»   » ದರ್ಶನ್ ಜೊತೆ ಸಿನಿಮಾ ಮಾಡುವ ಬಗ್ಗೆ ಪ್ರೇಮ್ ಏನಂತಾರೆ.?

ದರ್ಶನ್ ಜೊತೆ ಸಿನಿಮಾ ಮಾಡುವ ಬಗ್ಗೆ ಪ್ರೇಮ್ ಏನಂತಾರೆ.?

Posted By:
Subscribe to Filmibeat Kannada

ಡಿ ಬಾಸ್ ದರ್ಶನ್ ಸದ್ಯ ತಮ್ಮ ಮಹತ್ವಾಕಾಂಕ್ಷೆಯ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣದಲ್ಲಿ ಬಿಜಿ ಇದ್ದಾರೆ. ನಿರ್ದೇಶಕ ಪ್ರೇಮ್ ಕೂಡ ಅವರ 'ದಿ ವಿಲನ್' ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ಹೀಗಿದ್ದರು ಸಹ ನಟ ದರ್ಶನ್ ಮತ್ತು ನಿರ್ದೇಶಕ ಪ್ರೇಮ್ ಮತ್ತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು.

ಈ ಹಿಂದೆ ನಟ ದರ್ಶನ್ ಗೆ ಪ್ರೇಮ್ 'ಕರಿಯ' ಸಿನಿಮಾವನ್ನು ನಿರ್ದೇಶಕ ಮಾಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಈಗ 14 ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಗಾಸಿಪ್ ಕೇಳಿ ಬಂದಿತ್ತು. ದರ್ಶನ್ ಮುಂದಿನ ಚಿತ್ರಕ್ಕೆ ಪ್ರೇಮ್ ಆಕ್ಷನ್ ಕಟ್ ಹೇಳುತ್ತಾರೆ ಮತ್ತು ಆ ಚಿತ್ರಕ್ಕೆ 'ಆಂಜನೇಯ' ಎಂಬ ಟೈಟಲ್ ಫಿಕ್ಸ್ ಆಗಿದೆ ಎಂಬ ಮಾತಿತ್ತು. ಈ ರೀತಿ ಏನೇ ಸುದ್ದಿ ಬಂದರು ಈವರೆಗೂ ಪ್ರೇಮ್ 'ಆಂಜನೇಯ' ಸಿನಿಮಾದ ಬಗ್ಗೆ ಮಾತನಾಡಿರಲಿಲ್ಲ. ಆದರೆ ಇದೀಗ ಪ್ರೇಮ್ ಅದಕ್ಕೆ ಉತ್ತರ ನೀಡಿದ್ದಾರೆ. ಮುಂದೆ ಓದಿ...

ಪ್ರೇಮ್ ಸ್ಪಷ್ಟನೆ

ದರ್ಶನ್ ಜೊತೆಗೆ ಸಿನಿಮಾ ಮಾಡುವ ವಿಷಯದ ಬಗ್ಗೆ ನಿರ್ದೇಶಕ ಪ್ರೇಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಿರ್ದೇಶಕ ಪ್ರೇಮ್ ಗಾಗಿ ತನ್ನ ಹಳೆ ನಿಯಮ ಮುರಿದ ದಾಸ ದರ್ಶನ್!

'ದಿ ವಿಲನ್' ಮುಗಿಯಬೇಕು

''ನನ್ನ ಕನಸಿನ ಸಿನಿಮಾ 'ದಿ ವಿಲನ್'. ಈ ಸಿನಿಮಾ ಮುಗಿದ ನಂತರ ನನ್ನ ಮುಂದಿನ ಚಿತ್ರದ ಬಗ್ಗೆ ಸುದ್ದಿಯನ್ನು ಬಹಿರಂಗ ಪಡಿಸುತ್ತೇನೆ.'' ಎಂದು ಒಂದೇ ಸಾಲಿನಲ್ಲಿ ತಮ್ಮ ಮುಂದಿನ ಚಿತ್ರದ ಬಗ್ಗೆ ಇದ್ದ ಗಾಸಿಪ್ ಗಳನ್ನು ಪ್ರೇಮ್ ತಳ್ಳಿ ಹಾಕಿದ್ದಾರೆ.

ದರ್ಶನ್ ಮಾತು

ದರ್ಶನ್ ಕೂಡ ಈ ಹಿಂದೆಯೇ ಒಮ್ಮೆ ಸಂದರ್ಶನದಲ್ಲಿ 'ಕುರುಕ್ಷೇತ್ರ'ದ ನಂತರವೇ ತಮ್ಮ ಮುಂದಿನ ಚಿತ್ರದ ಬಗ್ಗೆ ಹೇಳುತ್ತೇನೆ ಎಂದಿದ್ದರು.

ದರ್ಶನ್ ಗೆ ಆಕ್ಷನ್ ಕಟ್ ಹೇಳಲು ಜೋಗಿ ಪ್ರೇಮ್ ಗೆ ದಾಖಲೆಯ ಸಂಭಾವನೆ

ಸದ್ಯದಲ್ಲಿಯೇ ಟೀಸರ್

ಪ್ರೇಮ್ ನಿರ್ದೇಶನ ಮಾಡಿರುವ 'ದಿ ವಿಲನ್' ಸಿನಿಮಾದ ಟೀಸರ್ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆಯಂತೆ.

English summary
Kannada director Prem gave reaction about 'Anjaneya' movie in his twitter account. 'Anjaneya' is director Prem and Darshan combination movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X