'ಬಡವ ರಾಸ್ಕಲ್' ಅನ್ನು ಹೊಗಳಿದ 'ನರಾಚಿ' ಸೃಷ್ಟಿಕರ್ತ

ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗದಿಂದ ದೂರವಾದರು ಎಂಬ ಮಾತುಗಳು ಕೇಳಿಬರುತ್ತಿವೆ. 'ಕೆಜಿಎಫ್ 2' ಮುಗಿಸಿರುವ ಪ್ರಶಾಂತ್ ಇದೀಗ ಪ್ರಭಾಸ್ ನಟನೆಯ 'ಸಲಾರ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ ತೆಲುಗಿನ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಲಿದ್ದಾರೆ. ಹಾಗಾಗಿಯೇ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗವನ್ನು ಮರೆತರು ಎಂಬ ಆರೋಪಗಳು ಕೇಳಿ ಬರುತ್ತಿವೆ.

ಆದರೆ ಇದೀಗ ಪ್ರಶಾಂತ್ ನೀಲ್, ತಾವು ಕನ್ನಡ ಚಿತ್ರರಂಗವನ್ನಾಗಲಿ, ಕನ್ನಡ ಸಿನಿಮಾಗಳ ಮೇಲಿನ ಪ್ರೀತಿಯನ್ನಾಗಲಿ ಕಳೆದುಕೊಂಡಿಲ್ಲ ಎಂಬುದನ್ನು ಟ್ವೀಟ್‌ ಒಂದರ ಮೂಲಕ ತೋರ್ಪಡಿಸಿದ್ದಾರೆ.

ಹೊಸ ವರ್ಷಕ್ಕೆ ಪ್ರಶಾಂತ್ ನೀಲ್ ಕನ್ನಡ ಸಿನಿಮಾ ಒಂದನ್ನು ವೀಕ್ಷಿಸಿ, ಸಿನಿಮಾ ಬಗ್ಗೆ ಒಳ್ಳೆಯ ಮಾತನ್ನಾಡಿದ್ದಾರೆ. ಡಾಲಿ ಧನಂಜಯ್ ನಟನೆಯ ಹೊಸ ಸಿನಿಮಾ 'ಬಡವ ರಾಸ್ಕಲ್' ಅನ್ನು ಪ್ರಶಾಂತ್ ನೀಲ್ ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ಧನಾತ್ಮಕ ಮಾತುಗಳನ್ನಾಡಿದ್ದಾರೆ.

''2021 ಎಲ್ಲರಿಗೂ ರೋಲರ್‌ ಕೋಸ್ಟರ್ ರೈಡ್ ರೀತಿ ಇತ್ತು. ಈ ವರ್ಷದಲ್ಲಿ ಏರು-ಇಳಿತ ಎಲ್ಲವೂ ಇತ್ತು. ಆ ವರ್ಷ 'ಬಡವ ರಾಸ್ಕಲ್' ಅಂಥ ಒಳ್ಳೆಯ ಸಿನಿಮಾದೊಂದಿಗೆ ಕೊನೆಯಾಗಿದ್ದು ಖುಷಿಯ ವಿಷಯ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿರುವುದಕ್ಕೆ ಪ್ರತಿಭಾನ್ವಿತ ಧನಂಜಯ್‌ಗೆ ಅಭಿನಂದನೆಗಳು, ಜೊತೆಗೆ ನಟಿ ಅಮೃತಾ ಐಯ್ಯಂಗಾರ್, ನಿರ್ದೇಶಕ ಶಂಕರ್ ಮತ್ತು ಇಡೀಯ ಚಿತ್ರತಂಡಕ್ಕೆ ಶುಭಾಶಯಗಳು'' ಎಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.

ಧನಂಜಯ್ ನಿರ್ಮಾಣ ಮಾಡಿ, ಶಂಕರ್ ಗುರು ನಿರ್ದೇಶನ ಮಾಡಿರುವ 'ಬಡವ ರಾಸ್ಕಲ್' ಸಿನಿಮಾವನ್ನು ಶಿವರಾಜ್ ಕುಮಾರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈಗಾಗಲೇ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಪ್ರಶಾಂತ್ ನೀಲ್ ಸಹ ಸಿನಿಮಾವನ್ನು ಮೆಚ್ಚಿಕೊಂಡಿರುವುದು ಚಿತ್ರತಂಡಕ್ಕೆ ಇನ್ನಷ್ಟು ಆತ್ಮವಿಶ್ವಾಸ ತುಂಬಿದೆ.

ಹಿಟ್ ಆದ 'ಬಡವ ರಾಸ್ಕಲ್'

ಹಿಟ್ ಆದ 'ಬಡವ ರಾಸ್ಕಲ್'

