ಪವನ್ ಒಡೆಯರ್ 'ಸಹಾಯಕ ನಿರ್ದೇಶಕ'ನಾಗಿ ಕೆಲಸ ಮಾಡಿದ ಮೊದಲ ಚಿತ್ರ ಯಾವುದು?

ಒಳ್ಳೆ ಕಂಪನಿ, ಒಳ್ಳೆ ಕೆಲಸ, ಒಳ್ಳೆ ಸಂಬಳ ಇದ್ದರೂ ಚಿತ್ರರಂಗದ ಸೆಳೆತ ಪವನ್ ಒಡೆಯರ್ ಅವರನ್ನು ಬಿಡಲಿಲ್ಲ. ಮನೆಯವರ ಬಳಿ ಒಂದು ವರ್ಷ ಸಮಯ ತಗೊಂಡು ಸಿನಿ ಇಂಡಸ್ಟ್ರಿಯನ್ನು ಹುಡುಕಿ ಬಂದ ಒಡೆಯರ್‌ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಮಾರ್ಗದರ್ಶಕರಾದರು.

ಮೊದಲ ಭೇಟಿಯಲ್ಲಿ ''ಸಿನಿಮಾ ಇಂಡಸ್ಟ್ರಿಗೆ ಬಂದರೆ ಚಿತ್ರಾನ್ನ ತಿನ್ನಬೇಕು ಅಷ್ಟೇ'' ಎಂದು ಭಟ್ಟರು ಪವನ್ ಒಡೆಯರ್‌ಗೆ ಹೇಳಿ ವಾಪಸ್ ಹೋಗುವಂತೆ ಸೂಚಿಸಿದರು. ಆದರೆ, ಅದಾಗಲೇ ಸಿನಿ ಪ್ರಪಂಚದ ಆಸೆ ಹೆಚ್ಚು ಮಾಡಿಕೊಂಡಿದ್ದ ಪವನ್ 'ಚಿತ್ರಾನ್ನ ನನಗೆ ಇಷ್ಟ' ಎಂದು ಭಟ್ಟರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡರು. ಮುಂದೆ ಓದಿ...

'ಪಂಚರಂಗಿ' ಸಿನಿಮಾದಲ್ಲಿ ಮೊದಲ ಸಲ ಕೆಲಸ

'ಪಂಚರಂಗಿ' ಸಿನಿಮಾದಲ್ಲಿ ಮೊದಲ ಸಲ ಕೆಲಸ

ಯೋಗರಾಜ್ ಭಟ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡ ಪವನ್ ಒಡೆಯರ್‌ಗೆ ಮೊದಲ ಅವಕಾಶ ಸಿಕ್ಕಿದ್ದು ಪಂಚರಂಗಿ ಸಿನಿಮಾ ವೇಳೆ. 2010ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ದಿಗಂತ್-ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಮೊದಲ ಕೆಲಸ ನೆನಪಿದೆ

ಮೊದಲ ಕೆಲಸ ನೆನಪಿದೆ

ಸಹಾಯಕ ನಿರ್ದೇಶಕರಾಗಿ ಯಾವು ಮಾಡಿದ ಮೊದಲ ಕೆಲಸವೂ ಸಹ ಪವನ್ ಒಡೆಯರ್‌ಗೆ ನೆನಪಿದೆ. ಈ ಕುರಿತು ಫಿಲ್ಮಿಬೀಟ್ ಡೈರಿಯ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ''ಅಯೋಗ್ಯ ನಿರ್ದೇಶಕ ಮಹೇಶ್ ಇದ್ದರು. ಸುಮಾರು ಸಾವಿರ ಶೀಟ್‌ಗೆ ಲೈನ್ ಹಾಕುವ ಕೆಲಸ ನನಗೆ ಕೊಟ್ಟಿದ್ದರು'' ಎಂದು ಸ್ಮರಿಸಿಕೊಂಡಿದ್ದಾರೆ.

ಕಾಮಿಡಿ ಸ್ಕ್ರಿಪ್ಟ್ ಕೈಗೆತ್ತಿಕೊಂಡರು

ಕಾಮಿಡಿ ಸ್ಕ್ರಿಪ್ಟ್ ಕೈಗೆತ್ತಿಕೊಂಡರು

ಯೋಗರಾಜ್ ಭಟ್ ಅವರ ಬಳಿ ಎರಡು ವರ್ಷಕ್ಕು ಹೆಚ್ಚು ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಪವನ್ ಒಡೆಯರ್, ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡಲು ಮುಂದಾದರು. ಮೊದಲ ಚಿತ್ರವನ್ನು ಕಾಮಿಡಿ ಸ್ಕ್ರಿಪ್ಟ್ ಇರಲಿ ಎಂಬ ಕಾರಣಕ್ಕೆ 'ಗೋವಿಂದಾಯ ನಮಃ' ಶುರು ಮಾಡಿದರು. ಮೊದಲ ಚಿತ್ರದ ಮೊದಲ ಶೋ ಹೌಸ್‌ಫುಲ್ ಕಂಡಿತ್ತು ಎಂದು ಒಡೆಯರ್ ಸಂತಸ ಹಂಚಿಕೊಂಡಿದ್ದರು.

Recommended Video

ಮತ್ತೆ ಶಾಲೆಗೆ ಸೇರಿದ ರಶ್ಮಿಕಾ ಮಂದಣ್ಣ | Pushpa | Allu Arjun | Filmibeat Kannada
ಗೂಗ್ಲಿ ಸ್ಕ್ರಿಪ್ಟ್ ಮೊದಲೇ ಸಿದ್ಧವಾಗಿತ್ತು

ಗೂಗ್ಲಿ ಸ್ಕ್ರಿಪ್ಟ್ ಮೊದಲೇ ಸಿದ್ಧವಾಗಿತ್ತು

'ಅರುಂಧತಿ' ಸಿನಿಮಾ ನೋಡಿದ ಬಳಿಕ ಕಥೆ ಬರೆಯಲು ನಿರ್ಧರಿಸಿದ ಪವನ್ ಒಡೆಯರ್ ಒಂದು ಲವ್ ಸ್ಟೋರಿ ಮಾಡ್ಕೊಂಡು ನಾಗತಿಹಳ್ಳಿ ಚಂದ್ರಶೇಖರ್ ಬಳಿ ಕಥೆ ತೋರಿಸಲು ಹೋಗಿದ್ದರು. ಕಥೆ ತೋರಿಸಲು ಹೋಗಿದ್ದ ಒಡೆಯರ್, ಜೂನಿಯರ್ ಕಲಾವಿದನಾಗಿ ನಟಿಸಿ ಬಂದಿದ್ದರು. ಆ ಕಥೆಯೇ ಗೂಗ್ಲಿ. ಗೋವಿಂದಾಯ ನಮಃ ಸಿನಿಮಾ ಬಳಿಕ ಹಳೆಯ ಕಥೆಗೆ ಮರುಜೀವ ನೀಡಿದ್ದರು.

More from Filmibeat

English summary
Kannada Film Director Pawan wadeyar shares his cinema journey and his first work with Filmibeat kannada director dairy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X