'ದಿ ವಿಲನ್' ಚಿತ್ರದ ರಹಸ್ಯಗಳನ್ನ ಬಿಚ್ಚಿಟ್ಟ ಜೋಗಿ ಪ್ರೇಮ್

Recommended Video

The Villain : ದಿ ವಿಲನ್ ಸಿನಿಮಾ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಬಯಲು ಮಾಡಿದ ಜೋಗಿ ಪ್ರೇಮ್ | Oneindia Kannada

ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸಿರುವ 'ದಿ ವಿಲನ್' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ.....ಎಷ್ಟು ಚಿತ್ರಮಂದಿರಗಳಲ್ಲಿ ಪ್ರೇಮ್ ಸಿನಿಮಾ ಬರುತ್ತೆ....ದಿ ವಿಲನ್ ಚಿತ್ರದ ಕ್ಲೈಮ್ಯಾಕ್ಸ್ ಸಖತ್ ಸೆಂಟಿಮೆಂಟ್ ಇದೆಯಂತೆ.....ಸೆನ್ಸಾರ್ ಅವರು ಎ ಸರ್ಟಿಫಿಕೇಟ್ ಕೊಡ್ತೀನಿ ಅಂದ್ರಂತೆ.....ಸಿನಿಮಾ ತುಂಬಾ ದೊಡ್ಡದಂತೆ.....?

ಹೀಗೆ 'ವಿಲನ್' ಬಗ್ಗೆ ಪ್ರಶ್ನೆಗಳು, ಅನುಮಾನಗಳು, ಕುತೂಹಲಗಳು ಕಾಡುತ್ತಿರುವುದು ಒಂದಾ ಎರಡಾ. ಈ ಎಲ್ಲಾ ಗೊಂದಲಗಳಿಗೂ ಸ್ವತಃ ಪ್ರೇಮ್ ಅವರೇ ಉತ್ತರ ನೀಡಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಲನ್ ಚಿತ್ರದ ರಿಲೀಸ್ ದಿನಾಂಕ ಬಹಿರಂಗಪಡಿಸಿದ ಪ್ರೇಮ್, ಸಿನಿಮಾದ ಕುರಿತ ಸಂಪೂರ್ಣವಾಗಿ ವಿವರಿಸಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 18 ರಂದು ವಿಲನ್ ಸಿನಿಮಾ ತೆರೆಕಾಣಲಿದೆ. ಹ್ಯಾಟ್ರಿಕ್ ಹೀರೋ, ಸುದೀಪ್ ಹಾಗೂ ಪ್ರೇಮ್ ಅಭಿಮಾನಿಗಳು ದಸರಾ ಆಚರಿಸಲು ಈಗಲೇ ಸಜ್ಜಾಗುತ್ತಿದ್ದಾರೆ. ಅಷ್ಟಕ್ಕೂ, ಪ್ರೇಮ್ ಬಿಚ್ಚಿಟ್ಟ ಸಂಗತಿಗಳೇನು.? ಮುಂದೆ ಓದಿ....

ನಾನು ಡೇಟ್ ಯಾವತ್ತೂ ಹೇಳಿಲ್ಲ

ನಾನು ಡೇಟ್ ಯಾವತ್ತೂ ಹೇಳಿಲ್ಲ

''ಒಂದು ಸಿನಿಮಾ ಮಾಡ್ಬೇಕಂದ್ರೆ ತುಂಬಾ ಟೆಕ್ನಿಕಲಿ ಕೆಲಸಗಳಿರುತ್ತೆ. ಅಂದ್ರೆ, ಗ್ರಾಫಿಕ್ಸ್, ಎಫೆಕ್ಟ್, ಮ್ಯೂಸಿಕ್, ಕಂಟೆಂಟ್ ತುಂಬಾ ಸಮಯ ತಗೊಳ್ಳುತ್ತೆ. ನಾನು ಖುದ್ದು ಇದುವರೆಗೂ ರಿಲೀಸ್ ದಿನಾಂಕ ಅನೌನ್ಸ್ ಮಾಡಿರಲಿಲ್ಲ. ಗಣೇಶ ಹಬ್ಬಕ್ಕೆ ಡೇಟ್ ಹೇಳ್ತೀನಿ ಅಂದಿದ್ದೆ. ಈಗ ಮಾಡಿದ್ದೀನಿ''

ನಾನು ಯಾಕೆ ಲೇಟ್ ಮಾಡ್ತೀನಿ

ನಾನು ಯಾಕೆ ಲೇಟ್ ಮಾಡ್ತೀನಿ

''ಕೆಲವು ಸಿನಿಮಾ ಮಾಡಬೇಕಾದರೇ ಟೈಮ್ ಬೇಕಾಗುತ್ತೆ. ಆದ್ರೂ, ಪ್ರೇಮ್ ಸಿನಿಮಾ ಲೇಟ್ ಮಾಡ್ತಾನೆ, ವರ್ಷನೂಗಟ್ಟಲೇ ಮಾಡ್ತಾನೆ ಅಂತಾರೆ. ಹೌದು, ಸಿನಿಮಾ ಚೆನ್ನಾಗಿ ಬರಬೇಕು. ಮೊದಲು ನನಗೆ ನಮ್ಮ ಟೀಂ ತೃಪ್ತಿಯಾಗಬೇಕು. ಆಮೇಲೆ ಜನರ ಮುಂದೆ ತರ್ತೀವಿ. ಅವರು ಏನ್ ಹೇಳ್ತಾರೆ ಅನ್ನೋದು ಆಮೇಲೆ. ಕೆಲವೊಮ್ಮೆ ಲೇಟ್ ಆಗುತ್ತೆ''

ಸೆಂಟಿಮೆಂಟ್ ಸಿನಿಮಾ

ಸೆಂಟಿಮೆಂಟ್ ಸಿನಿಮಾ

''ಸಿನಿಮಾವನ್ನ ನಮ್ಮ ಟೀಂ ಅವರು ಕೆಲವರು ನೋಡಿದ್ದಾರೆ. ನೋಡಿದವರು ಭರ್ಜರಿ ಫೈಟ್ ನಲ್ಲಿ ಸಿನಿಮಾ ಮುಗಿಸ್ತೀರಾ ಅಂದುಕೊಂಡಿದ್ವಿ. ಆದ್ರೆ, ನೀವು ಸೆಂಟಿಮೆಂಟ್ ನಲ್ಲಿ ಕ್ಲೈಮ್ಯಾಕ್ಸ್ ಮಾಡಿದ್ದೀರಾ ಅಂತ ಸರ್ಪ್ರೈಸ್ ಆದ್ರು. ಬಟ್, ಇಬ್ಬರು ದೊಡ್ಡ ನಟರು. ಸುದೀಪ್ ಮತ್ತು ಶಿವಣ್ಣ ಅಂತಹ ಕಮರ್ಷಿಯಲ್ ಸ್ಟಾರ್ ಗಳನ್ನ ಇಟ್ಕೊಂಡು, ಅವರನ್ನ ಹೇಗೆ ಪ್ರೆಸೆಂಟ್ ಮಾಡ್ಬೇಕು ಅನ್ನೋದು ಡಿಫ್ರೆಂಟ್. ಮಾಮೂಲಿ ಹೊಡೆದಾಟ, ಬಡಿದಾಟ ಸಿನಿಮಾ ಮಾಡ್ಬಹುದು ಅದು ದೊಡ್ಡ ವಿಷ್ಯವಲ್ಲ. ಆದ್ರೆ, ಇದರಲ್ಲಿ ಒಂದು ಅರ್ಥವಿದೆ. ಒಂದು ಉದ್ದೇಶ ಇಟ್ಕೊಂಡು ಮಾಡಿದ್ದೀವಿ''

