»   » ಪ್ರೀತಿ ಏಕೆ ಭೂಮಿ ಮೇಲಿದೆ ಅಂದ್ರೆ ಪ್ರೇಮ್‌ರ ಹುಟ್ಟುಹಬ್ಬಕ್ಕಾಗಿ!

ಪ್ರೀತಿ ಏಕೆ ಭೂಮಿ ಮೇಲಿದೆ ಅಂದ್ರೆ ಪ್ರೇಮ್‌ರ ಹುಟ್ಟುಹಬ್ಬಕ್ಕಾಗಿ!

Subscribe to Filmibeat Kannada


ಬೆಂಗಳೂರು, ಅ.22 : ಸೋಮವಾರ (ಅ.22) ನಟ, ನಿರ್ದೇಶಕ ಪ್ರೇಮ್‌ರ ಹುಟ್ಟು‍ಹಬ್ಬ. ಕರಿಯ, ಎಕ್ಸ್‌ಕ್ಯೂಸ್ ಮಿ ಮತ್ತು ಜೋಗಿ ಚಿತ್ರಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ ಹ್ಯಾಟ್ರಿಕ್ ನಿರ್ದೇಶಕ ಎನಿಸಿಕೊಂಡ ಪ್ರೇಮ್ ಈಗ 'ಪ್ರೀತಿ ಏಕೆ ಭೂಮಿ ಮೇಲಿದೆ?" ಎಂದು ಪ್ರಶ್ನಿಸುವ ಮೂಲಕ ನಾಯಕ ನಟನಾಗಿ ಬರಲಿದ್ದಾನೆ.

'ಕರಿಯ" ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದ ಪ್ರೇಮ್ 'ಎಕ್ಸ್‌ಕ್ಯಾಸ್ ಮಿ" ನಿರ್ದೇಶನದ ನಂತರ ಒಂದಷ್ಟು ಹೆಸರು ಗಾಂಧಿ ನಗರದಲ್ಲಿ ಚಾಲ್ತಿಗೆ ಬಂತು. ತಾಯಿ ಮತ್ತು ಮಗನ ವಾತ್ಸಲ್ಯ, ಬೆಂಗಳೂರಿನ ಭೂಗತ ಜಗತ್ತಿನ ನಂಟು ಜೊತೆಗೆ ಒಂದಷ್ಟು ಉಪ್ಪು, ಹುಳಿ ಮತ್ತು ಖಾರದ 'ಜೋಗಿ" ಚಿತ್ರ ಪ್ರೇಮ್‌ರನ್ನು ಮನೆಮಾತಾಗಿಸಿತು. ಈಗ 'ಪ್ರೀತಿ ಏಕೆ ಭೂಮಿ ಮೇಲಿದೆ?" ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

ಒಂದೆರಡು ದಿನ ರಕ್ಷಿತ-ಪ್ರೇಮ್‌ರ ಪ್ರೇಮಾಯಣ ಗಾಂಧಿನಗರದ ಬಾಯಿಗೆ ಆಹಾರವಾಗಿತ್ತು. ಆದರೆ ಅವರು ಮದುವೆಯಾಗುವ ಮೂಲಕ ಎಲ್ಲರ ಬಾಯಿ ಬಂದ್ ಮಾಡಿದರು. ಹಾಗೆಯೇ 'ಪ್ರೀತಿ ಏಕೆ..." ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಮ್‌ಪ್ರಸಾದ್ ಮತ್ತು ಪ್ರೇಮ್‌‌ರ ನಡುವೆ ಕೆಲಕಾಲ ವಿವಾದವೇರ್ಪಟ್ಟಿತ್ತು. ಆದರೆ ಪ್ರೇಮ್ ಈಗ ಇವೆಲ್ಲವುಗಳಿಂದ ಬಿಡುಗಡೆಯಾಗಿ 'ಭೂಮಿ"ಗೆ ಬಂದು ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಅದೇ ಸಂತೋಷ.

(ದಟ್ಸ್‌ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada