ಅಗಸ್ತ್ಯ ಶ್ರೀಮುರಳಿ ಜೊತೆ 'ಉಗ್ರಂ' ನಿರ್ದೇಶಕ ಪ್ರಶಾಂತ್ ನೀಲ್
ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ 'ಭರಾಟೆ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ.
ಚಿತ್ರದ ಬಹುನಿರೀಕ್ಷಿತ ಮತ್ತು ದುಬಾರಿ ಫೈಟಿಂಗ್ ದೃಶ್ಯವನ್ನು ಬೆಂಗಳೂರಿನ ನೆಲಮಂಗಳ ಬಳಿ ಸೆರೆ ಹಿಡಿಯುತ್ತಿದೆ ಚಿತ್ರತಂಡ. 'ಭರಾಟೆ' ಅಖಾಡದಲ್ಲಿ ಬರೋಬ್ಬರಿ 10 ಖಳನಟರ ಜೊತೆ ನಟ ಶ್ರೀಮುರುಳಿ ಕಾದಾಡುವ ಸೀನ್ ಇದಾಗಿದೆ. ಚಿತ್ರದ ಈ ರೋಚಕ ಸನ್ನಿವೇಶವನ್ನು ನೋಡಲು 'ಉಗ್ರಂ' ಹಾಗೂ 'ಕೆ ಜಿ ಎಫ್' ನಿರ್ದೇಶಕ ಪ್ರಶಾಂತ್ ನೀಲ್ ಸಹ ಭಾಗಿಯಾಗಿದ್ದರು ಎನ್ನುವುದು ವಿಶೇಷ.

ಈ ಹೈ ವೋಲ್ಟೇಜ್ ಆಕ್ಷನ್ ಸೀನ್ ನೋಡಿ ನಿರ್ದೇಶಕ ಪ್ರಶಾಂತ್ ನೀಲ್ ಸಹ ಖುಷಿ ಪಟ್ಟಿದ್ದಾರಂತೆ. ಈ ಹಿಂದೆ ಶ್ರೀಮುರುಳಿ ಅಭಿನಯದ 'ಉಗ್ರಂ' ಚಿತ್ರವನ್ನು ನಿರ್ದೇಶನ ಮಾಡಿದ್ದ ಪ್ರಶಾಂತ್ ನೀಲ್ 'ಭರಾಟೆ' ಚಿತ್ರದ ಸೆಟ್ ಗೆ ಭೇಟಿ ನೀಡಿ ಚಿತ್ರತಂಡವನ್ನು ಮತ್ತಷ್ಟು ಹುರಿದುಂಬಿಸಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ನಟ ಶ್ರೀಮುರಳಿ ಅವರ ಸಂಬಂಧಿ ಕೂಡ ಹೌದು.

'ಭರಾಟೆ' ನಿರ್ದೇಶಕ ಚೇತನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ. 'ಮಫ್ತಿ' ಸಿನಿಮಾದ ನಂತರ ನಟ ಶ್ರೀಮುರಳಿ 'ಭರಾಟೆ' ಮೂಲಕ ಬರಲು ತಯಾರಿ ನಡೆಸುತ್ತಿದ್ದಾರೆ.


Click it and Unblock the Notifications











