For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಸಿನಿಮಾ ಮಾಡಿದರೆ ನಟ ಸ್ಟಾರ್ ಆಗೋದು: ದರ್ಶನ್‌ಗೆ ಪ್ರೇಮ್ ಟಾಂಗ್

  |

  ನಟ ದರ್ಶನ್ ನಿನ್ನೆ (ಜುಲೈ 18) ಮಾಧ್ಯಮದವರೊಟ್ಟಿಗೆ ಮಾತನಾಡುತ್ತಾ, 'ಜೋಗಿ ಪ್ರೇಮ್ ಏನು ದೊಡ್ಡ ಪುಡುಂಗಾ, ಅವನಿಗೇನು ಎರಡು ಕೊಂಬು ಇದ್ಯಾ?'' ಎಂದು ಪ್ರಶ್ನೆ ಮಾಡಿದ್ದರು. ಇದು ನಿರ್ದೇಶಕ ಪ್ರೇಮ್‌ಗೆ ಬೇಸರ ತರಿಸಿತ್ತು. ಈ ಬಗ್ಗೆ ಸುದೀರ್ಘ ಪೋಸ್ಟ್ ಒಂದನ್ನು ನಿರ್ದೇಶಕ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.

  ಇದೇ ವಿಷಯವಾಗಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಪ್ರೇಮ್, ''ನಿರ್ದೇಶಕ ಬಗ್ಗೆ ಪುಡಾಂಗ್ ಎಂದು ಹೇಳಿದ್ದು ನೋವಾಯ್ತು ಅದಕ್ಕೆ ರಿಯಾಕ್ಟ್ ಮಾಡಿದೆ. ನಿರ್ದೇಶಕ ಸಿನಿಮಾ ಮಾಡಿದರೆ ನಟ ಸ್ಟಾರ್ ಆಗೋದು ಎಂಬುದನ್ನು ಮರೆಯಬಾರದು'' ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

  ''ನಿರ್ದೇಶಕರ ಬಗ್ಗೆ ದರ್ಶನ್ ಪುಡಾಂಗ್ ಎಂದು ಹೇಳಿದ್ದಕ್ಕೆ ಬೇಸರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದೆ. ಅದನ್ನು ಬಿಟ್ಟು ದರ್ಶನ್‌ ಜೊತೆಗೆ ಬೇರೆ ಮನಸ್ತಾಪವಿಲ್ಲ. ದರ್ಶನ್ ನಮ್ಮ ಫ್ಯಾಮಿಲಿ ಫ್ರೆಂಡ್'' ಎಂದಿದ್ದಾರೆ ಪ್ರೇಮ್.

  ''ಸಾರ್ವಜನಿಕವಾಗಿ ಮಾತನಾಡುವಾಗ ನೋಡಿಕೊಂಡು ಮಾತಾಡ್ಬೇಕು''

  ''ಸಾರ್ವಜನಿಕವಾಗಿ ಮಾತನಾಡುವಾಗ ನೋಡಿಕೊಂಡು ಮಾತಾಡ್ಬೇಕು''

  ''ಸಾರ್ವಜನಿಕವಾಗಿ ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಮತ್ತೊಬ್ಬರಿಗೆ ಬೇಸರ ಉಂಟಾಗುವಂತೆ ಮಾತಾಡಬಾರದು, ನಾನು ಯಾರ ತಂಟೆಗೂ ಹೋಗೋದಿಲ್ಲ, ಆದರೆ ಸುಖಾಸುಮ್ಮನೆ ನನ್ನ ಹೆಸರು ಯಾಕೆ ತಂದರೋ ಗೊತ್ತಿಲ್ಲ'' ಎಂದಿದ್ದಾರೆ ಪ್ರೇಮ್.

  ''ಇದಕ್ಕೂ ಮುನ್ನ ಹಲವು ಕಾರ್ಯಕ್ರಮಗಳಲ್ಲಿ ಭೇಟಿ ಆಗಿದ್ವಿ''

  ''ಇದಕ್ಕೂ ಮುನ್ನ ಹಲವು ಕಾರ್ಯಕ್ರಮಗಳಲ್ಲಿ ಭೇಟಿ ಆಗಿದ್ವಿ''

