ತಡೆದುಕೊಳ್ಳೊಕ್ಕೆ ಆಗದೆ ಇರುವವರು ಉರ್ಕೋತಿದ್ದಾರೆ : ಪ್ರೇಮ್ ಮಾತಿನ ಪ್ರಹಾರ!
''ದಿ ವಿಲನ್' ಸಿನಿಮಾ ಏನೋ ಆಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ, ಅದು ಏನೇನೋ ಆಗುತ್ತಿದೆ.'' ಇದು ನಿರ್ದೇಶಕ ಪ್ರೇಮ್ 'ದಿ ವಿಲನ್' ಸಿನಿಮಾದ ಬಗ್ಗೆ ಹೇಳಿದ ಮಾತು.
ಹೌದು, ಒಂದು ಕಡೆ 'ದಿ ವಿಲನ್' ಸಿನಿಮಾ ಥಿಯೇಟರ್ ನಲ್ಲಿ ಓಡುತ್ತಿದ್ದರೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕೂಡ ಚಾಲ್ತಿಯಲ್ಲಿ ಇದೆ. ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಗಳು ಬರುತ್ತಿದೆ. ಅದರಲ್ಲಿಯೂ ಪ್ರೇಮ್ ಮೇಲೆ ಪ್ರವಾಹದ ರೀತಿ ಟ್ರೋಲ್ ಗಳು ಬರುತ್ತಿದೆ.
ನಿರ್ದೇಶಕ ಪ್ರೇಮ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದು, ನಿನ್ನೆ ರಾತ್ರಿಯಿಂದಲೇ ಅವರ ಬರ್ತ್ ಡೇ ಆಚರಣೆ ಜೋರಾಗಿ ನಡೆಯುತ್ತಿದೆ.
ಹುಟ್ಟುಹಬ್ಬದ ವಿಶೇಷವಾಗಿ ಮಾತನಾಡಿರುವ ಪ್ರೇಮ್ ಸಿನಿಮಾದ ಮೇಲೆ ಹಾಗೂ ತಮ್ಮ ಬಗ್ಗೆ ಆಗುತ್ತಿರುವ ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ....

ವಿಲನ್ ಏನೇನೋ ಆಗುತ್ತಿದೆ
''ವಿಲನ್ ಏನೋ ಆಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ, ಅದು ಏನೇನೋ ಆಗುತ್ತಿದೆ. ಈ ಸಿನಿಮಾದ ಸಕ್ಸಸ್ ಹಾಗೂ ಮೆಗಾ ಹಿಟ್ ಗೆ ಕರ್ನಾಟಕದ ಜನ ಕಾರಣ. ಆದರೆ, ಕೆಲವರಿಗೆ ನಾನು ಉತ್ತರ ನೀಡುವುದಿಲ್ಲ, ಸಿನಿಮಾನೇ ಉತ್ತರ ನೀಡುತ್ತಿದೆ.

ಬೆಂಕಿ ಹಾಕಿಕೊಳ್ಳುತ್ತಿದ್ದಾರೆ
''ಯಾವುದೇ ಹಳ್ಳಿ ತಗೆದುಕೊಂಡರು, ಭಾರತದ ಮೂಲೆ ಮೂಲೆಯಲ್ಲಿಯೂ ಹೈದರಾಬಾದ್, ಮುಂಬೈ ಎಲ್ಲ ಕಡೆ ಹೌಸ್ ಫುಲ್ ಆಗುತ್ತಿದೆ. ಸಿಡ್ನಿಯಲ್ಲಿಯೂ ಹೆಚ್ಚು ಹೆಚ್ಚು ಶೋ ನಡೆಯುತ್ತಿದೆ. ಕೆಲವರಿಗೆ ಅದನ್ನು ತಡೆದುಕೊಳ್ಳವುದಕ್ಕೆ ಆಗುತ್ತಿಲ್ಲ ಅಂತ ಬೆಂಕಿ ಹಾಕಿಕೊಳ್ಳುತ್ತಿದ್ದಾರೆ'' - ಪ್ರೇಮ್, ನಿರ್ದೇಶಕ

