ಲಸಿಕೆ ಪಡೆದ ಪ್ರಶಾಂತ್ ನೀಲ್: ಫೋಟೋಗೆ ಬರ್ತಿದೆ ಮಜವಾದ ಕಾಮೆಂಟ್ಸ್

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಕೊರೊನಾ ವೈರಸ್ ಲಸಿಕೆ ಪಡೆದುಕೊಂಡರು. ಮಂಗಳವಾರ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದು, ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

''ಕೊನೆಗೂ ನಾನು ಲಸಿಕೆ ಪಡೆದುಕೊಂಡೆ. ನೀವಿನ್ನು ವ್ಯಾಕ್ಸಿನ್ ಪಡೆದಿಲ್ಲ ಅಂದ್ರೆ ಬೇಗನೇ ಸಮಯ ನಿಗದಿ ಮಾಡಿಕೊಂಡು, ನೀವು ಮತ್ತು ನಿಮ್ಮ ಕುಟುಂಬದವರು ಲಸಿಕೆ ಪಡೆಯಿರಿ'' ಎಂದು ನೀಲ್ ಮನವಿ ಮಾಡಿದ್ದಾರೆ.

ಪ್ರಶಾಂತ್ ನೀಲ್ ಕೋವಿಡ್ ಲಸಿಕೆ ಪಡೆದಿದ್ದಕ್ಕೆ ಸ್ವಾಗತ ಮಾಡಿರುವ ನೆಟ್ಟಿಗರು, ಇಂಜೆಕ್ಷನ್ ಹಾಕುತ್ತಿರುವ ಸಮಯದಲ್ಲಿ ಅವರು ಭಯಪಟ್ಟಿರುವ ರೀತಿ ಕಂಡು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.

Director Prashant Neel gets his first dose of Covid-19 Vaccine

'ಸಿನಿಮಾದಲ್ಲಿ ಅಷ್ಟು ಹಿಂಸಾಚಾರ ತೋರಿಸುವ ನಿಮಗೆ ಇಂಜೆಕ್ಷನ್ ಅಂದ್ರೆ ಭಯನಾ?'' ಎಂದು ನೆಟ್ಟಿಗನೊಬ್ಬ ಕಾಲೆಳೆದಿದ್ದಾನೆ.

ಪ್ರಶಾಂತ್ ನೀಲ್ ಮುಖ ಮುಚ್ಕೊಂಡಿರುವುದಕ್ಕೆ ಮತ್ತೊಬ್ಬ ವ್ಯಕ್ತಿ ''ಬಹುಶಃ ನರ್ಸ್ ಕಂಡ್ರೆ ನಾಚಿಕೆ ಇರಬೇಕು'' ಎಂದು ಕಾಮೆಂಟ್ ಮಾಡಿದ್ದಾನೆ.

''ಸರ್ ಭಯನಾ ಅಥವಾ ನಾಚಿಕೆನಾ ಬಹುಶಃ ಇದು ನಾಚಿಕೆ ಇರಬೇಕು ಯಾಕಂದರೆ ಉಗ್ರಂ, ಕೆ. ಜಿ. ಎಫ್ ಸಿನಿಮಾ ನೋಡಿದಾಗ ಗೊತ್ತಾಗುತ್ತೆ ನಿಮ್ಮಗೆ ಭಯ ಇಲ್ಲ ಅಂತ ಅದ್ಕೆ ಒಂದು ರೋಮ್ಯಾನ್ಸ್ ಸಿನಿಮಾ ಮಾಡಿ.....'' ಎಂದು ವ್ಯಕ್ತಿಯೊಬ್ಬ ಸಲಹೆ ಕೊಟ್ಟಿದ್ದಾರೆ.

Director Prashant Neel gets his first dose of Covid-19 Vaccine

''ಮುಚ್ಚು ಇಲ್ಲ, ಕೊಡಲಿ ಇಲ್ಲ, ಸುತ್ತಿಗೆ ಅಂತೂ ಅಲ್ಲವೇ ಅಲ್ಲ. ಆದರೂ ಒಂದು ಸ್ಸೋಜಿಗೆ ಇಷ್ಟು ಭಯವೇ. Just kidding. ಪೊಸ್ ತುಂಬಾ ಚೆನ್ನಾಗಿದೆ. ಹೆಂಗಾಂದ್ರೂ #KGF2 release ಮಾಡಿ. ತಡೆಯೊಕ್ಕಾಗ್ತಾ ಇಲ್ಲ'' ಎಂದು ಇನ್ನೊಬ್ಬ ವ್ಯಕ್ತಿ ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾನೆ.

ಅಂದ್ಹಾಗೆ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಯಾರಾಗಿರುವ ಕೆಜಿಎಫ್ ಚಾಪ್ಟರ್ 2 ರಿಲೀಸ್‌ಗೆ ರೆಡಿಯಾಗಿದೆ. ಪ್ರಭಾಸ್ ಜೊತೆ ಸಲಾರ್ ಸಿನಿಮಾದ ಚಿತ್ರೀಕರಣ ಸಾಗ್ತಿದೆ. ಈ ಚಿತ್ರದ ಮುಗಿದ ಮೇಲೆ ಜೂನಿಯರ್ ಎನ್‌ಟಿಆರ್ ಜೊತೆ 31ನೇ ಚಿತ್ರ ಆರಂಭಿಸಲಿದ್ದಾರೆ.

More from Filmibeat

English summary
Kgf film Director Prashant Neel gets his first dose of Covid-19 Vaccine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X