'ಬಡವ ರಾಸ್ಕಲ್' ಸಿನಿಮಾ ಡಿಸೆಂಬರ್ 24ರಂದು ಬಿಡುಗಡೆ ಆಗಿತ್ತು. ಅದೇ ದಿನ ನಿಖಿಲ್ ಕುಮಾರಸ್ವಾಮಿ ನಟನೆಯ 'ರೈಡರ್' ಸಿನಿಮಾ ಸಹ ಬಿಡುಗಡೆ ಆಗಿತ್ತು. ಮಧ್ಯಮವರ್ಗದ ಯುವಕನ ಕತೆಯುಳ್ಳ ಸಿನಿಮಾ 'ಬಡವ ರಾಸ್ಕಲ್' ಸಿನಿಮಾದ ಬಗ್ಗೆ ಪ್ರೇಕ್ಷಕರಿಂದ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ಹಿಟ್ ಎನಿಸಿಕೊಂಡಿದೆ. ಬಂಡವಾಳ ಹೂಡಿದ ಮೊದಲ ಸಿನಿಮಾದಲ್ಲಿಯೇ ಗೆಲುವಿನ ರುಚಿ ಕಂಡಿದ್ದಾರೆ ಡಾಲಿ ಧನಂಜಯ್. ಇದೇ ಖುಷಿಯಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಅಭಿಮಾನಿಗಳಿಗೆ ಧನ್ಯವಾಸ ಸಲ್ಲಿಸುತ್ತಿದ್ದಾರೆ ಡಾಲಿ.

ಹಿಟ್ ಮೇಲೆ ಹಿಟ್ ನೀಡುತ್ತಿರುವ ಡಾಲಿ

ಹಿಟ್ ಮೇಲೆ ಹಿಟ್ ನೀಡುತ್ತಿರುವ ಡಾಲಿ

ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ 'ರತ್ನನ್ ಪ್ರಪಂಚ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರ ಬಳಿಕ ಬಿಡುಗಡೆ ಆದ ಡಾಲಿ ಧನಂಜಯ್ ಪೋಷಕ ಪಾತ್ರದಲ್ಲಿ ನಟಿಸಿದ್ದ 'ಪುಷ್ಪ' ಸಿನಿಮಾ ಸಹ ಹಿಟ್ ಆಗಿದೆ. ಇದೀಗ 'ಬಡವ ರಾಸ್ಕಲ್' ಸಿನಿಮಾ ಸಹ ದೊಡ್ಡ ಹಿಟ್ ಆಗಿದ್ದು, ಗೆಲುವಿನ ಅಲೆಯ ಮೇಲೆ ಡಾಲಿ ತೇಲುತ್ತಿದ್ದಾರೆ.

ಡಾಲಿ ಧನಂಜಯ್ ಮುಂಬರುವ ಸಿನಿಮಾಗಳು

ಡಾಲಿ ಧನಂಜಯ್ ಮುಂಬರುವ ಸಿನಿಮಾಗಳು

ಹಲವು ಸಿನಿಮಾಗಳಲ್ಲಿ ಡಾಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಚಿತಾ ರಾಮ್ ಜೊತೆಗೆ 'ಮಾನ್ಸೂನ್ ರಾಗ', ಡಾಲಿ ಧನಂಜಯ್ ಸಹನಿರ್ಮಾಣ ಮಾಡುತ್ತಿರುವ 'ಹೆಡ್ಡು ಬುಷ್' ಸಿನಿಮಾ ಸಹ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಬೆಂಗಳೂರಿನ ಮಾಜಿ ಭೂಗತ ದೊರೆ ಜಯರಾಜ್ ಜೀವನ ಕುರಿತ್ತದ್ದಾಗಿದೆ. ಸುನಿಲ್ ಮೈಸೂರು ನಿರ್ದೇಶನದ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಜೊತೆ ನಟಿಸಿರುವ 'ಬೈರಾಗಿ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಜಗ್ಗೇಶ್ ನಟನೆಯ 'ತೋತಾಪುರಿ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭು ಶ್ರೀನಿವಾಸ್ ನಿರ್ದೇಶನದ 'ಡಾಲಿ' ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಜೊತೆಗೆ ತೆಲುಗಿನ 'ಪುಷ್ಪ 2' ಸಿನಿಮಾದಲ್ಲಿಯೂ ನಟಿಸಲಿದ್ದು, ಈ ಸಿನಿಮಾದಲ್ಲಿ ಡಾಲಿ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರಲಿದೆ.

ತೆಲುಗು ಚಿತ್ರರಂಗದಲ್ಲಿ ಪ್ರಶಾಂತ್ ನೀಲ್ ಬ್ಯುಸಿ

ತೆಲುಗು ಚಿತ್ರರಂಗದಲ್ಲಿ ಪ್ರಶಾಂತ್ ನೀಲ್ ಬ್ಯುಸಿ

ಇನ್ನು ಪ್ರಶಾಂತ್ ನೀಲ್ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. 'ಕೆಜಿಎಫ್ 2' ಸಿನಿಮಾದ ಚಿತ್ರೀಕರಣ ಮುಗಿಸಿರುವ ಪ್ರಶಾಂತ್, ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ಜೂ ಎನ್‌ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಅದರ ಬಳಿಕ ಮೈತ್ರಿ ಮೂವಿ ಮೇಕರ್ಸ್‌ಗಾಗಿ ಅಲ್ಲು ಅರ್ಜುನ್‌ಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇನ್ನು ಎರಡು ವರ್ಷ ಪ್ರಶಾಂತ್ ನೀಲ್ ಕನ್ನಡದ ಸಿನಿಮಾ ಮಾಡುವುದು ಬಹುತೇಕ ಅಸಾಧ್ಯ.

More from Filmibeat

English summary
Director Prashanth Neel watched Dali Dhannajay's Badava Rascal movie. Prashanth Neel praised the Badava Rascal team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X