Pushpa Pushpa Song: 'ಜೋಗಿ'ಯನ್ನು ಕಾಪಿ ಮಾಡಿದ್ನಾ 'ಪುಷ್ಪ'ರಾಜ್? ನಿರ್ದೇಶಕ ಪ್ರೇಮ್ ಪ್ರತಿಕ್ರಿಯೆ

ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮತ್ತೊಮ್ಮೆ 'ಪುಷ್ಪ'ರಾಜ್ ಆಗಿ ಸ್ಟೈಲಿಶ್ ಸ್ಟಾರ್ ಖಡಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು ಪೋಸ್ಟರ್, ಲುಕ್ ಎಲ್ಲದರನ್ನೂ ಕನ್ನಡದ 'KGF' ಚಿತ್ರವನ್ನು 'ಪುಷ್ಪ' ತಂಡ ಕಾಪಿ ಮಾಡುತ್ತಿದೆ ಎನ್ನುವ ಚರ್ಚೆ ನಡೀತಿದೆ.

ಇತ್ತೀಚೆಗೆ ಬಂದ 'ಪುಷ್ಪ'-2 ಚಿತ್ರದ ಎರಡು ಪೋಸ್ಟರ್‌ಗಳು ಕೂಡ 'KGF'-2 ಚಿತ್ರದ ಪೋಸ್ಟರ್‌ಗಳನ್ನೇ ನೆನಪಿಸುತ್ತಿದೆ. ಸದ್ಯ ದೇವಿಶ್ರೀ ಪ್ರಸಾದ್ ಮ್ಯೂಸಿಕ್‌ನಲ್ಲಿ 'ಪುಷ್ಪ ಪುಷ್ಪ' ಸಾಂಗ್ ವೈರಲ್ ಆಗುತ್ತಿದ್ದು ಭಾರೀ ಚರ್ಚೆ ನಡೀತಿದೆ. 5 ಭಾಷೆಗಳಲ್ಲಿ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕನ್ನಡದಲ್ಲಿ ವಿಜಯ್ ಪ್ರಕಾಶ್ ಹಾಡಿಗೆ ದನಿಯಾಗಿದ್ದಾರೆ.

Director Prem Reaction On Pushpa-2 Comparison With kannada film jogi

ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಪ್ರೀಕ್ವೆಲ್ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸೀಕ್ವೆಲ್ ತೆರೆಗ ತರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀಯಿದೆ. ಹಿಂದಿ ಬೆಲ್ಟ್‌ನಲ್ಲಿ ಕೂಡ 'ಪುಷ್ಪ'-2 ಬಗ್ಗೆ ಭಾರೀ ನಿರೀಕ್ಷೆ ಇದೆ. ಹಾಗಾಗಿ ಅಲ್ಲಿ ಬ್ಯುಸಿನೆಸ್ ಜೋರಾಗಿದೆ.

ರಕ್ತಚಂದನ ಸ್ಮಗ್ಲರ್ ಆಗಿದ್ದ ಪುಷ್ಪರಾಜ್ ಸೀಕ್ವೆಲ್‌ನಲ್ಲಿ ಇಡೀ ಮಾಫಿಯಾ ಡಾನ್ ಆಗಿ ಅಬ್ಬರಿಸೋಕೆ ಹೊರಟಿದ್ದಾರೆ. ಈ ಬಾರಿ ಕಥೆ ದೇಶ, ವಿದೇಶಕ್ಕೆ ಸಾಗಲಿದೆ. ಇನ್ನು ಡಾನ್ ಪುಷ್ಪರಾಜ್ ಆರ್ಭಟ ಹೇಗಿರುತ್ತದೆ ಎನ್ನುವುದರ ಬಗ್ಗೆ 'ಪುಷ್ಪ ಪುಷ್ಪ' ಸಾಂಗ್‌ನಲ್ಲಿ ಭಾರೀ ಬಿಲ್ಡಪ್ ಕೊಡಲಾಗಿದೆ. ಸಣ್ಣ ಸಣ್ಣ ಡ್ಯಾನ್ಸ್ ಝಲರ್ ಮಿಕ್ಸ್ ಮಾಡಿ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿದ್ದಾರೆ.

