For Quick Alerts
  ALLOW NOTIFICATIONS  
  For Daily Alerts

  ಯುದ್ಧ ಶುರು: ಹೊಸ ಸಿನಿಮಾಕ್ಕೆ ತಯಾರಾದ ಪ್ರೇಮ್

  By ಫಿಲ್ಮಿಬೀಟ್ ಡೆಸ್ಕ್
  |

  ನಿರ್ದೇಶಕ ಪ್ರೇಮ್ ಇತ್ತೀಚೆಗೆ ಸಿನಿಮಾ ಅಲ್ಲದ ಕಾರಣಕ್ಕೆ ಸುದ್ದಿಗೆ ಬಂದಿದ್ದರು. ಅದರಲ್ಲಿ ಅವರದ್ದೇನೂ ತಪ್ಪಿರಲಿಲ್ಲ ಎಂಬುದು ಬೇರೆ ಮಾತು. ಆದರೆ ಈಗ ಸಿನಿಮಾ ಕಾರಣಕ್ಕೆ ಸುದ್ದಿಗೆ ಬಂದಿದ್ದಾರೆ.

  ಪುಡಂಗ್ ಎಂದವರಿಗೆ ಉತ್ತರ ಕೊಡಲು ಅಖಾಡಕ್ಕಿಳಿದ ಪ್ರೇಮ್

  ದರ್ಶನ್ ವಿವಾದದ ನಡುವೆ ಅಕಾರಣವಾಗಿ ಪ್ರೇಮ್ ಹೆಸರು ನುಗ್ಗಿತ್ತು. ಇದಕ್ಕೆ ಪ್ರೇಮ್ ಬೇಸರದಿಂದ ಪ್ರತಿಕ್ರಿಯಿಸಿದ್ದರು. ಪ್ರೇಮ್ ಪತ್ನಿ, ದರ್ಶನ್ ಗೆಳತಿ ರಕ್ಷಿತಾ ಸಹ ದರ್ಶನ್ ಹೇಳಿಕೆ ಬಗ್ಗೆ ಬೇಸರ ಮಾಡಿಕೊಂಡಿದ್ದರು. ಆದರೆ ನಂತರ ರಕ್ಷಿತಾ, ದರ್ಶನ್ ಕುರಿತು ಹಾಕಿದ್ದ ಒಳ್ಳೆಯ ಪೋಸ್ಟ್‌ನಿಂದ ಅವರ ನಡುವಿನ ಕಹಿ ಕರಗಿದೆ ಎಂದು ಅಭಿಮಾನಿಗಳು ಸಂತಸ ಪಟ್ಟಿದ್ದರು.

  ಅದೆಲ್ಲ ಮುಗಿದ ಬಳಿಕ ಇದೀಗ ನಿರ್ದೇಶಕ ಪ್ರೇಮ್ ಮತ್ತೆ ಸುದ್ದಿಗೆ ಬಂದಿದ್ದಾರೆ. ಈ ಬಾರಿ ಸಿನಿಮಾ ಕಾರಣಕ್ಕೆ ಪ್ರೇಮ್ ಸುದ್ದಿಯಲ್ಲಿದ್ದಾರೆ. ಹಾಗೆಂದು ಪ್ರೇಮ್ ನಿರ್ದೇಶಿಸಿರುವ 'ಏಕ್ ಲವ್ ಯಾ' ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದರೆ? ಎಂದು ಪ್ರಶ್ನಿಸುವಂತಿಲ್ಲ. ಏಕೆಂದರೆ ಇದು 'ಏಕ್ ಲವ್ ಯಾ' ಸಿನಿಮಾದ ಬಗೆಗಿನ ಸುದ್ದಿಯಲ್ಲ.

  ನಟ ಪ್ರೇಮ್ ತಮ್ಮ ಹೊಸ ಸಿನಿಮಾದ ಚಿತ್ರಕತೆಯನ್ನು ಪೂರ್ಣಗೊಳಿಸಿದ್ದಾರೆ. ಹೌದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರೇಮ್, ತಮ್ಮ 9ನೇ ಸಿನಿಮಾದ ಚಿತ್ರಕತೆಗೆ ವಿಶೇಷ ಪೂಜೆ ನಡೆಸಿ ಶಾಸ್ತ್ರೋಪ್ತವಾಗಿ ಬೂದಕುಂಬಳಕಾಯಿಯನ್ನು ಸಹ ಒಡೆದಿದ್ದಾರೆ.

