For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ನೀಲ್ ಹೇಳಿದ 'ಆ ಒಂದು' ಮಾತು ಈಗ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.!

  |
  Kannada Movie: ಪ್ರಶಾಂತ್ ನೀಲ್ ಮಾತು ಈಗ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.! | FILMIBEAT KANNADA

  ಸಾಮಾನ್ಯವಾಗಿ ಸಿನಿಮಾಗಳಲ್ಲಿ, ಸಿನಿಮಾರಂಗದಲ್ಲಿ ಒಂದು ಟ್ರೆಂಡ್ ಇದೆ. ಯಾವುದೇ ಸಿನಿಮಾ ಗೆದ್ದಾಗ ಮೊದಲು ಸ್ಟಾರ್ ಆಗೋದು ಆ ಚಿತ್ರದ ನಾಯಕ ಅಥವಾ ನಾಯಕಿ. ಆಮೇಲೆ ಡೈರೆಕ್ಟರ್. ಅದೇ ಸಿನಿಮಾ ಸೋತ್ರೆ ಮೊದಲು ಅಭಿಮಾನಿಗಳ ಪಾಲಿಗೆ 'ವಿಲನ್' ಆಗೋದೆ ಡೈರೆಕ್ಟರ್.

  ಇದು ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ಸಿನಿಲೋಕದಲ್ಲಿ ಇರೋದು ಹೀಗೆ. ಆದ್ರೆ, ಯಾವೊಬ್ಬ ನಿರ್ದೇಶಕರು ಕೂಡ ಸಿನಿಮಾ ಸೋತ್ರು, ಗೆದ್ರು ನಾನೇ ಹೊಣೆ ಎಂದು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಒಂದು ವೇಳೆ ಹೇಳಿಕೊಂಡಿದ್ದರು ಅಂತವರು ತೀರಾ ಅಪರೂಪ.

  ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!

  ಆದ್ರೀಗ, ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಈ ವಿಚಾರದಲ್ಲಿ ನೇರವಾಗಿದ್ದಾರೆ. ಸಿನಿಮಾದ ಫಲಿತಾಂಶ ಹೊರಬೀಳುವುದಕ್ಕೂ ಮುಂಚೆಯೇ ಒಂದು ಸ್ಪಷ್ಟತೆಗೆ ಬಂದಿದ್ದಾರೆ. ಇದನ್ನ ತೆಲುಗು ಕೆಜಿಎಫ್ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ದಿಟ್ಟೆದೆಯಿಂದ ಹೇಳಿದ್ದಾರೆ. ಸದ್ಯ, ಪ್ರಶಾಂತ್ ಹೇಳಿದ ಈ ಮಾತೊಂದು ಭಾರಿ ಚರ್ಚೆಗೆ ಕಾರಣವಾಗಿದೆ. ಏನದು? ಮುಂದೆ ಓದಿ....

  'ಕೆಜಿಎಫ್' ಡೈರೆಕ್ಟರ್ ಹೇಳಿದ್ದೇನು?

  'ಕೆಜಿಎಫ್' ಡೈರೆಕ್ಟರ್ ಹೇಳಿದ್ದೇನು?

  ನಿನ್ನೆ ಹೈದರಬಾದ್ ನಲ್ಲಿ ನಡೆದ ಕೆಜಿಎಫ್ ತೆಲುಗು ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಪ್ರಶಾಂತ್ ನೀಲು ಒಂದು ಕ್ಲಾರಿಟಿಗೆ ಬಂದಿದ್ದಾರೆ. ''ಪ್ರೊಡ್ಯೂಸರ್ ಕೇಳ್ದಷ್ಟು ದುಡ್ಡು ಹಾಕಿದಾರೆ, ಹೀರೋ ಕೇಳ್ದಷ್ಟು ಡೇಟ್ಸ್ ಕೊಟ್ಟಿದಾರೆ. ಸೋ ಸಿನಿಮಾಲಿ ನಿಮ್ಗೇನಾದ್ರು ಮಿಸ್ಟೇಕ್ಸ್ ಕಂಡ್ರೆ ಅದರ ಹೊಣೆ ನನ್ನದು'' ಎಂದು ಬಹಿರಂಗವಾಗಿ ಹೇಳಿದ್ದಾರೆ.

  'ಕೆಜಿಎಫ್'ಗೆ ಪ್ರಭಾಸ್ ವಿಶ್: ಒಟ್ಟಿಗೆ ಕಾಣಿಸಿದ ನ್ಯಾಷನಲ್ ಸ್ಟಾರ್ಸ್

  ಕಾನ್ಫಿಡೆನ್ಸ್ ಗೆ ಮೆಚ್ಚುಗೆ

  ಕಾನ್ಫಿಡೆನ್ಸ್ ಗೆ ಮೆಚ್ಚುಗೆ

  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ ಈ ಮಾತು ಕೇಳಿದ್ಮೇಲೆ, ಸಿನಿಮಾದ ಮೇಲೆ ಅವರಿಗಿರುವ ಕಾನ್ಫಿಡೆನ್ಸ್ ಅಥವಾ ಚಿತ್ರದ ಮೇಲೆ ಅವರಿಗಿರುವ ಅನುಮಾನನ ಎಂಬುದು ಕುತೂಹಲ. ಆದ್ರೆ, ಬಿಡುಗಡೆಗೂ ಮುಂಚೆ ಏನೇ ಆಗಲಿ ಅದರ ಜವಾಬ್ದಾರಿ ನನ್ನದು ಎನ್ನುವ ಮಾತು ಮಾತ್ರ ಈಗ ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ.

