'ಕಲಿ'ಗೆ ಪೂಜೆ ಆಯ್ತು ಇನ್ನು ಶೂಟಿಂಗ್ ಹಬ್ಬ ಶುರು ಕಣ್ರೀ
ಚಂದನವನದಲ್ಲಿ ಅದ್ಧೂರಿಯಾಗಿ ಸೆಟ್ಟೇರಿರುವ ಸ್ಟಾರ್ ನಟರಾದ ಕಿಚ್ಚ ಮತ್ತು ಶಿವಣ್ಣ ಅವರ ಬಿಗ್ ಬಜೆಟ್ ನ 'ಕಲಿ' ಚಿತ್ರದ ಸ್ಕ್ರೀನ್ ಪ್ಲೇಗೆ ಹ್ಯಾಟ್ರಿಕ್ ನಿರ್ದೇಶಕ ಜೋಗಿ ಪ್ರೇಮ್ ಅವರು ಮಂತ್ರಾಲಯದಲ್ಲಿ ಪೂಜೆ ಮಾಡಿಸಿಕೊಂಡಿದ್ದಾರೆ.
ಇತ್ತೀಚೆಗೆ ತಮ್ಮ ಅತ್ತೆ (ರಕ್ಷಿತಾ ಅಮ್ಮ) ಮಮತಾ ರಾವ್ ಅವರೊಂದಿಗೆ 'ಕಲಿ' ಚಿತ್ರದ ಸ್ಕ್ರೀನ್ ಪ್ಲೇಯನ್ನು ಪುಣ್ಯಕ್ಷೇತ್ರ ಮಂತ್ರಾಲಯಕ್ಕೆ ಕೊಂಡೊಯ್ದಿದ್ದ ನಿರ್ದೇಶಕ ಪ್ರೇಮ್ ಅವರು ಅಲ್ಲಿ ಪೂಜೆ ಮಾಡಿಸಿಕೊಂಡು ಬಂದಿದ್ದಾರೆ.[ಶಿವಣ್ಣ-ಸುದೀಪ್ ರವರ 'ಕಲಿ' ಚಿತ್ರದ ನಾಯಕಿಯರು ಯಾರು?]

ಇಲ್ಲಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಒಂದಾಗಿ ನಟಿಸುತ್ತಿರುವ 'ಕಲಿ' ಚಿತ್ರದ ಮೊದಲ ಹಂತದ ಚಿತ್ರೀಕರಣದ ಕೆಲಸಗಳಿಗೆ ಅಧೀಕೃತ ಮುದ್ರೆ ಬಿದ್ದಂತಾಗಿದೆ.

ಇನ್ನು ನಿರ್ದೇಶಕ 'ಜೋಗಿ' ಪ್ರೇಮ್ ಅವರ ಜೊತೆ ಮಂತ್ರಾಲಯದ ರಾಯರ ಪವಿತ್ರ ಸನ್ನಿಧಾನಕ್ಕೆ ಕಾಮಿಡಿ ನಟ ಕಮ್ ನಿರ್ಮಾಪಕ ಬುಲೆಟ್ ಪ್ರಕಾಶ್ ಮತ್ತು ಕೆಲವು ಆಪ್ತ ಗೆಳೆಯರು ತೆರಳಿದ್ದರು.[ಸುದೀಪ್-ಶಿವಣ್ಣಗೆ ಜೋಡಿಯಾಗ್ತಾರ, ಅನುಷ್ಕಾ-ನಯನತಾರಾ]

ಅಂದಹಾಗೆ ಪತಿ ಪ್ರೇಮ್ ಅವರು ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ತೆರಳಿರುವ ಚಿತ್ರಗಳನ್ನು ನಟಿ ರಕ್ಷಿತಾ ಪ್ರೇಮ್ ಅವರು ತಮ್ಮ ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿದ್ದಾರೆ.['ಕಲಿ'ಯಲ್ಲಿ ಕಿಚ್ಚ-ಶಿವಣ್ಣ ಜೊತೆ ಕಮಲ್ ಹಾಸನ್ ನಟಿಸ್ತಾರಾ?]

ಪೂಜೆ ಮುಗಿಸಿಕೊಂಡು ವಾಪಸಾಗಿರುವ 'ಕಲಿ' ಚಿತ್ರತಂಡ ಇನ್ನೇನು ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದೆ. ಒಟ್ನಲ್ಲಿ ಸ್ಟಾರ್ ನಟರ ಚಿತ್ರದ ಬಗ್ಗೆ ಅಭಿಮಾನಿಗಳು ಕೂಡ ಭಾರಿ ಕುತೂಹಲ ಇಟ್ಟುಕೊಂಡಿದ್ದಾರೆ. ಇನ್ನು ಪ್ರೇಮ್ ಅವರು ಕೂಡ ಇನ್ನುಳಿದ ತಾರಾಗಣದ ಆಯ್ಕೆಯನ್ನು ಮಾಡಿ ಎಲ್ಲವನ್ನೂ ಬೇಗ ಬೇಗ ಮುಗಿಸುವ ಆತುರದಲ್ಲಿದ್ದಾರೆ.[ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ']

ಚಿತ್ರಕ್ಕೆ ನಾಯಕಿಯರು ಯಾರು ಎಂಬುದು ಇನ್ನೂ ಡಿಸೈಡ್ ಆಗಿಲ್ಲ. ಸದ್ಯಕ್ಕೆ ದಕ್ಷಿಣ ಭಾರತದ ಖ್ಯಾತ ತಾರೆಯರು ಹೆಸರು ಕೇಳಿ ಬರುತ್ತಿದೆ. ಯಾರು ಎಂಬುದು ಕೆಲವೇ ದಿನಗಳಲ್ಲಿ ತಿಳಿದು ಬರಲಿದೆ.


Click it and Unblock the Notifications











