»   » ಪ್ರೇಮ್, ಮಹೇಶ್ 'ಎಫ್ಎಂ'ನಲ್ಲಿ ಬಾಬು ಮಾಡಿದ್ದೇನು?

ಪ್ರೇಮ್, ಮಹೇಶ್ 'ಎಫ್ಎಂ'ನಲ್ಲಿ ಬಾಬು ಮಾಡಿದ್ದೇನು?

Posted By:
Subscribe to Filmibeat Kannada

ಬಹುನಿರೀಕ್ಷಿತ 'ಪ್ರೇಮ್ ಅಡ್ಡ' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು ಇತ್ತೀಚಿಗೆ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ. ಅದು ಈಗಾಗಲೇ ಪ್ರಚಾರ ಹಾಗೂ ಅಪಪ್ರಚಾರ ಎರಡನ್ನೂ ಪಡೆದುಕೊಂಡಿದೆ, ಮತ್ತೇಕೆ ಪ್ರಚಾರ ಎಂದು ಕೇಳುವಂತಿಲ್ಲ. ನಿರ್ದೇಶಕ ಪ್ರೇಮ್ ಚಿತ್ರವೆಂದ ಮೇಲೆ ಪ್ರಚಾರ ಎಷ್ಟಾದರೂ ಅದು ಕಡಿಮೆಯೇ! ಪ್ರೇಮ್ ಭಾರಿ ಪ್ರಚಾರ ಪ್ರಿಯರು ಎಂಬುದು ಕನ್ನಡದ ಪ್ರೇಕ್ಷಕರಲ್ಲಿ ಮಕ್ಕಳಿಂದ ಹಿಡಿದು ಮುದುಕರವೆರೆಗೂ ಗೊತ್ತು.

'ಜೋಗಿ' ಖ್ಯಾತಿಯ ಈ ಪ್ರೇಮ್ ನಟನೆಯ ಬರಲಿರುವ 'ಪ್ರೇಮ್ ಅಡ್ಡ' ಚಿತ್ರದಲ್ಲಿ ಅಳವಡಿಸಲಾಗಿರುವ ಮಳವಳ್ಳಿ ಸಾಯಿಕೃಷ್ಣ ಬರೆದಿರುವ 'ಮೇಲುಕೋಟೆ...' ಹಾಡು, ಇತ್ತೀಚಿಗಷ್ಟೇ ಪ್ರಚಾರ, ಅಪಪ್ರಚಾರ ಹಾಗೂ ವಿವಾದಕ್ಕೆ ಕಾರಣವಾಗಿದ್ದು ಎಲ್ಲರಿಗೂ ಗೊತ್ತು. ತದನಂತರದ ಬೆಳವಣಿಗೆಯಲ್ಲಿ ಸ್ವತಃ ಪ್ರೇಮ್ ಈ ಹಾಡು ಸಾಕಷ್ಟು ಜನರ ಮೆಚ್ಚುಗೆ ಗಳಿಸಿದ್ದಲ್ಲದೇ ಚಿತ್ರಕ್ಕೆ ಭಾರಿ ಪ್ರಚಾರ ದೊರಕಿಸಿಕೊಟ್ಟಿದೆಯೆಂದು ಹೇಳಿದ್ದು ಹಲವರ ಕಿವಿ ತಲುಪಿದೆ.

ಅದೇನೆ ಇರಲಿ, ಚಿತ್ರತಂಡವು ಪ್ರಚಾರಕ್ಕಾಗಿ ಈಗ ಪತ್ರಿಕಾ ಜಾಹೀರಾತು ಜೊತೆ ರೆಡಿಯೋ ಸ್ಟೇಷನ್ ಕೂಡ ತಲುಪಿದೆ. 'ಪ್ರೇಮ್ ಅಡ್ಡ' ಚಿತ್ರದ ನಿರ್ದೇಶಕ ಮಹೇಶ್ ಬಾಬು, ನಟ ಪ್ರೇಮ್ ಸೇರಿದಂತೆ ಚಿತ್ರತಂಡವು ಇತ್ತೀಚಿಗೆ 'ರೇಡಿಯೋ ಮಿರ್ಚಿ 98.3 ಎಫ್ಎಂ' ತಲುಪಿ ಚಿತ್ರದ ಪ್ರಚಾರಕಾರ್ಯ ಕೈಗೊಂಡಿದೆ. ಹಾಡುಗಳು ಎಷ್ಟರ ಮಟ್ಟಿಗೆ ಕ್ಲಿಕ್ ಆಗಿವೆ ಹಾಗೂ ಅವು ಚಿತ್ರದ ಯಶಸ್ಸಿಗೆ ಎಷ್ಟು ಸಾಥ್ ನೀಡಬಲ್ಲವು ಎಂಬ ಟೆಸ್ಟ್, ಈ ವೇಳೆ ಚಿತ್ರತಂಡ ಕೈಗೊಂಡಿದೆ ಎನ್ನಲಾಗಿದೆ.

