For Quick Alerts
  ALLOW NOTIFICATIONS  
  For Daily Alerts

  ಲೋಕೇಶನ್ ನೋಡಲು ಹೋಗಿ ತೋಟದ ಮನೆಗೆ ಅತಿಥಿ ಕರೆತಂದ ಪ್ರೇಮ್

  |

  ನಿರ್ದೇಶಕ ಜೋಗಿ ಪ್ರೇಮ್ 'ಏಕ್ ಲವ್ ಯಾ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ರಕ್ಷಿತಾ ಅವರ ಸಹೋದರ ರಾಣಾ ನಟನೆಯ ಚೊಚ್ಚಲ ಚಿತ್ರ ಇದಾಗಿದ್ದು, ಭಾರಿ ಕುತೂಹಲ ಮೂಡಿಸಿದ್ದಾರೆ.

  'ಏಕ್ ಲವ್ ಯಾ' ಸಿನಿಮಾದ ಚಿತ್ರೀಕರಣ ಇನ್ನು ಬಾಕಿಯಿದ್ದು, ಬೇರೆ ರಾಜ್ಯಗಳಲ್ಲಿ ಶೂಟಿಂಗ್ ಮಾಡಲು ಪ್ರೇಮ್ ಪ್ಲಾನ್ ಮಾಡಿದ್ದಾರೆ. ಈ ಹಿನ್ನೆಲೆ ಗುಜರಾತ್, ಶ್ರೀನಗರ, ಜಮ್ಮು ಕಾಶ್ಮೀರ ಸೇರಿದಂತೆ ಹಲವು ಕಡೆ ಪ್ರೇಮ್ ಲೋಕೇಶನ್ ನೋಡಿ ಬಂದಿದ್ದಾರೆ.

  ಗುಜರಾತ್, ರಾಜಸ್ಥಾನ, ಕಾಶ್ಮೀರದಲ್ಲಿ ನಿರ್ದೇಶಕ ಪ್ರೇಮ್ ಅಲೆದಾಟಗುಜರಾತ್, ರಾಜಸ್ಥಾನ, ಕಾಶ್ಮೀರದಲ್ಲಿ ನಿರ್ದೇಶಕ ಪ್ರೇಮ್ ಅಲೆದಾಟ

  ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿರುವ ಪ್ರೇಮ್ ಗುಜರಾತ್‌ನಿಂದ ತಮ್ಮ ತೋಟಕ್ಕೆ ಹೊಸ ಅತಿಥಿಯನ್ನು ಕರೆತಂದಿದ್ದಾರೆ. ಹೌದು, ಗುಜರಾತ್‌ನಿಂದ ಎರಡು ಎಮ್ಮೆಯನ್ನು ಖರೀದಿಸಿ ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾರೆ.

  ಈ ಕುರಿತು ಪ್ರೇಮ್ ತಮ್ಮ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದು, 2000 ಕಿ.ಮೀ ದೂರದಿಂದ ಜೊತೆಯಲ್ಲಿ ಕರೆದುಕೊಂಡು ಬಂದೆ ಎಂದು ತಿಳಿಸಿದ್ದಾರೆ.

  ''Ek love ya ಶೂಟ್ಗೆ ಲೋಕೇಷನ್ ನೋಡಕ್ಕೆ ಗುಜರಾತ್ನ ಕಚ್ಗೆ ಹೋಗಿದ್ದೆ, ಅಲ್ಲಿ ಒಂದ್ ಎಮ್ಮೆ ನ ನೋಡ್ದೆ, ತುಂಬಾ ಇಷ್ಟ ಆಯ್ತು, ಡಿಸೈಡ್ ಮಾಡ್ದೆ, 2000 km ಜೊತೇಲಿ ಕರ್ಕೊಂಡ್ ಬಂದೆ, ತಾಯಿಗೆ "ಮಂಡೋದರಿ" ಮಗಳಿಗೆ "ಭೈರವಿ" ಅಂತ ಹೆಸರಿಟ್ಟೆ. ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ ಎಂಟ್ರಿ ಆದ್ರು'' ಎಂದು ಟ್ವೀಟ್ ಮಾಡಿದ್ದಾರೆ.

  ಅಂದ್ಹಾಗೆ, ನಿರ್ದೇಶಕ ಪ್ರೇಮ್ ಅವರ ತಾಯಿ ಭಾಗ್ಯಮ್ಮ ಕಳೆದ ಜುಲೈ ತಿಂಗಳಲ್ಲಿ ವಿಧಿವಶರಾಗಿದ್ದರು. ಬೆಂಗಳೂರಿನ ಜಯನಗರದಲ್ಲಿರುವ ಶಾಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೇಮ್ ತಾಯಿ ಸಾವನ್ನಪ್ಪಿದ್ದರು.

  English summary
  Director Prem has visited to gujarat from check the location for shooting. then, he purchased buffalo from gujarat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X