  ಪ್ರಶಾಂತ್ ಮಾತಾಡಿದ್ದು ಕಮ್ಮಿ

  ಪ್ರಶಾಂತ್ ಮಾತಾಡಿದ್ದು ಕಮ್ಮಿ

  ಇಲ್ಲಿಯವರೆಗೂ ಕೆಜಿಎಫ್ ಚಿತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಮಾತಾಡಿದ್ದ ಕಮ್ಮಿ. ಯಾಕಂದ್ರೆ, ಕೆಲಸ ಮಾತನಾಡಬೇಕು ಎಂಬ ಉದ್ದೇಶ ಅವರದ್ದು. ಇದನ್ನ ರಾಕಿಂಗ್ ಸ್ಟಾರ್ ಕೂಡ ಹೇಳಿದ್ರು. ''ಪ್ರಶಾಂತ್ ನೀಲ್ ಅವರು ಮಾತಾಡೋದು ಕಮ್ಮಿ. ಮಾತಾಡೋದಕ್ಕೆ ನಮ್ಮನ್ನ ಮುಂದೆ ಬಿಟ್ಟಿದ್ದಾರೆ. ಅವರು ಕೆಲಸದಲ್ಲಿ ತೋರಿಸ್ತಾರೆ. ಈಗಲೂ ಚಿತ್ರದ ಕೆಲಸಗಳಲ್ಲಿಯೇ ಅವರ ಗಮನ ಇದೆ'' ಎಂದಿದ್ದರು.

  ಅಂದು ಯಶ್ ಹೇಳಿದ್ದ ಒಂದೊಂದು ಮಾತು ಇಂದು ನಿಜ ಆಗ್ತಿದೆ.!

  ನಿರ್ಮಾಪಕ ಹಣ ಕೊಟ್ರು, ಯಶ್ ಡೇಟ್ಸ್ ಕೊಟ್ರು

  ನಿರ್ಮಾಪಕ ಹಣ ಕೊಟ್ರು, ಯಶ್ ಡೇಟ್ಸ್ ಕೊಟ್ರು

  ಪ್ರಶಾಂತ್ ನೀಲ್ ಅವರ ಮಾತಿನಂತೆ, ಕೆಜಿಎಫ್ ಸಿನಿಮಾಗೆ ಏನು ಬೇಕೋ ಅದನ್ನ ಒದಗಿಸುವಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಯಶಸ್ವಿಯಾಗಿದ್ದಾರೆ. ನಿರ್ದೇಶಕ ಕಲ್ಪನೆಗೆ ತಕ್ಕಂತೆ ಬಜೆಟ್ ಹಾಕಿ ಸಿನಿಮಾ ಮಾಡಿದ್ದಾರೆ. ಯಶ್ ಕೂಡ ನಿರ್ದೇಶಕರ ಬೇಡಿಕೆಯಂತೆ ಕಾಲ್ ಶೀಟ್ ನೀಡಿದ್ದಾರೆ. ಎರಡೂವರೆ ವರ್ಷ ಈ ಚಿತ್ರಕ್ಕಾಗಿ ಯಶ್ ಮುಡಿಪಾಗಿಟ್ಟಿದ್ದರು. ಇದೆಲ್ಲವೂ ನಿರ್ದೇಶಕರ ಮೇಲಿನ ನಂಬಿಕೆಯಿಂದ. ಹಾಗಾಗಿ, ನಿರ್ಮಾಪಕ ದುಡ್ಡು ಕೊಡ್ತಾರೆ, ಹೀರೋ ಡೇಟ್ಸ್ ಕೊಡ್ತಾರೆ. ಇದನ್ನ ನಿಭಾಯಿಸಿ ಒಂದೊಳ್ಳೆ ಸಿನಿಮಾ ಕೊಡಬೇಕಾಗಿರುವುದು ನಿರ್ದೇಶಕನ ಜವಾಬ್ದಾರಿ.

  ನಿರ್ದೇಶಕರನ್ನ ಟಾರ್ಗೆಟ್ ಮಾಡುವ ಅಭಿಮಾನಿಗಳು

  ನಿರ್ದೇಶಕರನ್ನ ಟಾರ್ಗೆಟ್ ಮಾಡುವ ಅಭಿಮಾನಿಗಳು

  ಇನ್ನು ಸಿನಿಮಾ ಚೆನ್ನಾಗಿಲ್ಲ ಅಥವಾ ಇಷ್ಟ ಆಗಿಲ್ಲ ಅಂದ್ರೆ, ಅಭಿಮಾನಿಗಳು ನೇರವಾಗಿ ಬೆರಳು ಮಾಡಿ ತೋರಿಸುವುದು ನಿರ್ದೇಶಕರ ಕಡೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಅಭಿಮಾನಿಗಳು ನಿರ್ದೇಶಕರನ್ನ ಟಾರ್ಗೆಟ್ ಮಾಡಿ ನಿಂದಿಸುವುದು ನೋಡಿದ್ದೇವೆ. ಇದನ್ನ ಮೀರಿ ಹಿಟ್ ಸಿನಿಮಾ ನೋಡಿ ನಿರ್ದೇಶಕ ಕಂಬ್ಯಾಕ್ ಮಾಡಬೇಕಾಗಿರುತ್ತೆ.

  ಬಾಲಿವುಡ್ ಮಂದಿ ಕೇಳಿದ 'ಕಟ್ಟಪ್ಪ-ಬಾಹುಬಲಿ' ಕಥೆ ಬಗ್ಗೆ 'ರಾಕಿ' ಏನಂದ್ರು?

  English summary
  Director Prashanth Neel Speech at KGF telugu movie Pre Release Event in hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X