'ಟೆರರಿಸಂ' ವಿರುದ್ಧ ಅಬ್ಬರಿಸಲಿದ್ದಾಳೆ 'ರಣಚಂಡಿ' ರಾಗಿಣಿ.!
'ಆ ದಿನಗಳು' ಚೇತನ್ ಜೊತೆ ಐತಿಹಾಸಿಕ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದ ನಿರ್ದೇಶಕ ಪಿ.ಸಿ ಶೇಖರ್ ಈ ಮಧ್ಯೆ ಮತ್ತೊಂದು ಹೊಸ ಚಿತ್ರಕ್ಕೆ ಕೈಹಾಕಿದ್ದಾರೆ.
ಚೇತನ್ ಜೊತೆ ಮಾಡಲಿರುವ ಬ್ರಿಟಿಷ್ ಕಾಲದ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದು, ಪ್ರಿ-ಪ್ರೊಡಕ್ಷನ್ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ, ಈ ಗ್ಯಾಪ್ ನಲ್ಲೊಂದು ಸಿನಿಮಾ ಮಾಡಲು ಡೈರೆಕ್ಟರ್ ಸಿದ್ದವಾಗಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕೆ ರಾಗಿಣಿ ಧ್ವಿವೇದಿ ನಾಯಕಿ ಆಗಿ ಆಯ್ಕೆಯಾಗಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಟೆರರಿಸಂ ಕುರಿತ ಸಿನಿಮಾ ಆಗಿದೆಯಂತೆ. ಸದ್ಯಕ್ಕೆ ರಾಗಿಣಿ ಮಾತ್ರ ಅಂತಿಮಗೊಂಡಿದ್ದು, ಉಳಿದ ತಾರಾಬಳಗದ ಆಯ್ಕೆ ನಡೆಯಬೇಕಿದ್ದು, ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ.
ಒಂದೇ ಹಂತದಲ್ಲಿ ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡುವುದಕ್ಕೆ ನಿರ್ದೇಶಕರು ಯೋಜನೆ ಹಾಕಿರುವ ನಿರ್ದೇಶಕರು, ನವೆಂಬರ್ 15 ರಿಂದ ಈ ಚಿತ್ರದ ಚಿತ್ರೀಕರಣ ಆರಂಬಿಸಿಲಿದ್ದಾರೆ.

ಇನ್ನು ಈ ಚಿತ್ರವನ್ನ ಹಾಂಕ್ ಕಾಂಗ್ ಮೂಲದ ಎನ್.ಆರ್. ಅಲಂಕಾರ್ ಸಂತಾನಂ ನಿರ್ಮಾಣ ಮಾಡುತ್ತಿದ್ದಾರೆ. ಇನ್ನುಳಿದಂತೆ ಚೇತನ್ ಸಿನಿಮಾ ಜನವರಿ 15 ರಿಂದ ಆರಂಭವಾಗಲಿದೆ.
ಸದ್ಯ ಶರಣ್ ಜತೆ ಹೊಸ ಚಿತ್ರದಲ್ಲಿ ರಾಗಿಣಿ ಬಿಜಿಯಾಗಿದ್ದು, ಅವರ ಅಭಿನಯದ 'ನಾನೇ ನೆಕ್ಸ್ಟ್ ಸಿಎಂ' ತೆರೆಕಾಣಬೇಕಿದೆ. 'ಮುಸ್ಸಂಜೆ' ಮಹೇಶ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಅಲ್ಲದೆ, ಪದೀಪ್ ರಾಜ್ ನಿರ್ದೇಶನದ 'ಕಿಚ್ಚು' ಚಿತ್ರದಲ್ಲೂ ರಾಗಿಣಿ ಭಿನ್ನ ಕಾಣಿಸಿಕೊಂಡಿದ್ದಾರೆ


Click it and Unblock the Notifications











