ರವಿ ಡಿ ಚನ್ನಣ್ಣನವರ್ ಬಳಿ ದೂರು ನೀಡಿದ ನಿರ್ದೇಶಕ ಪ್ರೇಮ್
Recommended Video

The Villain : ರವಿ ಡಿ. ಚನ್ನಣ್ಣನವರ್ ಬಳಿ ಹೋಗಿ ದೂರು ಕೊಟ್ಟ ನಿರ್ದೇಶಕ ಪ್ರೇಮ್ | FILMIBEAT KANNADA
ನಿರ್ದೇಶಕ ಪ್ರೇಮ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡಿದವರ ವಿರುದ್ಧ ಪ್ರೇಮ್ ಕಾನೂನಾತ್ಮಕ ಹೋರಟಕ್ಕೆ ಮುಂದಾಗಿದ್ದಾರೆ.
ಇಂದು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರೇಮ್ ದೂರು ನೀಡಿದ್ದಾರೆ. ರವಿ ಡಿ ಚನ್ನಣ್ಣನವರ್ ರೊಂದಿಗೆ ಮಾತನಾಡಿದ ಅವರು ತಪ್ಪು ಮಾಡಿದವರಿಗೆ ತಕ್ಕ ಪಾಠ ಕಲಿಸುವಂತೆ ಮನವಿ ಮಾಡಿದ್ದಾರೆ.
''ಸಿನಿಮಾ ಬಗ್ಗೆ ಮಾತನಾಡಲಿ ಆದರೆ, ವೈಯಕ್ತಿಕ ವಿಚಾರಗಳ ಬಗ್ಗೆ ಯಾಕೆ ಮಾತನಾಡಬೇಕು. ಕೆಲವರು ಬಾಯಿಗೆ ಬಂದ ಹಾಗೆ ಏನೆನೇ ಹೇಳಿದ್ದು ನನ್ನ ಮನಸ್ಸಿಗೆ ನೋವಾಗಿದೆ'' ಎಂದು ದೂರಿನಲ್ಲಿ ಪ್ರೇಮ್ ಉಲ್ಲೇಖಿಸಿದ್ದಾರೆ.

'ದಿ ವಿಲನ್' ಸಿನಿಮಾದ ಬಿಡುಗಡೆಯ ನಂತರ ಪ್ರೇಮ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳು ಹೆಚ್ಚಾಗಿತ್ತು. ಕೆಲವರು ವಿಡಿಯೋಗಳ ಮೂಲಕ ಕೆಟ್ಟದಾಗಿ ಪ್ರೇಮ್ ಬಗ್ಗೆ ಹಗುರವಾಗಿ ಮಾತನಾಡಿದ್ದರು.
More from Filmibeat
English summary
Kannada director Prem filed a complaint in Upparpet police station, Bengaluru.


Click it and Unblock the Notifications