ಕೆಟ್ಟ ಕೆಟ್ಟ ರೀತಿ ಬಿಂಬಿಸುತ್ತಿದ್ದಾರೆ
''ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತುಂಬ ಕೆಟ್ಟ ಕೆಟ್ಟ ರೀತಿ ಬಿಂಬಿಸುತ್ತಿದ್ದಾರೆ. ಅವರಿಗೆ ಧನ್ಯವಾದ. ಅವರು ಎಷ್ಟು ಕೆಟ್ಟ ರೀತಿ ಮಾಡುತ್ತಿದ್ದರೂ, ಸಿನಿಮಾ ಅಷ್ಟೇ ದೊಡ್ಡ ಹಿಟ್ ಆಗಿದೆ.'' - ಪ್ರೇಮ್, ನಿರ್ದೇಶಕ

ಕಲೆಕ್ಷನ್ ಅನೌನ್ಸ್ ಮಾಡುತ್ತೇನೆ
''ಕರ್ನಾಟಕದ ಜನ ಇರಬೇಕಾದರೆ, ಅವರ ಅಭಿಮಾನ ಇರಬೇಕಾದರೆ, ಉರ್ಕೋಳೊರನ್ನ ಕಟ್ಟಿಕೊಂಡು ನನಗೇನೂ ಆಗಬೇಕಿಲ್ಲ. ಸಿನಿಮಾ ಒಳ್ಳೆಯ ಕಲೆಕ್ಷನ್ ಆಗುತ್ತಿದೆ. ಇವತ್ತು ಡಿಸ್ಟ್ರಿಬ್ಯೂಟರ್ ಗಳ ಜೊತೆಗೆ ಕಲೆಕ್ಷನ್ ಅನ್ನು ಅನೌನ್ಸ್ ಮಾಡುತ್ತೇನೆ.'' - ಪ್ರೇಮ್, ನಿರ್ದೇಶಕ

ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿದೆ
''ಎಲ್ಲ ಕಡೆ ಚಿತ್ರಮಂದಿರಗಳು ಹೆಚ್ಚಾಗುತ್ತಿದೆ. ಹೈದರಾಬಾದ್, ಕೇರಳ, ದೆಹಲಿಯಲ್ಲಿ ಮೊದಲು ಇದ್ದ ಶೋ ಗಿಂತ ಜಾಸ್ತಿ ಮಾಡಲು ಹೇಳಿದರು. ಈಗ ಫ್ಯಾಮಿಲಿಗಳು ಹೆಚ್ಚು ಬರಲು ಪ್ರಾರಂಭ ಮಾಡಿವೆ. ಎಲ್ಲರೂ 'ಜೋಗಿ' ಸಿನಿಮಾ ನೆನಪಾಗುತ್ತಿದೆ ಎಂದು ಹೇಳುತ್ತಿದ್ದಾರೆ.'' - ಪ್ರೇಮ್, ನಿರ್ದೇಶಕ
ಪ್ರೇಮ್ ಹುಟ್ಟುಹಬ್ಬ ಆಚರಣೆ
ತಮ್ಮ ಹುಟ್ಟುಹಬ್ಬ ಆಚರಣೆ ಬಗ್ಗೆ ಮಾತನಾಡಿದ ಪ್ರೇಮ್ ''ಎಲ್ಲರೂ ಹುಟ್ಟುಹಬ್ಬಕ್ಕೆ ಬಂದು ವಿಶ್ ಮಾಡುತ್ತಿದ್ದಾರೆ. ಸ್ನೇಹಿತರು ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಮೇಡಂ (ರಕ್ಷಿತಾ) ಡಿಫರೆಂಟ್ ಕೇಕ್ ಗಳನ್ನು ಮಾಡುತ್ತಾಳೆ. ಅನೇಕರು ರಾತ್ರಿ ನಿದ್ದೆ ಬಿಟ್ಟು ನನ್ನ ಹುಟ್ಟುಹಬ್ಬ ಆಚರಿಸೋಕ್ಕೆ ಬರುತ್ತಾರೆ. ಈ ಅಭಿಮಾನ ಇನ್ನೊಂದು ಜನ್ಮ ಎತ್ತಿದರು ಸಿಗುವುದಿಲ್ಲ.'' ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.


Click it and Unblock the Notifications










