For Quick Alerts
  ALLOW NOTIFICATIONS  
  For Daily Alerts

  'ಇನ್ಮುಂದೆ 'KGF-2' ಬಗ್ಗೆ ಕೇಳುವುದನ್ನು ನೀವು ಮಿಸ್ ಮಾಡಿಕೊಳ್ಳುತ್ತೀರಿ': ಪ್ರಶಾಂತ್ ನೀಲ್

  |

  ಕೆಜಿಎಫ್-2 ಪ್ರತಿಯೊಬ್ಬ ಚಿತ್ರಾಭಿಮಾನಿಯು ಕಾತರದಿಂದ ಕಾಯುತ್ತಿರುವ ಸಿನಿಮಾ. ಈಗಾಗಲೆ ಭಾರಿ ನಿರೀಕ್ಷೆ ಮೂಡಿಸಿರುವ ಕೆಜಿಎಫ್-2 ಸಿನಿಮಾದ ಪುಟ್ಟ ಪುಟ್ಟ ಅಪ್ ಡೇಟ್ ಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಎಲ್ಲಿ ಚಿತ್ರೀಕರಣವಾಗುತ್ತಿದೆ, ಯಾವ ಹೊಸ ಸ್ಟಾರ್ ಎಂಟ್ರಿಯಾಗಿದ್ದಾರೆ ಹೀಗೆ ಸಿನಿಮಾದಲ್ಲಾದ ಪ್ರತಿಯೊಂದು ವಿಚಾರವು ಅಪ್ ಡೇಟ್ ಮಾಡುವವರೆಗೂ ಅಭಿಮಾನಿಗಳು ಚಿತ್ರತಂಡವನ್ನು ಕಾಡುತ್ತಿದ್ದರು.

  ಕೆಜಿಎಫ್ ಚಿತ್ರೀಕರಣ ಮುಗಿಸಿದ ರವೀನಾ ಏನ್ ಮಾಡುದ್ರು ಗೊತ್ತಾ! | Raveena Tandon | KGF2 | Yash | Prashanthneel

  ಚಿತ್ರದ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೆ ಪೋಸ್ಟ್ ಮಾಡಿದರು 'ಕೆಜಿಎಫ್-2' ರಿಲೀಸ್ ಯಾವಾಗ ಎಂದು ಪ್ರಶ್ನಿಸುತ್ತಿದ್ದರು. ಬಿಟ್ಟು ಬಿಡದೆ ಕಾಡುತ್ತಿದ್ದ ಅಭಿಮಾನಿಗಳಿಗೆ ನಿರ್ದೇಶಕ ಪ್ರಶಾಂತ್ ನೀಲ್ "ಇನ್ಮುಂದೆ ಅಪ್ ಡೇಟ್ ಕೇಳುವುದನ್ನು ನೀವು ಮಿಸ್ ಮಾಡಿಕೊಳ್ಳುತ್ತೀರಾ" ಎಂದು ಹೇಳಿದ್ದಾರೆ.

  'KGF-2' ಚಿತ್ರೀಕರಣ ಮುಗಿಸಿದ ನಟಿ ರವೀನಾ: ಸಂತಸ ಹಂಚಿಕೊಂಡಿದ್ದು ಹೀಗೆ'KGF-2' ಚಿತ್ರೀಕರಣ ಮುಗಿಸಿದ ನಟಿ ರವೀನಾ: ಸಂತಸ ಹಂಚಿಕೊಂಡಿದ್ದು ಹೀಗೆ

  ಅಂದ್ಹಾಗೆ ಕೆಜಿಎಫ್-2 ನಿರ್ದೇಶಕ ದಿಢೀರನೆ ಹೀಗೆ ಹೇಳಲು ಕಾರಣವೇನು ಎಂದು ಯೋಚಿಸುತ್ತಿದ್ದೀರಾ? 'ಕೆಜಿಎಫ್-2' ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಪ್ರಶಾಂತ್ ನೀಲ್ "ಕೊನೆಯ ಹಂತದ ಚಿತ್ರೀಕರಣದಲ್ಲಿದ್ದೀವಿ. ಹಾಗಾಗಿ ಇನ್ಮುಂದೆ ಅಪ್ ಡೇಟ್ ಕೇಳುವುದನ್ನು ಮಿಸ್ ಮಾಡಿಕೊಳ್ಳುತ್ತೀರಾ" ಎಂದು ಹೇಳಿದ್ದಾರೆ.

  ಕೆಜಿಎಫ್-2 ಸದ್ಯ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈಗಾಗಲೆ ಯಶ್ ಮತ್ತು ಸಂಜಯ್ ದತ್ ಭಾಗದ ಬಹುಮುಖ್ಯ ದೃಶ್ಯವನ್ನು ಸೆರೆಹಿಡಿಲಾಗುತ್ತಿದೆ. ಇತ್ತೀಚಿಗಷ್ಟೆ ಬಾಲಿವುಡ್ ನಟಿ ರವೀನಾ ಟಂಡನ್ ಚಿತ್ರೀಕರಣ ಮುಗಿಸಿ ವಾಪಾಸ್ ಆಗಿದ್ದಾರೆ. ಇನ್ನೆನಿದ್ರು ಕೊನೆಯ ಹಂತದ ಚಿತ್ರೀಕರಣ ಬಾಕಿಯುಳಿದಿದೆ.

  ಸಧ್ಯದಲ್ಲೆ ಚಿತ್ರೀಕರಣ ಮುಗಿಸಲಿರುವ ಚಿತ್ರತಂಡ ಇನ್ನೇನು ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಶುರು ಮಾಡಲಿದೆ. ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿರುವ ಚಿತ್ರತಂಡ ಕೆಜಿಎಫ್-2 ಅಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಅಭಿಮಾನಿಗಳು ಎದುರು ನೋಡುತ್ತಿರುವುದು ಚಿತ್ರದ ಟೀಸರ್. ಸಧ್ಯದಲ್ಲೆ ಟೀಸರ್ ಸಹ ಅಭಿಮಾನಿಗಳ ಮುಂದೆ ಬರುವ ಸಾಧ್ಯತೆ ಇದೆ.

  English summary
  Kannada Director Prashanth Neel speak about KGF-2 kannada film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X