Don't Miss!
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- News
World Cancer Day 2023: ವಿಶ್ವ ಕ್ಯಾನ್ಸರ್ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರೇಮ್ ಅಡ್ಡಕ್ಕೆ ನೀಲಿ ರಾಣಿ ಸನ್ನಿ ಲಿಯೋನ್
'ಪ್ರೇಮ್ ಅಡ್ಡ'ದಲ್ಲಿ ಒಂದು ಐಟಂ ಸಾಂಗ್ ಇದೆಯಂತೆ. ಈ ಹಾಡಿಗೆ ಇಬ್ಬರು ಬೇಕೆಂದಿರುವ ನಿರ್ದೇಶನಕ ಮಹೇಶ್ ಬಾಬು, ಮೊದಲ ಬಾರಿಗೆ ಕನ್ನಡಕ್ಕೆ ಸನ್ನಿ ಲಿಯೋನ್ ಕರೆ ತರುವ ಪ್ರಯತ್ನದಲ್ಲಿದ್ದಾರೆ. ಅಮೀಷಾ ಪಟೇಲ್, ಜಿಯಾ ಖಾನ್, ಜಾಕ್ವೆಲಿನ್ ಅಥವಾ ನಯನತಾರಾ ಕೂಡ ಅವರ ಲಿಸ್ಟ್ ನಲ್ಲಿದ್ದಾರೆ. ಯಾರ ಕಾಲ್ ಶೀಟ್ ಸಿಕ್ಕು ಯಾರು ಕನ್ನಡಕ್ಕೆ ಕಾಲಿಡಲಿದ್ದಾರೆ ಎಂಬುದು ಸದ್ಯದಲ್ಲೇ ನಿರ್ಧಾರವಾಗಲಿದೆ.
ಪ್ರೇಮ್ ಹಾಗೂ ಮಹೇಶ್ ಬಾಬು ಸಂಗಮದ 'ಪ್ರೇಮ್ ಅಡ್ಡ' ಚಿತ್ರ ತಮಿಳಿನ 'ಸುಬ್ರಮಣ್ಯಪುರಂ'ನ ರೀಮೇಕ್. 'ಹಲೋ ಯಮ' ಚಿತ್ರದಲ್ಲಿ ತಲೆಹಿಡುಕನೊಬ್ಬನ ಪಾತ್ರದ ಮೂಲಕ ನಟನೆಗೆ ಬಂದ ನಿರ್ದೇಶಕ ಪ್ರೇಮ್ ನಟನಾಗಿ ಇಲ್ಲಿ ನೆಲೆಯೂರುವ ಪ್ರಯತ್ನದಲ್ಲಿದ್ದಾರೆ. ಅದಕ್ಕೆ ಸನ್ನಿ ಲಿಯೋನ್ ಸಹಕಾರವೋ ಬೇಕೋ ಏನೋ!
ಒಟ್ಟಿನಲ್ಲಿ ಪ್ರೇಮ್ ಅಡ್ಡಕ್ಕೆ ಸನ್ನಿ ಲಿಯೋನ್ ಬಂದರೆ ಕನ್ನಡ ಪ್ರೇಕ್ಷಕರು ತಮ್ಮ ಅಡ್ಡಬಿಟ್ಟು ಬರುವುದು ಖಾತ್ರಿ ಎಂಬುದು ಪ್ರೇಮ್ ಲೆಕ್ಕಾಚಾರ. ಆದರೆ ಈ ಮೊದಲು ಸಾಕಷ್ಟು ಬಾರಿ ತಪ್ಪಿರುವ ಪ್ರೇಮ್ ಲೆಕ್ಕಾಚಾರ, ಈ ಬಾರಿಯಾದರೂ ತಪ್ಪದಿರಲಿ ಎಂಬುದು ಇನ್ನೂ ಇರುವ ಪ್ರೇಮ್ ಅಭಿಮಾನಿಗಳ ಕೂಗು. ಅದು ಪ್ರೇಮ್ ಅವರಿಗೆ ತಲುಪಿದೆಯಾ ಎನ್ನುವುದು ಪ್ರೇಮ್ ಅಡ್ಡದ ಬಿಡುಗಡೆ ಬಳಿಕ ತಿಳಿಯಲಿದೆ. (ಒನ್ ಇಂಡಿಯಾ ಕನ್ನಡ)