ರೇಡಿಯೋ ಮಿರ್ಚಿ ಸ್ಟುಡಿಯೋದಲ್ಲಿ 'ಪ್ರೇಮ್ ಅಡ್ಡ' ಚಿತ್ರದ ನಟ, ನಿರ್ದೇಶಕ ಪ್ರೇಮ್ ಹಾಗೂ ನಿರ್ದೇಶಕ ಮಹೇಶ್ ಬಾಬು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೀಕ್ಷಕರ ಜೊತೆ ಸಂವಹನ ಮಾಡಿದ ಚಿತ್ರಗಳಿವೆ, ನೋಡಿ...

ರೇಡಿಯೋ ಮಿರ್ಚಿ ಸ್ಟುಡಿಯೋದಲ್ಲಿ ಪ್ರೇಮ್, ಮಹೇಶ್ ಬಾಬು

ರೇಡಿಯೋ ಮಿರ್ಚಿ ಸ್ಟುಡಿಯೋದಲ್ಲಿ ನಿರ್ದೇಶಕ ಹಾಗೂ ಪ್ರೇಮ್ ಅಡ್ಡ ಚಿತ್ರದ ನಟ ಪ್ರೇಮ್ ಹಾಗೂ ನಿರ್ದೇಶಕ ಮಹೇಶ್ ಬಾಬು ತಮ್ಮ 'ಪ್ರೇಮ್ ಅಡ್ಡ' ಚಿತ್ರದ ಪ್ರಚಾರಕಾರ್ಯ ಕೈಗೊಂಡರು. ತಮ್ಮ ಚಿತ್ರದ ಹಾಡುಗಳ ಬಗ್ಗೆ ಕೇಳುಗರ ಪ್ರತಿಕ್ರಿಯೆ ಪಡೆದರು.

ರೇಡಿಯೋ ಮಿರ್ಚಿ ಸ್ಟುಡಿಯೋದಲ್ಲಿ ಪ್ರಚಾರ ನಿರತ ಪ್ರೇಮ್

ತಮ್ಮ 'ಪ್ರೇಮ್ ಅಡ್ಡ' ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರ್ದೇಶಕ ಮಹೇಶ್ ಬಾಬು ಜೊತೆ ರೇಡಿಯೋ ಮಿರ್ಚಿಗೆ ಹೋಗಿ ಪ್ರಚಾರಕಾರ್ಯ ಕೈಗೊಂಡ ನಟ, ನಿರ್ದೇಶಕ ಪ್ರೇಮ್, ಅಲ್ಲಿ ಕೇಳುಗರ ಜೊತೆ ಸಂವಾದ ನಡೆಸಿದರು. ರೇಡಿಯೋ ಮಿರ್ಚಿ ಸ್ಟುಡಿಯೋದಲ್ಲಿ ಪ್ರಚಾರ ನಿರತ ಪ್ರೇಮ್ ಪೋಟೋವನ್ನು ನೀವಿಲ್ಲಿ ನೋಡಬಹುದು.

ರೇಡಿಯೋ ಮಿರ್ಚಿಯಲ್ಲಿ ನಿರ್ದೇಶಕ ಮಹೇಶ್ ಬಾಬು

ಪ್ರೇಮ್ ಅಡ್ಡ ಚಿತ್ರದ ನಿರ್ದೇಶಕ ಮಹೇಶ್ ಬಾಬು ತಮ್ಮ ಚಿತ್ರದ ಪ್ರಚಾರಕ್ಕಾಗಿ ಚಿತ್ರದ ನಟ ಪ್ರೇಮ್ ಅವರೊಂದಿಗೆ ಎಫ್ಎಂ ನಲ್ಲಿ ಕೇಳುಗರ ಜೊತೆ ಸಂವಾದ ನಡೆಸಿದರು. ಈ ಚಿತ್ರದಲ್ಲಿ ನೀವು ರೇಡಿಯೋ ಮಿರ್ಚಿಯಲ್ಲಿ ಪ್ರಚಾರಕಾರ್ಯದಲ್ಲಿ ನಿತರರಾದ ನಿರ್ದೇಶಕ ಮಹೇಶ್ ಬಾಬು ಅವರನ್ನು ಕಾಣಬಹುದು.

