For Quick Alerts
  ALLOW NOTIFICATIONS  
  For Daily Alerts

  ಸಾವೇ ಬಂದರೂ ಮಣ್ಣೇ ಆದರೂ ನಿಮ್ಮ ಪ್ರೀತಿ ಅಭಿಮಾನಕ್ಕೆಂದೆಂದೂ ಕೊನೆಯಿಲ್ಲ

  |

  ''ದೂರ ಹೋದರು, ಎಲ್ಲೇ ಇದ್ದರು, ನೀನೇ ಮರೆತರೂ ತಾಯಿ ಮರೆಯಲ್ಲಾ, ಸಾವೇ ಬಂದರೂ, ಮಣ್ಣೇ ಆದರೂ, ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ''....ಇದು ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾದ 'ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು' ಹಾಡಿನಲ್ಲಿ ಬರುವ ಸಾಲುಗಳು.

  Prem 6 pack ಫೋಟೋಶೂಟ್ , 'ಮಳೆ' ಚಿತ್ರಕ್ಕಾಗಿ | Filmibeat Kannada

  ಈ ಸಾಲನ್ನು ಸ್ವಲ್ಪ ಬದಲಾಯಿಸಿರುವ ಪ್ರೇಮ್ 'ಸಾವೇ ಬಂದರೂ ಮಣ್ಣೇ ಆದರೂ ನಿಮ್ಮ ಪ್ರೀತಿ ಅಭಿಮಾನಕ್ಕೆಂದೆಂದೂ ಕೊನೆಯಿಲ್ಲ' ಎಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

  'ಜೋಗಿ' ಪ್ರೇಮ್ ಹಾಡಿರುವ ಟಾಪ್ 10 ಹಾಡುಗಳು, ನಿಮಗೆ ಯಾವುದು ಇಷ್ಟ?

  ಅಂದ್ಹಾಗೆ, ಆಗಸ್ಟ್ 19ಕ್ಕೆ ಕನ್ನಡದ ಸೂಪರ್ ಹಿಟ್ ಸಿನಿಮಾ ಜೋಗಿ ತೆರೆಕಂಡು ಹದಿನೈದು ವರ್ಷ ಪೂರೈಸಲಿದೆ. ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿದ್ದ ಬ್ಲಾಕ್ ಬಸ್ಟರ್ ಚಿತ್ರ 15 ವರ್ಷ ಪೂರೈಸುತ್ತಿರುವ ಸಂಭ್ರಮವನ್ನು ಅಭಿಮಾನಿಗಳು ಜಾತ್ರೆ ಮಾಡ್ತಿದ್ದಾರೆ.

  ಜೋಗಿ ಜಾತ್ರೆ ಎಂಬ ಹೆಸರಿನಲ್ಲಿ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಮಾಡುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಸಾಥ್ ನೀಡುತ್ತಿದ್ದಾರೆ.

  19ನೇ ತಾರೀಖು ಸಂಜೆ 5 ಗಂಟೆಗೆ ಪ್ರೇಮ್ ಅವರ ಅಧಿಕೃತ ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಖಾತೆಗಳಲ್ಲಿ ಲೈವ್ ಬರುತ್ತಿದ್ದಾರೆ. ಜೋಗಿ ಸಿನಿಮಾ ಕುರಿತು ಮಾತನಾಡಲಿದ್ದಾರೆ. ಜೋಗಿ ಚಿತ್ರದ 15 ವರ್ಷ ಸಂಭ್ರಮವನ್ನು ಹಂಚಿಕೊಳ್ಳಲಿದ್ದಾರೆ.

  English summary
  Kannada actor Shiva Rajkumar starrer JOGI movie completing 15 years on august 19. so, director Prem coming to facebook live tomorrow evening at 5pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X