ಕನ್ನಡ ನಿರ್ಮಾಪಕರ ಪರ ಧ್ವನಿ ಎತ್ತಿದ ಪ್ರೇಮ್
Recommended Video

TheVillain : ನಿರ್ಮಾಪಕರಿಗಾಗಿ ಪ್ರೇಮ್ ಸಲ್ಲಿಸಿದ್ರು ಮನವಿ..! | Filmibeat Kannada
ನಿರ್ದೇಶಕ ಪ್ರೇಮ್ ಈ ತಿಂಗಳು ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಕಾರಣ ಅವರ ನಿರ್ದೇಶನದ 'ದಿ ವಿಲನ್' ಸಿನಿಮಾ ಇದೇ ತಿಂಗಳ 18ರಂದು ಬಿಡುಗಡೆಯಾಗುತ್ತಿದೆ.
ಚಿತ್ರದ ರಿಲೀಸ್ ವೇಳೆ ಪ್ರೇಮ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಂದು ಮನವಿ ಮಾಡಿದ್ದಾರೆ. ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನದ ಹಣದಲ್ಲಿ 50% ರಷ್ಟುನ್ನು ಆ ಸಿನಿಮಾದ ನಿರ್ಮಾಪಕರಿಗೆ ನೀಡಬೇಕು ಎಂದು ಪ್ರೇಮ್ ಅಂಡ್ ಟೀಂ ಕೇಳಿಕೊಂಡಿದೆ.

ಸದ್ಯ ಇರುವ ನಿಯಮದಿಂದ ದೊಡ್ಡ ಸಿನಿಮಾ ಮಾಡುವ ನಿರ್ಮಾಪಕರಿಗೆ ನಷ್ಟ ಆಗಲಿದ್ದು, ಶೇಕಡ 50 ರಷ್ಡು ಕಲೆಕ್ಷನ್ ಪ್ರೊಡೂಸರ್ ಗೆ ಸೇರಬೇಕು ಎಂಬುದು ಪ್ರೇಮ್ ಅವರ ನಿರ್ಧಾರವಾಗಿದೆ.
ಈ ಬಗ್ಗೆ ಮನವಿ ಪತ್ರ ಸ್ವೀಕರಿಸಿದ ಫಿಲ್ಮ್ ಛೇಂಬರ್ ಮಲ್ಟಿಪ್ಲೆಕ್ಸ್ ಜೊತೆಗೆ ಮಾತುಕತೆ ನಡೆಸಿ ನಂತರ ಸೋಮವಾರ ತನ್ನ ನಿರ್ಧಾರವನ್ನು ಪ್ರಕಟ ಮಾಡಲಿದೆ. ಹಾಗೆನಾದರೂ, ಈ ಹೊಸ ನಿಯಮ ಜಾರಿಗೆ ಬಂದರೆ ನಿರ್ಮಾಪಕರು ಒಂದಷ್ಟು ಲಾಭ ಕಾಣುತ್ತಾರೆ.
More from Filmibeat
English summary
Kannada director Prem request Karnataka Film Chamber Of Commerce to change the multiplex rules.


Click it and Unblock the Notifications