ಪ್ರಚಾರದ ನಂತರ ಹೂಗುಚ್ಛ ಪಡೆಯುತ್ತಿರುವ ಪ್ರೇಮ್ ನೋಡಿ!

ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಬಹುನಿರೀಕ್ಷಿತ ಪ್ರೇಮ್ ಅಡ್ಡ ಚಿತ್ರದ ಪ್ರಚಾರ ಮುಗಿಸಿ ಹೊರಡುತ್ತಿರುವ ಪ್ರೇಮ್ ಅವರಿಗೆ ರೇಡಿಯೋ ಮಿರ್ಚಿ ಕಡೆಯಿಂದ ಹೂಗುಚ್ಛ ನೀಡಲಾಯಿತು. ಪ್ರಚಾರದ ನಂತರ ಹೂಗುಚ್ಛ ಪಡೆಯುತ್ತಿರುವ ಪ್ರೇಮ್ ಚಿತ್ರ ನೋಡಿ!

ಪ್ರಚಾರದ ಮಧ್ಯೆ ಪ್ರತಿಕ್ರಿಯೆ ಪಡೆಯುತ್ತಿರುವ ಪ್ರೇಮ್, ಮಹೇಶ್ ಬಾಬು

ಬಿಡುಗಡೆ ಹೊಸ್ತಿಲಲ್ಲಿರುವ ತಮ್ಮ ಪ್ರೇಮ್ ಅಡ್ಡ ಚಿತ್ರದ ಪ್ರಚಾರ ಕಾರ್ಯದ ವೇಳೆ ಶ್ರೋತ್ರುಗಳ ಪ್ರತಿಕ್ರಿಯೆಗೆ ಸಾಕಷ್ಟು ಕಾಲಾವಕಾಶ ನೀಡಿತು ಚಿತ್ರತಂಡ. ಈ ಬಗ್ಗೆ ಹೇಳೀದ ಚಿತ್ರತಂಡ "ಬಹಳಷ್ಟು ಉತ್ತಮ ಪ್ರತಿಕ್ರಿಯೆ ಪಡೆಯಾಗಿದೆ" ಎಂದಿದೆ. ಪ್ರಚಾರದ ಮಧ್ಯೆ ಪ್ರತಿಕ್ರಿಯೆ ಪಡೆಯುತ್ತಿರುವ ಪ್ರೇಮ್, ಮಹೇಶ್ ಬಾಬು ಚಿತ್ರವನ್ನು ನೀವಿಲ್ಲಿ ನೋಡಬಹುದು.

ರೇಡಿಯೋ ಮಿರ್ಚಿ ಸಹಕಾರಕ್ಕೆ ಧನ್ಯವಾದ ಅರ್ಪಿಸಿದ ಪ್ರೇಮ್

ತಮ್ಮ ಚಿತ್ರದ ಪ್ರಚಾರಕ್ಕೆ ಹಾಡುಗಳನ್ನು ಪ್ರಸಾರ ಮಾಡುವ ಮೂಲಕ ಹಾಗೂ ಪ್ರಚಾರ ಕಾರ್ಯಕ್ಕೆ ಸ್ಟುಡಿಯೋ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ರೇಡಿಯೋ ಮಿರ್ಚಿ 98.3 ಎಫ್ಎಂ ಗೆ ಧನ್ಯವಾದ ಹೇಳಿದರು ಪ್ರೇಮ್. ಅಲ್ಲಿನ ಸಿಬ್ಬಂದಿ ಜೊತೆ ನಟ, ನಿರ್ದೇಶಕ ಪ್ರೇಮ್ ಇರುವ ಈ ಚಿತ್ರವನ್ನು ನೋಡಿ...

English summary
Director cum Actor Prem and director Mahesh Babu went to Radio Mirchi 98.3 FM studio to promote their upcoming movie 'Prem Adda" film in Bangalore recently. As a part of their film promotions, Prem wanted to know the songs effect on the audience. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada