ಪ್ರೇಮ್ ಅಡ್ಡಕ್ಕೆ ಜೊತೆಯಾಯ್ತು ಮತ್ತೊಂದು ವಿವಾದ

Prem Adda Iamge
ನಿರ್ದೇಶಕ ಪ್ರೇಮ್ ಅವರ ಬರಲಿರುವ 'ಪ್ರೇಮ್ ಅಡ್ಡ' ಚಿತ್ರಕ್ಕೂ ವಿವಾದಕ್ಕೂ ಭಾರಿ ನಂಟು. ಚಿತ್ರ ಘೋಷಣೆಯಾದ ದಿನದಂದಲೇ ಪ್ರಾರಂಭವಾದ ವಿವಾದ ಸೆಟ್ಟೇರಿದ ನಂತರವೂ ಆಗಾಗ ಬೇರೆಬೇರೆ ದಾರಿಯಲ್ಲಿ ಚಿತ್ರಕ್ಕೆ ಜೊತೆಯಾಗುತ್ತಲೇ ಬಂತು. ಇತ್ತೀಚಿಗೆ ಈ ಚಿತ್ರದ ಆಡಿಯೋ ಬಿಡುಗಡೆ ನಡೆದು ಚಿತ್ರತಂಡ ನಿಟ್ಟುಸಿರು ಬಿಟ್ಟಿರಬೇಕು ಎಂದುಕೊಳ್ಳುವಷ್ಟರಲ್ಲಿ ಹೊಸ ವಿವಾದವೊಂದು 'ಪ್ರೇಮ್ ಅಡ್ಡ'ದ ಬೆನ್ನುಬಿದ್ದಿದೆ.

ಆಡಿಯೋ ಬಿಡುಗಡೆ ನಂತರ ಹಾಡುಗಳ ಬಗ್ಗೆ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಗಳಲ್ಲಿರುವ ಅಷ್ಟೂ ಹಾಡುಗಳಲ್ಲಿ 'ಮೇಲುಕೋಟೆ ಹುಡುಗಿಯೊಬ್ಳು ಪಡುವಾರಳ್ಳಿ ಜಾತ್ರೆಯಾಗೆ ಇಣುಕಿ ಇಣುಕಿ ನೋಡ್ತಾಳೆ ಏನ್ ಸಿಂಗಾರ... ಮಂಡಿ ತನ್ಕ ಲಂಗ ಎತ್ಕೊಂಡ್ ತಳುಕು ಬಳುಕು ಸೊಂಟ ತೋರಿಸ್ಕೊಂಡ್.. ''' ಎಂಬ ಹಾಡು ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಆದರೆ ಅದೇ ಹಾಡೀಗ ಭಾರಿ ವಿವಾದಕ್ಕೂ ಕಾರಣವಾಗಿದೆ.

ಈ ಹಾಡು ಕೇಳಿ ಪಡುವಾರಹಳ್ಳಿ ಹುಡುಗರೇನೋ ಖುಷಿಯಾಗಿರಬಹುದು, ಆ ಬಗ್ಗೆ ಮಾಹಿತಿಯಿಲ್ಲ. ಆದರೆ ಮೇಲುಕೋಟೆ ಜನರು ಮಾತ್ರ ಈ ಹಾಡಿನ ಬಗ್ಗೆ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಚಿತ್ರತಂಡವನ್ನು ಸಂಪರ್ಕಿಸಿರುವ ಮೇಲುಕೋಟೆ ಜನರು, "ಈ ಹಾಡನ್ನು ತೆಗೆದುಬಿಡಿ. ಅದು ನಮ್ಮೂರ ಹೆಣ್ಣುಮಕ್ಕಳಿಗೆ ಅವಮಾನ. ತೆಗೆದುಹಾಕದಿದ್ದರೆ ಕೇಸ್ ದಾಖಲಿಸುತ್ತೇವೆ" ಎಂದಿದ್ದಾರೆ.

ಕಾರಣ, ಈ ಹಾಡು ಕೇಳಿದ ಮೇಲುಕೋಟೆ ಪಡ್ಡೆಗಳು ಅಲ್ಲಿನ ಹೆಣ್ಣುಮಕ್ಕಳು ದಾರಿಯಲ್ಲಿ ಹೋಗುವಾಗ ಈ ಹಾಡು ಹಾಡಿ ಕಿಚಾಯಿಸುತ್ತಾರಂತೆ. ಹೀಗಾಗಿ ಹಾಡನ್ನು ತೆಗೆದುಹಾಕಬೇಕಂತೆ. ಅದಕ್ಕೆ ಚಿತ್ರತಂಡ "ನಮಗೆ ಮೇಲುಕೋಟೆಯನ್ನಾಗಲೀ ಅಥವಾ ಅಲ್ಲಿನ ಹೆಣ್ಣುಮಕ್ಕಳನ್ನಾಗಲೀ ಕೀಳಾಗಿ ಚಿತ್ರಿಸುವ ಉದ್ದೇಶವಿಲ್ಲ. ಹುಡುಗಿಯ ಅಂದಚೆಂದವನ್ನು ವರ್ಣಿಸಲು ಈ ಊರಿನ ಹೆಸರು ಬಳಸಿಕೊಂಡಿದ್ದೇವೆ ಅಷ್ಟೇ" ಎಂದು ಸ್ಪಷ್ಟೀಕರಣ ನೀಡಿದ್ದಾರಂತೆ. ಆದರೂ ಮುಂದೇನಾಗಲಿದೆ ಎಂಬುದು ಸದ್ಯಕ್ಕೆ ಎಲ್ಲರ ಕುತೂಹಲ ಕೆರಳಿಸುವ ಸಂಗತಿಯಾಗಿದೆ...(ಒನ್ ಇಂಡಿಯಾ ಕನ್ನಡ)

More from Filmibeat

English summary
Director Prem upcoming movie 'Prem Adda' is again in a Controversy. Now the controversy is for a Song in this movie. The song, which is used Melukote village name in its lyrics, is facing controversy. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X