For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರ: ಪ್ರಭಾಸ್, ದಳಪತಿ, ಸುದೀಪ್ ಬಗ್ಗೆ ಹೇಳಿದ್ದೇನು?

  |

  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಕೆಜಿಎಫ್-2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯ ಭಾಗದ ಚಿತ್ರೀಕರಣ ಭಾಕಿಯುಳಿಸಿಕೊಂಡಿರುವ ಸಿನಿಮಾ ತಂಡ ಸದ್ಯ ಕೊರೊನಾ ವೈರಸ್ ಭೀತಿಯ ಹಿನ್ನಲೆ ಚಿತ್ರೀಕರಣ ರದ್ದಾಗಿರುವ ಕಾರಣ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮಾಡುತ್ತಿದೆ.

  ಸದ್ಯಕ್ಕೆ ಮಾರ್ಚ್ ತಿಂಗಳು 31 ರ ವರೆಗೂ ಚಿತ್ರೀಕರಣ ಮಾಡುವ ಹಾಗಿಲ್ಲ. ಚಿತ್ರದ ಮುಂದಿನ ಹಂತದ ಕೆಲಸಗಳನ್ನು ಈಗಲೆ ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್, ಅಭಿಮಾನಿಗಳಲ್ಲಿ ಪ್ರಶ್ನೆಗಳಿದ್ದರೆ ಕೇಳಿ ಉತ್ತರಿಸುವುದಾಗಿ ಹೇಳಿದ್ದರು.

  ಕೆಜಿಎಫ್ 2 ಬಿಗ್ ಅಪ್‌ಡೇಟ್: ಬಿಡುಗಡೆ ದಿನಾಂಕ ಅಧಿಕೃತ ಘೋಷಣೆಕೆಜಿಎಫ್ 2 ಬಿಗ್ ಅಪ್‌ಡೇಟ್: ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ

  ಕೆಜಿಎಫ್ ನಿರ್ದೇಶಕ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಪ್ರಭಾಸ್ ಬಗ್ಗೆ ಹೇಳಿ, ಸುದೀಪ್ ಬಗ್ಗೆ ಹೇಳಿ, ದಳಪತಿ ವಿಜಯ್ ಬಗ್ಗೆ ಹೇಳಿ, ಉದ್ದ ಗಡ್ಡ ಯಾಕೆ ಬಿಟ್ಟಿದ್ದೀರಾ? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಅಭಿಮಾನಿಗಳು ಪ್ರಶಾಂತ್ ನೀಲ್ ಬಳಿ ಕೇಳಿದ್ದಾರೆ.

  ಪ್ರಶಾಂತ್ ನೀಲ್ ಗಡ್ಡ ಯಾಕೆ ಬಿಟ್ಟಿದ್ದಾರೆ?

  ಪ್ರಶಾಂತ್ ನೀಲ್ ಗಡ್ಡ ಯಾಕೆ ಬಿಟ್ಟಿದ್ದಾರೆ?

  ಅಭಿಮಾನಿಗಳ ಒಂದಿಷ್ಟು ಆಯ್ದ ಪ್ರಶ್ನೆಗಳಿಗೆ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿಯೆ ಉತ್ತರಿಸಿದ್ದಾರೆ. ಪ್ರಶಾಂತ್ ನೀಲ್ ಪತ್ನಿ ಬಳಿ ಅಭಿಮಾನಿಯೊಬ್ಬ 'ಸರ್ ಗೆ ಕ್ಲೀನ್ ಶೇವ್ ಮಾಡಿ ಅವರು ಸಖತ್ ಹ್ಯಾಂಡ್ ಸಮ್ ಆಗಿ ಕಾಣುತ್ತಾರೆ' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ನೀಲ್ ಪತ್ನಿ ಅವರಿಗೆ "ಉದ್ದ ಗಡ್ಡ ಎಂದರೆ ತುಂಬ ಇಷ್ಟ. ಹಾಗಾಗಿ ಅವರು ಶೇವ್ ಮಾಡುವುದಿಲ್ಲ" ಎಂದು ಹೇಳಿದ್ದಾರೆ.

  ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಾರಾ?

  ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಾರಾ?

  ಮುಂದಿನ ದಿನಗಳಲ್ಲಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಿನಿಮಾ ನಿರೀಕ್ಷೆ ಮಾಡಬಹುದಾ? ಎಂದು ಒಬ್ಬ ಅಭಿಮಾನಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಶಾಂತ್ "ಇಲ್ಲ ಅಂತ ಯಾವಾಗಲು ಹೇಳುವುದಿಲ್ಲ. ಭವಿಷ್ಯದಲ್ಲಿ ಏನಾಗುತ್ತೆ ಎಂದು ತಿಳಿದಿಲ್ಲ" ಎಂದು ಹಳಿದ್ದಾರೆ.

