ವಿಶೇಷವಾದ 'ಸಿನಿಮಾ ಕೇಕ್' ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ನಟ ಗಣೇಶ್
ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 42ನೇ ವಸಂತಕ್ಕೆ ಕಾಲಿಟ್ಟ ನಟ ಗಣೇಶ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಪರಿಣಾಮ ಅದ್ದೂರಿ ಜನ್ಮದಿನಾಚರಣೆಗೆ ಬ್ರೇಕ್ ಹಾಕಿದ್ದಾರೆ.
Recommended Video
ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರು ಸಹ ಶುಭಕೋರುತ್ತಿದ್ದಾರೆ. ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು ಗೋಲ್ಡನ್ ಸ್ಟಾರ್ ಗೆ ವಿಶೇಷವಾದ ಗಿಫ್ಟ್ ಸಿಕ್ಕಿದೆ. ನಿರ್ದೇಶಕ ಪ್ರಶಾಂತ್ ರಾಜ್ ವಿಶೇಷವಾಗಿ ಮಾಡಿಸಿ ತಂದಿದ್ದ ಸಿನಿಮಾ ಸೆಟ್ ನ ಕೇಕ್ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತ್ತು. ಅಲ್ಲದೆ ಈ ಕೇಕ್ ನ ಫೋಟೋಗಳು ಎಲ್ಲಾ ವೈರಲ್ ಆಗುತ್ತಿವೆ. ಮುಂದೆ ಓದಿ.

ಗಮನ ಸೆಳೆಯುತ್ತಿದೆ ಸಿನಿಮಾ ಸೆಟ್ ನ ಕೇಕ್
ಸಿನಿಮಾ ನಟಿರು ಅಂದ್ಮೇಲೆ ಭಿನ್ನ ವಿಭಿನ್ನ ರೀತಿಯ ಕೇಕ್ ಮಾಡಿಸುವುದು ಸಹಜ. ಗಣೇಶ್ ಹುಟ್ಟುಹಬ್ಬಕ್ಕೂ ವಿಶೇಷವಾದ ಕೇಕ್ ತಯಾರಾಗಿತ್ತು. ನಿರ್ದೇಶಕ ಪ್ರಶಾಂತ್ ರಾಜ್, ಗಣಿಗಾಗಿಯೆ ಸಿನಿಮಾ ಸೆಟ್ ನ ಕೇಕ್ ಮಾಡಿದ್ದಾರೆ. ಈ ವಿಶೇಷ ಕೇಕ್ ಮೂಲಕ ಗಣೇಶ್ ಗೆ ಶುಭಕೋರಿದ್ದಾರೆ. ನಿರ್ದೇಶಕರ ಕುರ್ಚಿ, ಕ್ಯಾಮರಾ, ಲೈಟ್, ಕ್ಲ್ಯಾಪ್ ಬೋರ್ಡ್, ಸೆಟ್ ಮದ್ಯನಿಂತಿರುವ ಗಣೇಶ್. ಆಕರ್ಷಕವಾಗಿರುವ ಈ ಕೇಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಗಣೇಶ್ ಮನೆಯಲ್ಲಿ ಸರಳ ಆಚರಣೆ
ಈ ಬಾರಿ ಗಣೇಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಜರಾಗಿಲ್ಲ, ಹಾರ, ಕೇಕ್, ಜೈಕಾರಗಳಿಲ್ಲ. ಆದರೆ ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ಅವರ ತಂಡ ವಿಶೇಷ ಕೇಕ್ ಅನ್ನು ತೆಗೆದುಕೊಂಡು ಹೋಗಿ ಗಣೇಶ್ ಮನೆಯಲ್ಲಿಯೆ ಹುಟ್ಟುಹಬ್ಬ ಆಚರಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸರಳವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಪ್ರಶಾಂತ್ ರಾಜ್ ಜೊತೆ ಮೂರನೆ ಸಿನಿಮಾ
ಗಣೇಶ್ ಮತ್ತು ಪ್ರಶಾಂತ್ ಕಾಂಬಿನೇಶನ್ ನಲ್ಲಿ ಈಗಾಗಲೆ ಆರೆಂಜ್ ಮತ್ತು ಜೂಮ್ ಎರಡು ಸಿನಿಮಾಗಳು ಬಂದಿವೆ. ಈಗ ಮೂರನೆ ಬಾರಿಗೆ ಈ ಜೋಡಿ ಒಂದಾಗಿದೆ. ವಿಶೇಷ ಅಂದರೆ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜೂಮ್ ಮತ್ತು ಆರೆಂಜ್ ಸಿನಿಮಾಗೂ ತಮನ್ ನೀಡಿದ್ದರು. ಮೂರನೆ ಬಾರಿ ಈ ಮೂವರು ಒಂದಾಗುತ್ತಿದ್ದಾರೆ. ಪ್ರೊಡಕ್ಷನ್ ನಂಬರ್-07 ಹೆಸರಿನಲ್ಲಿ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದೆ ಸಿನಿಮಾತಂಡ.

ಸ್ಯಾಂಡಲ್ ವುಡ್ ತಾರೆಯರ ವಿಶ್
ಗಣೇಶ್ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರು ಶುಭಕೋರುತ್ತಿದ್ದಾರೆ. ಯೋಗರಾಜ್ ಭಟ್, ಜಗ್ಗೇಶ್, ಸಂತೋಷ್ ಆನಂದ್ ರಾಮ್, ಸಿಂಪಲ್ ಸುನಿ ಸೇರಿದಂತೆ ಆನೇಕರು ಗಣೇಶ್ ಗೆ ಶುಭಹಾರೈಸಿದ್ದಾರೆ.


Click it and Unblock the Notifications











