ಅಪೇಕ್ಷಾ ಮೇಲೆ 'ಗೂಗ್ಲಿ' ಪವನ್ ಒಡೆಯರ್ ಗೆ ಪ್ಯಾರ್ ಗೆ ಆಗ್ಬಿಟೈತೆ.!
ಸ್ಯಾಂಡಲ್ ವುಡ್ ನಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಒಬ್ಬರ ನಂತರ ಒಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಸಂತೋಷ್ ಆನಂದ್ ರಾಮ್ ನಿಶ್ಚಿತಾರ್ಥ ನಡೆದಿದೆ. ಈಗ ಕನ್ನಡ ಸಿನಿಮಾರಂಗದ ಪ್ರೇಕ್ಷಕರಿಗೆ 'ಗೂಗ್ಲಿ' ಹಾಕಿ ಫೇಮಸ್ ಆಗಿದ್ದ ನಿರ್ದೇಶಕ 'ಪವನ್ ಒಡೆಯರ್' ಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
ತಮ್ಮ ಸಿನಿಮಾ ಹಾಗೂ ಹಾಡುಗಳಿಂದಲೇ ಜನರ ಮನಸ್ಸನ್ನ ಕದ್ದಿರುವ ಪವನ್ ಕನ್ನಡ ಸಿನಿಮಾರಂಗದ ನಾಯಕಿಯ ಮನಸ್ಸನ್ನ ಕದ್ದಿದ್ದಾರೆ. ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ನಟಿ ಅಪೇಕ್ಷಾರನ್ನ ಕೈಹಿಡಿಯಲು ಸಜ್ಜಾಗಿದ್ದಾರೆ ಪವನ್ ಒಡೆಯರ್.

ನಿಶ್ಚಿತಾರ್ಥಕ್ಕೆ ಸಜ್ಜಾದ ಪವನ್
ನಿರ್ದೇಶಕ ಪವನ್ ಒಡೆಯರ್ ನಿಶ್ವಿತಾರ್ಥ ಫಿಕ್ಸ್ ಆಗಿದೆ. ನಟಿ 'ಅಪೇಕ್ಷಾ ಪುರೋಹಿತ್' ಜೊತೆ ಪವನ್ ಎಂಗೇಜ್ ಮೆಂಟ್ ದಿನಾಂಕ ಡಿಸೆಂಬರ್ ನಲ್ಲಿ ನಿಗದಿಯಾಗಿದೆ.

ಫ್ಯಾಷನ್ ಡಿಸೈನರ್ ಅಪೇಕ್ಷಾ ಪುರೋಹಿತ್
ಅಪೇಕ್ಷಾ ಪುರೋಹಿತ್ ಮೂಲತಃ ಬಾಗಲಕೋಟೆಯವರು. ಫ್ಯಾಷನ್ ಡಿಸೈನರ್ ಆಗಿರುವ ಅಪೇಕ್ಷಾ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಅಭಿನಯಿಸಿದ್ದಾರೆ. ಟಿ.ಎನ್.ಸೀತಾರಂ ನಿರ್ದೇಶನದ ಕಾಫಿ ತೋಟ ಸಿನಿಮಾದಲ್ಲಿ ಅಪೇಕ್ಷಾ ನಾಯಕಿಯಾಗಿ ಅಭಿನಯಿಸಿದ್ರು.

ಬೆಂಗಳೂರಿನಲ್ಲಿ ಮದುವೆ
ಪವನ್ ಹಾಗೂ ಅಪೇಕ್ಷಾ ರ ನಿಶ್ಚಿತಾರ್ಥ ಡಿಸೆಂಬರ್ 7 ರಂದು ಬಾಗಲಕೋಟೆಯಲ್ಲಿ ನಡೆಯಲಿದೆ. ಆಗಸ್ಟ್ ನಲ್ಲಿ ಮದುವೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದು ಬಹುತೇಕ ಬೆಂಗಳೂರಿನಲ್ಲಿ ಪವನ್ ಮದುವೆ ಸಮಾರಂಭ ನಡೆಯಲಿದೆ.

ಗುರು-ಹಿರಿಯರು ನಿಶ್ಚಯಿಸಿದ ಮದುವೆ
ಡಿಸೆಂಬರ್ 7ರಂದು ಎಂಗೆಂಜ್ ಮೆಂಟ್ ಮಾಡಿಕೊಳ್ಳುತ್ತಿರುವ ಪವನ್ ರಿಗೆ ಅಪೇಕ್ಷಾರನ್ನ ಜೋಡಿ ಮಾಡ್ತಿರೋದು ಗುರು-ಹಿರಿಯರು. ಮನೆಯವರೇ ಅಪೇಕ್ಷಾರನ್ನ ನೋಡಿ ಆಯ್ಕೆ ಮಾಡಿದ್ದು ಎಲ್ಲರ ಒಪ್ಪಿಗೆಯಂತೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.


Click it and Unblock the Notifications