  ''ಉಮಾಪತಿನ ಪರಿಚಯ ಮಾಡಿಕೊಟ್ಟಿದ್ದು ನಾನೇ, ಸಿನಿಮಾ ಮಾಡಬೇಕು ಅಂದುಕೊಂಡಿದ್ವಿ, ಆದರೆ ದಿ ವಿಲನ್ ಸಿನಿಮಾ ಡಿಲೇ ಆದ ಕಾರಣ ದರ್ಶನ್, ಉಮಾಪತಿ ಹಾಗೂ ನನ್ನ ಕಾಂಬಿನೇಷನ್ ಸಿನಿಮಾ ಆಗಲಿಲ್ಲ, ರಾಬರ್ಟ್ ಸಿನಿಮಾಗೆ ಮೊದಲು ವಿಶ್ ಮಾಡಿದ್ದು ನಾನೇ, ಆ ಸಿನಿಮಾ ಬಳಿಕವೂ ಐದಾರು ಬಾರಿ ದರ್ಶನ್ ಮತ್ತು ನಾನು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇವೆ ಆಗೆಲ್ಲ ಚೆನ್ನಾಗಿಯೇ ಮಾತನಾಡಿದ್ದೆವೆ'' ಎಂದಿದ್ದಾರೆ ಪ್ರೇಮ್.

  'ರಾಬರ್ಟ್' ಸಿನಿಮಾಕ್ಕೆ ಶುಭ ಹಾರೈಸಿದ್ದೆ ನಾನು: ಪ್ರೇಮ್

  'ರಾಬರ್ಟ್' ಸಿನಿಮಾಕ್ಕೆ ಶುಭ ಹಾರೈಸಿದ್ದೆ ನಾನು: ಪ್ರೇಮ್

  ಉಮಾಪತಿಯನ್ನು ನಾನೇ ದರ್ಶನ್‌ಗೆ ಪರಿಚಯ ಮಾಡಿಸಿದ್ದೆ. 'ವಿಲನ್' ಸಿನಿಮಾ ಲೇಟ್ ಆಗಿದ್ದಕ್ಕೆ ನಾವು ಸಿನಿಮಾ ಮಾಡಲು ಆಗಲಿಲ್ಲ. 'ರಾಬರ್ಟ್' ಸಿನಿಮಾ ಹಿಟ್ ಆದಾಗ ಮೊದಲು ಶುಭಾಶಯ ಹೇಳಿದ್ದು ನಮ್ಮ ಮೇಡಂ (ರಕ್ಷಿತಾ) ಎಂದಿದ್ದಾರೆ ಪ್ರೇಮ್.

  ಫೋಟೋಗಳನ್ನು ಶೇರ್ ಮಾಡಿ Jaggesh ಕೊಟ್ಟಿರೋ ಸಂದೇಶ ಏನು? | Filmibeat Kannada
  ದರ್ಶನ್ ಅಭಿಮಾನಿಗಳು ಕ್ಷಮೆ ಕೇಳೋದು ಬೇಡ: ಪ್ರೇಮ್

  ದರ್ಶನ್ ಅಭಿಮಾನಿಗಳು ಕ್ಷಮೆ ಕೇಳೋದು ಬೇಡ: ಪ್ರೇಮ್

  ದರ್ಶನ್ ಅಭಿಮಾನಿಗಳು ನನ್ನ ಕ್ಷಮೆ ಕೇಳೋದು ಬೇಡ. ನಟ, ನಿರ್ದೇಶಕ, ನಿರ್ಮಾಪಕ ಯಾರೇ ಆಗಲಿ ಬೆಳೆಯೋದ ಅಭಿಮಾನಿಗಳಿಂದ. ನಿನ್ನೆಯಿಂದ ಸಾಕಷ್ಟು ಮಂದಿ ಅಭಿಮಾನಿಗಳು ಸಂದೇಶ ಕಳಿಸುತ್ತಿದ್ದಾರೆ. ದರ್ಶನ್ ಯಾಕೆ ಹಾಗೆ ಮಾತನಾಡಿದರು ಗೊತ್ತಿಲ್ಲ. ಬೇಸರ ಮಾಡಿಕೊಳ್ಳಬೇಡಿ, ನಿಮ್ಮ ಹಾಗೂ ದರ್ಶನ್ ಕಾಂಬಿನೇಶನ್‌ನಲ್ಲಿ ಸಿನಿಮಾ ಮಾಡಿ ಎನ್ನುತ್ತಿದ್ದಾರೆ ಎಂದಿದ್ದಾರೆ ಪ್ರೇಮ್.

  English summary
  Director Prem reacted to Darshan's statement about him. He said an actor become star because of director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X