For Quick Alerts
  ALLOW NOTIFICATIONS  
  For Daily Alerts

  ವಂಚನೆ ಪ್ರಕರಣಕ್ಕೆ ಟ್ವಿಸ್ಟ್; ನಿರ್ದೇಶಕ ಪ್ರಶಾಂತ್ ರಾಜ್ ಹೇಳಿದ್ದೇನು?

  |

  ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಲವ್ ಗುರು ಖ್ಯಾತಿಯ ಪ್ರಶಾಂತ್ ರಾಜ್ ವಿರುದ್ಧ ಕೇಳಿಬಂದಿದ್ದ ವಂಚನೆ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಶಬರೀಶ್ ಎನ್ನುವ ವ್ಯಕ್ತಿ ಪ್ರಶಾಂತ್ ರಾಜ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ತನ್ನಿಂದ ಕೆಲಸ ಮಾಡಿಸಿಕೊಂಡು ಹಣಕೊಡದೆ ಕಾರನ್ನು ನೀಡಿದ್ದರು. ಇದೀಗ ಕಾರು ವಾಪಸ್ ಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಶಬರೀಶ್, ಪ್ರಶಾಂತ್ ವಿರುದ್ಧ ಆರೋಪಿಸಿದ್ದರು.

  ವಂಚನೆ ಪ್ರಕರಣ, ಸಮಾಜಯಿಷಿ ಕೊಟ್ಟ ನಿರ್ದೇಶಕ ಪ್ರಶಾಂತ್ ರಾಜ್

  ಇದೀಗ ನಿರ್ದೇಶಕ ಪ್ರಶಾಂತ್ ರಾಜ್ ಪ್ರತಿಕ್ರಿಯೆ ನೀಡಿ, ''ಶಬರೀಶ್ ಎನ್ನುವ ವ್ಯಕ್ತಿಯಿಂದ ತನಗೆ ವಂಚನೆ ಆಗಿದೆ ಎಂದಿದ್ದಾರೆ. ತನ್ನ ತೋಟದ ಮನೆ ನಿರ್ಮಾಣಕ್ಕಾಗಿ ಹಣ ಮತ್ತು ಕಾರನ್ನು ಪಡೆದಿದ್ದರು. ಆದರೆ ಕಳಪೆ ಕಾಮಗಾರಿ ಮಾಡಿದ್ದು, ಒಂದು ವರ್ಷದಿಂದ ಸರಿಯಾಗಿ ಕೆಲಸ ಸಹ ಮಾಡಿಲ್ಲ, ಹಾಗಾಗಿ ಹಣ ಮತ್ತು ಕಾರನ್ನು ವಾಪಸ್ ಕೇಳಿದಕ್ಕೆ ಹೀಗೆಲ್ಲ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ,'' ಎಂದಿದ್ದಾರೆ.

  ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಪ್ರಶಾಂತ್ ರಾಜ್, ತನ್ನ ತೋಟದ ಮನೆಯ ಕಾಮಗಾರಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುವ ಪ್ರಶಾಂತ್ ರಾಜ್, ಶಬರೀಶ್ ಎನ್ನುವ ವ್ಯಕ್ತಿ ಕೈಗೆ ಸಿಗುತ್ತಿಲ್ಲ, ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಲ್ಲಾದ್ರು ಸಿಕ್ಕರೆ ಆತನನ್ನು ಅಲ್ಲೇ ಕೂರಿಸಿಕೊಂಡು ಮಾಹಿತಿ ನೀಡಿ ಎಂದಿದ್ದಾರೆ.


  "ಶಬರೀಶ್ ಮತ್ತು ಆತನ ತಂದೆ ವಿಜಯ್ ಕುಮಾರ್ ಎನ್ನುವರು ಚನ್ನಪಟ್ಟಣದವರು. ಒಂದು ವರ್ಷದ ಹಿಂದೆ ತಮ್ಮ ತೋಟ ಮನೆ ಕೆಲಸ ಅವರಿಗೆ ಕೊಟ್ಟಿದ್ದೆವು. 30, 40 ಲಕ್ಷ ಹಣ ಮತ್ತು ಓಡಾಡಲು ಕಾರು ಕೊಟ್ಟಿದ್ವಿ. ಒಂದು ವರ್ಷದಿಂದ ಕೆಲಸನು ಸರಿಯಾಗಿ ಮಾಡಿಲ್ಲ, ಮಾಡಿದ ಕೆಲಸನೂ ಸರಿ ಮಾಡಿಲ್ಲ. ಬಿಲ್ಡಿಂಗ್ ಬಿದ್ದೊಗುವ ಹಾಗೆ ಕಟ್ಟಿದ್ದಾರೆ. ಇದರಿಂದ ತುಂಬಾ ಸಮಸ್ಯೆ ತುಂಬಾ ಆಗಿತ್ತು" ಎಂದಿದ್ದಾರೆ.

  ಶಬರೀಶ್ ವಿರುದ್ಧ ಬೆಂಗಳೂರು ಮತ್ತು ಚನ್ನಪಟ್ಟಣದಲ್ಲಿ ದೂರು ಕೂಡ ನೀಡಿದ್ದೇವೆ. ಕೆಲಸನು ಸರಿ ಮಾಡಿಲ್ಲ ಹಾಗಾಗಿ ಹಣ ಮತ್ತು ಕಾರು ವಾಪಸ್ ಕೊಡು ಅಂತ ಕೇಳಿದ್ವಿ. ಆದರೆ ಯಾರಿಗೂ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಅಲ್ಲದೆ ಮಿಡಿಯಾಗೆ ಹೋಗುತ್ತೀನಿ ಅಂತ ಹೇಳುತ್ತಿದ್ದರು. ನ್ಯಾಯ, ಧರ್ಮಕ್ಕೆ ಎಲ್ಲಿ ಹೋದರು ಒಂದೇ ಅಂತ ಹೇಳಿದೆ. ತಮ್ಮ ಕೈಗೆ ಸಿಗುತ್ತಿಲ್ಲ. ಆದರೆ ನನ್ನ ಹೆಸರು ಹೇಳಿಕೊಂಡು ನನ್ನ ಬಗ್ಗೆ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎನ್ನುವ ವಿಚಾರ ಕೇಳಿದೆ. ಆತ ಏನಾದರು ಬಂದರೆ ಅವರನ್ನು ಅಲ್ಲೆ ಕೂರಿಸಿಕೊಳ್ಳಿ. ನಾನು ಬರ್ತಿನಿ, ಪೊಲೀಸರು ಹುಡುಕುತ್ತಿದ್ದಾರೆ" ಎಂದಿದ್ದಾರೆ.

  "ನನ್ನ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ, ಅವಕಾಶ ಕೊಡುತ್ತೇನೆ ಅಂತ ಹೇಳಿದ್ದೆ ಅಂತ ಸುಳ್ಳು ಹೇಳುತ್ತಿದ್ದಾರೆ. ದುಡ್ಡು ಕೊಟ್ಟು ನಾವೆ ಇಂತಮಾತು ಕೇಳುವ ಹಾಗೆ ಆಗಿದೆ" ಎಂದು ಪ್ರಶಾಂತ್ ರಾಜ್ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

  English summary
  Director Prashanth Raj reacts about Cheating Case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X