  'KGF-2' ನಿರ್ದೇಶಕ ಪ್ರಶಾಂತ್ ನೀಲ್ ಗೆ ದುಬಾರಿ ಉಡುಗೊರೆ ನೀಡಿದ ಯಶ್'KGF-2' ನಿರ್ದೇಶಕ ಪ್ರಶಾಂತ್ ನೀಲ್ ಗೆ ದುಬಾರಿ ಉಡುಗೊರೆ ನೀಡಿದ ಯಶ್

  ಪ್ರಶಾಂತ್ ನೀಲ್ ಮನೆಯಲ್ಲಿ ಮಾತನಾಡುವ ಭಾಷೆ ಇದೆ

  ಪ್ರಶಾಂತ್ ನೀಲ್ ಮನೆಯಲ್ಲಿ ಮಾತನಾಡುವ ಭಾಷೆ ಇದೆ

  ನೀವು ಮನೆಯಲ್ಲಿ ಮಾತನಾಡುವ ಭಾಷೆ ಯಾವುದು? ಎಂದು ಒಬ್ಬರು ಪ್ರಶ್ನೆ ಕೇಳಿದ್ದಾರೆ. ಪ್ರಶಾಂತ್ ಮನೆಯಲ್ಲಿ ಕನ್ನಡ. ತೆಲುಗು ಮತ್ತು ಇಂಗ್ಲೀಷ್ ಭಾಷೆಯನ್ನು ಮಾತನಾಡುವುದಾಗಿ ಹೇಳಿದ್ದಾರೆ.

  ಪುನೀತ್ ಮತ್ತು ಸುದೀಪ್ ಬಗ್ಗೆ ಪ್ರಶಾಂತ್ ಹೇಳಿದ್ದೇನು?

  ಪುನೀತ್ ಮತ್ತು ಸುದೀಪ್ ಬಗ್ಗೆ ಪ್ರಶಾಂತ್ ಹೇಳಿದ್ದೇನು?

  ಅಪ್ಪು ಅಭಿಮಾನಿಗಳು ಮತ್ತು ಸುದೀಪ್ ಅಭಿಮಾನಿಗಳು ನೆಚ್ಚಿನ ನೆಚ್ಚಿನ ನಟರ ಬಗ್ಗೆ ಹೇಳಿ ಎಂದಿದ್ದಕ್ಕೆ ಪ್ರಶಾಂತ್ "ಪುನೀತ್ ರಾಜ್ ಕುಮಾರ್ ಸರಿಸಾಟಿ ಇಲ್ಲದ ಶಕ್ತಿ" ಎಂದು ಹೇಳಿದ್ದಾರೆ. ಇನ್ನು ಸುದೀಪ್ ಬಗ್ಗೆ "ಜೀವನಕ್ಕಿಂತ ದೊಡ್ಡದು" ಎಂದು ಹೇಳಿದ್ದಾರೆ.

  'ಕೆಜಿಎಫ್-2' ಚಿತ್ರದ ಈ ಒಂದು ದೃಶ್ಯಕ್ಕೆ ಯಶ್ 6 ತಿಂಗಳ ತಯಾರಿ'ಕೆಜಿಎಫ್-2' ಚಿತ್ರದ ಈ ಒಂದು ದೃಶ್ಯಕ್ಕೆ ಯಶ್ 6 ತಿಂಗಳ ತಯಾರಿ

  ರಾಜಮೌಳಿ, ವಿಜಯ್, ಪ್ರಭಾಸ್ ಬಗ್ಗೆ ಪ್ರಶಾಂತ್ ಮಾತು

  ರಾಜಮೌಳಿ, ವಿಜಯ್, ಪ್ರಭಾಸ್ ಬಗ್ಗೆ ಪ್ರಶಾಂತ್ ಮಾತು

  ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಬಗ್ಗೆ ಪ್ರಶಾಂತ್ ನೀಲ್ "ದಾರಿ ತೋರಿದವರು" ಎಂದು ಹೇಳಿದ್ದಾರೆ. ಇನ್ನು ಪ್ಯಾನ್ ಇಂಡಿಯ ಸೂಪರ್ ಸ್ಟಾರ್ ಪ್ರಭಾಸ್ ಬಗ್ಗೆ 'ಡಾರ್ಲಿಂಗ್ ಡಾರ್ಲಿಂಗ್' ಎಂದು ಹೇಳಿದ್ದಾರೆ. ಇನ್ನು ತಮಿಳು ನಟ ವಿಜಯ್ ಬಗ್ಗೆ "ಪವರ್ ಹೌಸ್" ಎಂದು ಒಂದು ಪದಗಳಲ್ಲಿ ಉತ್ತರಿಸುವ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಸ್ಟಾರ್ ನಟರ ಬಗ್ಗೆ ಮಾತನಾಡಿದ್ದಾರೆ.

  English summary
  Kannada famous Director Prashanth Neel answer about fans questions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X