  ಪಕ್ಕಾ ಆಕ್ಷನ್ ಸಿನಿಮಾ ರೆಡಿ ಮಾಡಲಿದ್ದಾರೆ ಪ್ರೇಮ್?

  ಪಕ್ಕಾ ಆಕ್ಷನ್ ಸಿನಿಮಾ ರೆಡಿ ಮಾಡಲಿದ್ದಾರೆ ಪ್ರೇಮ್?

  ಪ್ರೇಮ್‌ ಹಾಕಿರುವ ವಿಡಿಯೋ ಹಾಗೂ ಅದಕ್ಕೆ ನೀಡಿರುವ ಒಕ್ಕಣೆ ನೋಡಿದರೆ ಪ್ರೇಮ್ ಪಕ್ಕಾ ಆಕ್ಷನ್‌ ಸಿನಿಮಾ ನಿರ್ದೇಶಿಸುತ್ತಿದ್ದಾರೆಯೇ ಎಂಬ ಅನುಮಾನ ಸಹಜ. ''ಯಾರಾದರೂ ಯುದ್ಧದಲ್ಲಿ ಹುತಾತ್ಮರಾದರೆ ಅವರ ಸ್ವಾಗತಕ್ಕಾಗಿ ಸ್ವರ್ಗ ಕಾಯುತ್ತಿರುತ್ತದೆ. ಒಂದೊಮ್ಮೆ ಯುದ್ಧದಲ್ಲಿ ಗೆದ್ದರೆ ಅವರಿಗಾಗಿ ಅಧಿಕಾರದ ಕಿರೀಟ ಕಾಯುತ್ತಿರುತ್ತದೆ. ಒಟ್ಟಿನಲ್ಲಿ ಯುದ್ಧ ಒಳ್ಳೆಯದೆ. ಯುದ್ಧ ಈಗ ಶುರುವಾಗುತ್ತಿದೆ'' ಎಂದಿದ್ದಾರೆ ನಿರ್ದೇಶಕ ಪ್ರೇಮ್. ಚಿತ್ರಕತೆ ಕಾರ್ಯವನ್ನು ಮುಗಿಸಿದ್ದೇನೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಗಸ್ಟ್ 2021ರಲ್ಲಿಯೇ ಬಿಡುಗಡೆ ಮಾಡಲಿದ್ದೇನೆ'' ಎಂದಿದ್ದಾರೆ ಪ್ರೇಮ್.

  ಪ್ರೇಮ್‌ಗೆ ಇದು 9ನೇ ಸಿನಿಮಾ

  ಪ್ರೇಮ್‌ಗೆ ಇದು 9ನೇ ಸಿನಿಮಾ

  ಇದು ಪ್ರೇಮ್‌ಗೆ 9ನೇ ಸಿನಿಮಾ. 2003ರಲ್ಲಿ 'ಕರಿಯಾ' ಸಿನಿಮಾದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ ಪ್ರೇಮ್ ಆ ನಂತರ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಪ್ರೇಮ್‌ಗೆ ಒಂದು ಭಿನ್ನವಾದ ಸ್ಟೈಲ್ ಇದ್ದು ಆ ಮಾದರಿ ಹಲವು ಬಾರಿ ಹಿಟ್ ಆಗಿದೆ, ಜನರಿಗೆ ಮನರಂಜನೆ ಒದಗಿಸಿದೆ, ಕೆಲವು ಬಾರಿ ಬೇಸರವನ್ನೂ ತರಿಸಿದ್ದಿದೆ. ಪ್ರೇಮ್‌ರ ಕೊನೆಯ ಸಿನಿಮಾ 'ವಿಲನ್' ಶಿವರಾಜ್ ಕುಮಾರ್, ಸುದೀಪ್ ಅಂಥಹಾ ಇಬ್ಬರು ಸ್ಟಾರ್ ನಟರನ್ನು ಹೊಂದಿದ್ದರೂ ಅಷ್ಟೇನೂ ಉತ್ತಮ ಯಶಸ್ಸುಗಳಿಸಲಿಲ್ಲ.