Director Prem Reaction On Pushpa-2 Comparison With kannada film jogi

ಅಲ್ಲು ಅರ್ಜುನ್ ಟೀ ಗ್ಲಾಸ್ ಹಿಡಿದು ಹಾಕುವ ಸ್ಟೆಪ್, ಶೂ ಬೀಳಿಸಿ ಹಾಡುವ ಸ್ಟೆಪ್ ವೈರಲ್ ಆಗುತ್ತಿದೆ. ಪ್ರೀಕ್ವೆಲ್‌ನಲ್ಲಿ ಚಪ್ಪಲಿ ಬಿಟ್ಟು ಪುಷ್ಪರಾಜ್ ಹಾಕುವ ಸ್ಟೆಪ್ ವೈರಲ್ ಆಗಿತ್ತು. ಅದನ್ನೇ ಕೊಂಚ ಬದಲಿಸಿ ಶೂ ಡ್ರಾಪ್ ಸ್ಟೆಪ್ ಮಾಡಲಾಗಿದೆ. ಸದ್ಯ ಇದು ರೀಲ್ಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಸಾಕಷ್ಟು ಜನ ಕವರ್ ವರ್ಷನ್ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

'ಪುಷ್ಪ' ಚಿತ್ರದಲ್ಲಿ ಬಡಕುಟುಂಬದ ಯುವಕನಾಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರು. ಬಳಿಕ ರಕ್ತ ಚಂದನ ಸ್ಮಗ್ಲರ್ ಆಗುವ ಪಾತ್ರ ಅದು. ಹಾಗಾಗಿ ಅದಕ್ಕೆ ತಕ್ಕಂತೆ ಚೆಕ್ಸ್ ಶರ್ಟ್, ಖಾಕಿ ಶರ್ಟ್, ಜೀನ್ಸ್ ಪ್ಯಾಂಟ್ ಹೀಗೆ ವಿಭಿನ್ನ ರೀತಿಯ ಕಾಸ್ಟ್ಯೂಮ್‌ಗಳಲ್ಲಿ ಮಿಂಚಿದ್ದರು. ಇದೀಗ ಮಾಫಿಯಾ ಡಾನ್ ಆಗಿರುವ ಪುಷ್ಪರಾಜ್ ಲುಕ್, ಗೆಟಪ್ ಕಂಪ್ಲೀಟ್ ಚೇಂಜ್ ಆಗಿದೆ. ಚಿತ್ರ ವಿಚಿತ್ರ ಡಿಸೈನ್ ಶರ್ಟ್‌ಗಳಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ.

ಟೈಟಲ್ ಸಾಂಗ್ ಕೊನೆಯಲ್ಲಿ ಅಲ್ಲು ಅರ್ಜುನ್ ತೊಟ್ಟಿರುವ ಶರ್ಟ್ ಡಿಸೈನ್ ಬಗ್ಗೆ ಇದೀಗ ಕನ್ನಡ ಸಿನಿರಸಿಕರು ಕಾಮೆಂಟ್ ಮಾಡುತ್ತಿದ್ದಾರೆ. ಶರ್ಟ್‌ನಲ್ಲಿ ರಕ್ತ ಮೆತ್ತಿದ ಅಂಗೈ ಗುರುತು ಇರುವುದನ್ನು ನೋಡಬಹುದು. 'ಜೋಗಿ' ಚಿತ್ರದಲ್ಲಿ ಶಿವಣ್ಣ ತೊಟ್ಟಿದ್ದ ಟೀ ಶರ್ಟ್ ಮೇಲೆ ಇದೇ ರೀತಿಯ ಅಂಗೈ ಗುರುತು ಇರುವಂತೆ ಡಿಸೈನ್ ಮಾಡಲಾಗಿತ್ತು. ಆ ಶರ್ಟ್ ಡಿಸೈನ್ ಆಗ ಸಖತ್ ವೈರಲ್ ಆಗಿತ್ತು. ಅಂತಹ ಡಿಸೈನ್ ಇರುವ ಶರ್ಟ್‌ಗಳು ಮಾರುಕಟ್ಟಿಗೆ ಬಂದಿದ್ದವು.

ಸದ್ಯ 'ಪುಷ್ಪ' ಚಿತ್ರದಲ್ಲಿ 'ಜೋಗಿ' ಡಿಸೈನ್ ಕಾಪಿ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಮೀಮ್ಸ್ ಕ್ರಿಯೇಟ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಕನ್ನಡದ 'ಜೋಗಿ' ಚಿತ್ರದಿಂದ ಪ್ರೇರಣೆಗೊಂಡು ಸುಕುಮಾರ್ 'ಪುಷ್ಪ'-2 ಚಿತ್ರದಲ್ಲಿ ಇದನ್ನು ಬಳಸಿದ್ದಾರೆ ಎಂದು ಚರ್ಚೆ ಮಾಡಲಾಗುತ್ತಿದೆ. ಖುದ್ದು ನಿರ್ದೇಶಕ ಜೋಗಿ ಪ್ರೇಮ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎರಡೂ ಚಿತ್ರಗಳನ್ನು ಹೋಲಿಸಿ ಮಾಡಿದ್ದ ಮೀಮ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡು ಧನ್ಯವಾದ ಎನ್ನುವ ಎಮೋಜಿ ಹಾಕಿದ್ದಾರೆ.

More from Filmibeat

English summary
Is Allu Arjun's Pushpa-2 shirt design copy from Shivarajkumar Jogi film?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X