ಸಿನಿಮಾ ಯಾಕೆ ದೊಡ್ಡದಿದೆ

ಸಿನಿಮಾ ಯಾಕೆ ದೊಡ್ಡದಿದೆ

''ಇಡೀ ಸಿನಿಮಾ ಬಂದಿದ್ದು ಮೂರು ಗಂಟೆ ಹತ್ತು ನಿಮಿಷ. ಡಬ್ಬಿಂಗ್ ಗೂ ಅಷ್ಟೇ ಹೋಗಿತ್ತು. ಆಮೇಲೆ ಹದಿನೈದು ನಿಮಿಷ ಟ್ರಿಮ್ ಮಾಡಿದ್ವಿ. ನನ್ನ ಸಿನಿಮಾಗಳು ಯಾವಾಗಲೂ ದೊಡ್ಡದು ಇರುತ್ತೆ. ಸುಮ್ಮನೆ ಕಥೆ ಹೇಳೋಕೆ ಹೋಗಲ್ಲ. ಕಂಟೆಂಟ್ ಚೆನ್ನಾಗಿರಬೇಕು. ಸೆಂಟಿಮೆಂಟ್ ಅಥವಾ ಬೇರೆಯೊಂದು ಏನೋ ಇದೆ ಅಂದಾಗ ಸಿನಿಮಾ ದೊಡ್ಡದಾಗುತ್ತೆ. ಸೆನ್ಸಾರ್ ನವರು ಅದೇ ಹೇಳಿದ್ರು. ಮೂರು ಗಂಟೆ ಸಿನಿಮಾ ಇದೆ. ಸಿನಿಮಾ ಹೋಗಿದ್ದೇ ಗೊತ್ತಾಗಲಿಲ್ಲ. ಕಂಟೆಂಟ್ ತುಂಬಾ ಸ್ಟ್ರಾಂಗ್ ಇದೆ ಬಿಡಿ ಅಂದ್ರು''

ಸೆನ್ಸಾರ್ ಯಾಕೆ 'ಎ' ಕೊಡ್ತೀನಿ ಅಂದ್ರು

ಸೆನ್ಸಾರ್ ಯಾಕೆ 'ಎ' ಕೊಡ್ತೀನಿ ಅಂದ್ರು

''ಸೆನ್ಸಾರ್ ಮಂಡಳಿ ಕೆಲವು ದೃಶ್ಯ ಕಟ್ ಮಾಡಿ ಅಂದ್ರು. ನಾನು ಒಪ್ಪಿಲ್ಲ. ಯಾಕಂದ್ರೆ, ಯಾವುದು ಅಶ್ಲೀಲ, ಅಸಭ್ಯ, ಭಯಾನಕ, ಕ್ರೂರ ಎನ್ನುವ ದೃಶ್ಯವಿರಲಿಲ್ಲ. ಇದ್ದಿದ್ದೆ ಶಿವಣ್ಣದ್ದು ಒಂದು ಫೈಟ್ ಸೀನ್ ನಲ್ಲಿ ರಕ್ತದ ದೃಶ್ಯ ಇತ್ತು. ಅದು ರಿಯಲ್ ಅಲ್ಲಾ, ಸಿಜಿ ವರ್ಕ್. ಕೆಲವೊಂದು ಡೈಲಾಗ್ ಇತ್ತು. ನಾನು ಆ ಡೈಲಾಗ್ ಕಟ್ ಮಾಡ್ತೀನಿ ಅಂದೆ. ಸರಿ ಹಾಗಾದ್ರೆ ಅಂತ ಯು/ಎ ಕೊಟ್ರು''

ಸಾವಿರ ಚಿತ್ರಮಂದಿರದಲ್ಲಿ 'ವಿಲನ್'

ಸಾವಿರ ಚಿತ್ರಮಂದಿರದಲ್ಲಿ 'ವಿಲನ್'

''ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಸಿನಿಮಾ ಪ್ರದರ್ಶನ ಮಾಡೋಕೆ ಪ್ಲಾನ್ ನಡೆತಿದೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಒಂದೇ ಸಲ ತೆರೆಕಾಣ್ತಿದೆ. ಅಂಧ್ರ, ತಮಿಳುನಾಡು, ಮುಂಬೈ, ದೆಹಲಿ, ಎಲ್ಲಾ ಕಡೆ ಸೇರಿ ಸಾವಿರ ಥಿಯೇಟರ್ ನಲ್ಲಿ ಬರುತ್ತೆ. ಕೆಜಿ ರಸ್ತೆಯಲ್ಲಿ ಎರಡು ಅಥವಾ ಮೂರು ಚಿತ್ರಮಂದಿರದಲ್ಲಿ ಬರಬಹುದು''

More from Filmibeat

English summary
Kiccha sudeep and shiva rajkumar starrer the villain movie release date announced. Director Prem has cleared all doubt about the villain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X