್ ಒಡೆಯರ್ ಹಂಚಿಕೊಂಡಿದ್ದರು. ಜೊತೆಗೆ ಸುಂದರ ಫೋಟೋಶೂಟ್ ಕೂಡ ಮಾಡಿಸಿದ್ದರು. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಸೀಮಂತ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  English summary
  Sandalwood Director Pawan Wadeyar shares his Baby boy photo. Apeksha purohit gave birth to baby boy on December 10th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X