  'ಏಕ್‌ ಲವ್ ಯಾ' ಬಿಡುಗಡೆಗೆ ತಯಾರು

  'ಏಕ್‌ ಲವ್ ಯಾ' ಬಿಡುಗಡೆಗೆ ತಯಾರು

  ಪ್ರೇಮ್ ನಿರ್ದೇಶನದ 'ಏಕ್‌ ಲವ್ ಯಾ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸಿನಿಮಾವು ಯುವ ಪ್ರೇಮಿಗಳ ಕತೆಯನ್ನು ಹೊಂದಿದ್ದು ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಹಾಡಿನ ಬಿಟ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಪ್ರೇಮ್ ಪತ್ನಿ ರಕ್ಷಿತಾ ಅವರ ಆಪ್ತ ಸಂಬಂಧಿ ಅಭಿಷೇಕ್ ರಾವ್ ನಾಯಕ ನಟನಾಗಿದ್ದರೆ, ರಚಿತಾ ರಾಮ್ ಮತ್ತು ರೀಶ್ಮಾ ನಾಯಕಿಯರಾಗಿದ್ದಾರೆ. ಸಿನಿಮಾವನ್ನು ನಟಿ ರಕ್ಷಿತಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು ಬಿಡುಗಡೆಗೆ ತಯಾರಿ ನಡೆದಿದೆ.

  ಪ್ರೇಮ್ ಏನು ಪುಡಾಂಗಾ ಅಂದಿದ್ದ ದರ್ಶನ್

  ಪ್ರೇಮ್ ಏನು ಪುಡಾಂಗಾ ಅಂದಿದ್ದ ದರ್ಶನ್

  ಹೋಟೆಲ್‌ನಲ್ಲಿ ದರ್ಶನ್ ಸಪ್ಲೈಯರ್ ಅನ್ನು ಹೊಡೆದುದ್ದಾಗಿ ಇಂದ್ರಜಿತ್ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ ಮಾತನಾಡಿದ್ದ ನಟ ದರ್ಶನ್, ಯಾರಿಗೂ ನಾನು 70 ದಿನಕ್ಕೂ ಹೆಚ್ಚು ಡೇಟ್ಸ್ ನೀಡುವುದಿಲ್ಲ ಆದರೆ ಪ್ರೇಮ್ ನನ್ನೊಂದಿಗೆ ಸಿನಿಮಾ ಮಾಡುವುದಾಗಿ ಮಾತನಾಡಿದಾಗ ಹೊರಗೆ ಹೋಗಿ ದರ್ಶನ್ ನನಗೆ 100 ದಿನ ಡೇಟ್ಸ್ ಕೊಟ್ಟಿದ್ದಾರೆ ಎಂದಿದ್ದರಂತೆ. ಹಾಗಾಗಿ ನಾನು ಸಿನಿಮಾ ಕ್ಯಾನ್ಸಲ್ ಮಾಡಿಕೊಂಡೆ. ಪ್ರೇಮ್ ಏನು ದೊಡ್ಡ ಪುಡಾಂಗಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದ ಪ್ರೇಮ್, 'ಒಬ್ಬ ನಟ ಸ್ಟಾರ್ ಆಗಬೇಕೆಂದರೆ ನಿರ್ದೇಶಕರಿರಲೇ ಬೇಕು. ನಿರ್ದೇಶಕರನ್ನು ದರ್ಶನ್ ಅಪಮಾನಿಸಿದ್ದಾರೆ'' ಎಂದಿದ್ದರು. ರಕ್ಷಿತಾ ಸಹ ಅಸಮಾಧಾನ ಹೊರಗೆ ಹಾಕಿದ್ದರು. ಇದಾದ ಕೆಲವು ದಿನಗಳ ನಂತರ ರಕ್ಷಿತಾ, ದರ್ಶನ್ ಜೊತೆಗಿನ ಫೊಟೊ ಅಪ್‌ಲೋಡ್ ಮಾಡಿ ಒಳ್ಳೆಯ ಮಾತಾಡಿದ್ದರು. ಅಲ್ಲಿಗೆ ಈ ಪ್ರಕರಣ ಸುಖಾಂತ್ಯವಾಯಿತು.

  English summary
  Director Prem Completed his 9th Project script work. Prem written a action filled story. He may start shooting of the movie very soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X