For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 3' ಸಿನಿಮಾ ಕುರಿತು ಪ್ರಶಾಂತ್ ನೀಲ್ ಕೊಟ್ಟರು ಸ್ಪಷ್ಟನೆ

  |

  'ಕೆಜಿಎಫ್' ಸಿನಿಮಾ ಸರಣಿ ಭಾರತದ ಬಹುನಿರೀಕ್ಷಿತ ಸಿನಿಮಾ ಆಗಿ ಹೊರಹೊಮ್ಮಿದೆ. ಕೆಜಿಎಫ್ ಸರಣಿಯ ಎರಡನೇ ಸಿನಿಮಾ 'ಕೆಜಿಎಫ್ 2' ಟ್ವಿಟ್ಟರ್‌ನಲ್ಲಿ ಹೆಚ್ಚು ಟ್ರೆಂಡ್ ಆದ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 'ಕೆಜಿಎಫ್' ಸಿನಿಮಾ ಬಗ್ಗೆ ದೇಶದಾದ್ಯಂತ ಟ್ರೆಂಡ್ ಒಂದು ಈಗಾಗಲೇ ಸೃಷ್ಟಿಯಾಗಿದೆ.

  ದೊಡ್ಡದಾಗಿ ಸಿಗ್ನಲ್ ಕೊಟ್ಟ ರಾಕಿ ಭಾಯ್ | Filmibeat Kannada

  ಇದೀಗ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಅಂತ್ಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಆರಂಭವಾಗಿದೆ. ಕೆಲವೇ ದಿನಗಳಲ್ಲಿ ಕೆಜಿಎಫ್ 2 ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

  KGF-2 ಸಿನಿಮಾದ ಬಿಗ್ ಅನೌನ್ಸ್ ಮೆಂಟ್; ಟೀಸರ್ ರಿಲೀಸ್ ಗೆ ಡೇಟ್ ಫಿಕ್ಸ್KGF-2 ಸಿನಿಮಾದ ಬಿಗ್ ಅನೌನ್ಸ್ ಮೆಂಟ್; ಟೀಸರ್ ರಿಲೀಸ್ ಗೆ ಡೇಟ್ ಫಿಕ್ಸ್

  ಆದರೆ ಈ ನಡುವೆ ಹೊಸದೊಂದು ಪ್ರಶ್ನೆ ಹುಟ್ಟಿದ್ದು, ನಿರ್ದೇಶಕ ಪ್ರಶಾಂತ್ ನೀಲ್ 'ಕೆಜಿಎಫ್' ಸಿನಿಮಾ ಸರಣಿಯನ್ನು ಮುಂದುವರೆಸುತ್ತಾರಾ? ಕೆಜಿಎಫ್ 2 ನಂತರ ಕೆಜಿಎಫ್ 3 ಸಿನಿಮಾ ಬರುತ್ತದೆಯಾ? ಎಂಬ ಅನುಮಾನ ಹಲವರನ್ನು ಕಾಡುತ್ತಿದೆ.

  ಕೆಜಿಎಫ್ 3 ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಸ್ಪಷ್ಟನೆ

  ಕೆಜಿಎಫ್ 3 ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಸ್ಪಷ್ಟನೆ

  ಈ ಬಗ್ಗೆ ಆನ್‌ಲೈನ್ ಮಾಧ್ಯಮವೊಂದಕ್ಕೆ ಉತ್ತರಿಸಿರುವ ಪ್ರಶಾಂತ್ ನೀಲ್, 'ಕೆಜಿಎಫ್ 3' ಸಿನಿಮಾ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದಾರೆ. ಕೆಜಿಎಫ್ 2, ಕೆಜಿಎಫ್ ಸರಣಿಯ ಕೊನೆಯ ಸಿನಿಮಾ ಆಗಿರಲಿದೆ.

  'ಕೆಜಿಎಫ್ 3 ಗಾಗಿ ಕತೆಯೊಂದಿಗೆ ಕಾಂಪ್ರಮೈಸ್ ಮಾಡಿಕೊಳ್ಳಲಾರೆ'

  'ಕೆಜಿಎಫ್ 3 ಗಾಗಿ ಕತೆಯೊಂದಿಗೆ ಕಾಂಪ್ರಮೈಸ್ ಮಾಡಿಕೊಳ್ಳಲಾರೆ'

  'ಕೆಜಿಎಫ್ 3 ಮಾಡುವುದಿಲ್ಲ, ಕೆಜಿಎಫ್ ಸರಣಿಯನ್ನು ಜೀವಂತವಾಗಿಡುದಕ್ಕಾಗಿ, ಕತೆಯನ್ನು ಹಿಂಜಿಸಿ, ಕತೆಯೊಂದಿಗೆ ಕಾಂಪ್ರಮೈಸ್ ಮಾಡಿಕೊಳ್ಳಲಾಗದು' ಎಂದು ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಕೆಜಿಎಫ್ ಅಭಿಮಾನಿಗಳಿಗೆ ತುಸು ನಿರಾಸೆಯೂ ಮಾಡಿದ್ದಾರೆ ಪ್ರಶಾಂತ್ ನೀಲ್.

  ಅನ್ಬಿರವ್ ಸಹೋದರರಿಂದ ಸಾಹಸ

  ಅನ್ಬಿರವ್ ಸಹೋದರರಿಂದ ಸಾಹಸ

  ಸಂಜಯ್ ದತ್-ಯಶ್ ಅಭಿನಯದ ಕ್ಲೈಮ್ಯಾಕ್ಸ್‌ ದೃಶ್ಯಗಳನ್ನು ಕೆಲವು ದಿನಗಳ ಹಿಂದೆಯಷ್ಟೆ ಹೈದರಾಬಾದ್‌ನಲ್ಲಿ ಪ್ರಶಾಂತ್ ನೀಲ್ ಚಿತ್ರೀಕರಿಸಿದ್ದಾರೆ. ಯಶ್-ಸಂಜಯ್ ದತ್ ನಡುವಿನ ಆಕ್ಷನ್ ದೃಶ್ಯಗಳನ್ನು ಅನ್ಬಿರವ್ ಸಹೋದರರು ನಿರ್ದೇಶಿಸಿದ್ದಾರೆ.

  ಪ್ರಭಾಸ್ ನಟನೆಯ ಸಲಾರ್ ನಿರ್ದೇಶನ

  ಪ್ರಭಾಸ್ ನಟನೆಯ ಸಲಾರ್ ನಿರ್ದೇಶನ

  ಕೆಜಿಎಫ್ 2 ಸಿನಿಮಾದ ಬಳಿಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ನಿರ್ದೇಶಿಸಲಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಹೊಂಬಾಳೆ ಫಿಲಮ್ಸ್‌ ಸಿನಿಮಾದ ನಿರ್ಮಾಣ ಮಾಡುತ್ತಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ 'ಸಲಾರ್' ಬಿಡುಗಡೆ ಆಗಲಿದೆ.

  English summary
  Director Prashanth Neel gave clarification about KGF 3 movie. He said there will be no KGF 3. Can not compromise with the story for KGF 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X